ಕನ್ನಡ

ಧ್ಯಾನ 4: ಮಾನವಾವತಾರ ಮತ್ತು ಜನನ

William-Adolphe Bouguereau, ಸಾರ್ವಜನಿಕ ಸ್ವಾಮ್ಯ, Wikimedia Commons ಮೂಲಕ

ವೀಡಿಯೊ

ಸೂಚನೆ: ಧ್ಯಾನಗಳು 1-10 ಸಾಮಾನ್ಯ ಪರಿಚಯವನ್ನು ನೀಡುವುದು ಸಂತ ಫೌಸ್ತೀನಾ ಅವರ ದಿನಚರಿಗೆ ಮತ್ತು ದೈವಿಕ ಕರುಣೆಗೆ. ಧ್ಯಾನ 11ರಿಂದ ನಾವು ಅದರ ವಿಷಯವನ್ನು ಧ್ಯಾನಿಸಲು ಪ್ರಾರಂಭಿಸುತ್ತೇವೆ; ಅದಕ್ಕಾಗಿ ಉಲ್ಲೇಖಗಳನ್ನು ಪಡೆಯುವುದು ದಿನಚರಿಯಿಂದ. ಸದ್ಯಕ್ಕೆ, ಈ ಮೊದಲ 10 ದಿನಗಳಲ್ಲಿ, ವರ್ಷವಿಡೀ ಧ್ಯಾನಿಸಲಿರುವ ಈ ಹೊಸ ಭಕ್ತಿಯ ಕುರಿತ ನಿಮ್ಮ ಅರಿವಿಗೆ ಅಡಿಪಾಯ ಹಾಕಲು ಈ ಚಿಕ್ಕ ಪ್ರಾರಂಭಿಕ ಪರಿಚಯಾತ್ಮಕ ಧ್ಯಾನಗಳನ್ನು ಬಳಸಿಕೊಳ್ಳಿ. ಈ ಭಕ್ತಿಯ ಕೇಂದ್ರವು ದೈವಿಕ ಕರುಣೆಯಾಗಿದೆ.

ದೇವರ ನಿತ್ಯಪುತ್ರನು ಪೂಜ್ಯ ಕನ್ಯೆ ಮರಿಯಳ ಗರ್ಭದಲ್ಲಿ ಮಾನವ ಶರೀರವನ್ನು ಧರಿಸಿದಾಗ, ಮಾನವ ಸ್ವಭಾವವು ಶಾಶ್ವತವಾಗಿ ಬದಲಾಯಿತು. ಮಾನವಕುಲದೊಂದಿಗೆ ತಮ್ಮನ್ನು ಒಂದುಗೂಡಿಸಿಕೊಳ್ಳುವ ಮೂಲಕ ದೇವರು ನಮ್ಮ ಘನತೆಯನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಉನ್ನತಿಗೇರಿಸಿದರು. ಮಾನವಾವತಾರವು ದೇವರು ಮತ್ತು ಮಾನವರ ನಡುವೆ ಹೊಸ ಐಕ್ಯತೆಯನ್ನು ಸ್ಥಾಪಿಸಿತು; ಇದು ದೇವರು ತೋರಿದ ಪರಮ ಕರುಣೆಯ ಕಾರ್ಯವಾಗಿದೆ. 

ಹೊಸ ಜೀವದ ಮಹಾ ಅದ್ಭುತವನ್ನು ಇಂದು ಧ್ಯಾನಿಸಿ.  ಒಂದು ಪುಟ್ಟ ಮಗುವಿನ ಜನನದ ಬಗ್ಗೆ ಯೋಚಿಸಿ.  ಅನಂತರ ಈ ಪುಟ್ಟ, ಅಸಹಾಯಕ ಮಗುವೇ ವಿಶ್ವದ ಸೃಷ್ಟಿಕರ್ತನೂ ಲೋಕದ ರಕ್ಷಕನೂ ಆಗಿರುವುದನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ.  ದೇವರ ಕರುಣೆಯ ಎಂಥ ಉಡುಗೊರೆ ಇದು!

ಪ್ರಭುವೇ, ಪತನಗೊಂಡ ಮಾನವಕುಲದೊಂದಿಗೆ ನಿಮ್ಮನ್ನೇ ಒಂದುಗೂಡಿಸಿಕೊಂಡದ್ದಕ್ಕಾಗಿ ಆಳವಾದ ಕೃತಜ್ಞತೆಯಿಂದ ನಿಮಗೆ ವಂದಿಸುತ್ತೇನೆ. ಪಾಪಿಯಾದ ನನ್ನೊಂದಿಗೆ ನಿಮ್ಮನ್ನು ಒಂದುಗೂಡಿಸಿಕೊಂಡದ್ದಕ್ಕಾಗಿ ನಿಮಗೆ ವಂದಿಸುತ್ತೇನೆ. ನಿಮ್ಮ ಮಾನವಾವತಾರದ ಮೂಲಕ ನನಗೆ ದಯಪಾಲಿಸಲಾದ ಕರುಣೆಯನ್ನು ಕಂಡು ನಾನು ಸದಾ ಭಕ್ತಿಪೂರ್ವಕ ವಿಸ್ಮಯದಿಂದ ತುಂಬಿರಲಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಧ್ಯಾನಗಳು 1-10ರ ಪರಿಚಯವನ್ನು ಓದಿ

ಜನವರಿ 4 – ಪ್ರಭುವಿನ ಸಾಕ್ಷಾತ್ಕಾರ—ಮಹೋತ್ಸವ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು


ನೀವು ಹೊಸ ವರ್ಷಕ್ಕೆ ಸಿದ್ಧರಾಗಿದ್ದೀರಾ?

ದೈವಿಕ ಕರುಣೆಯ ದೈನಂದಿನ ಚಿಂತನೆಗಳು: ಸಂತ ಫೌಸ್ಟಿನಾರೊಂದಿಗೆ 365 ದಿನಗಳು ಆರಂಭವಾಗಿದೆ!  ದೇವರ ಕರುಣೆಯ ಈ ಹೊಸ ವರ್ಷವನ್ನು ನಾವು ಪ್ರವೇಶಿಸುತ್ತಿರುವಾಗ, ಈ ಪಯಣದಲ್ಲಿ ನಮ್ಮೊಂದಿಗೆ ಸೇರಲು ನಿಮ್ಮ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಆಹ್ವಾನಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತೇವೆ.  ಈ ಕೆಳಗಿನ ರೀತಿಯಲ್ಲಿ ನಮ್ಮೊಂದಿಗೆ ಸೇರಲು ಅವರನ್ನು ಆಹ್ವಾನಿಸಿ:

  1. ದೈನಂದಿನ ಇಮೇಲ್‌ಗಳಿಗಾಗಿ ನೋಂದಾಯಿಸಿಕೊಳ್ಳುವ ಮೂಲಕ
  2. ನಮ್ಮ ಕ್ಯಾಥೊಲಿಕ್ ಡೇಲಿ ರಿಫ್ಲೆಕ್ಷನ್ಸ್ ಆ್ಯಪ್ ಅನ್ನು ಸ್ಥಾಪಿಸಿಕೊಳ್ಳುವ ಮೂಲಕ
  3. ಪ್ರತಿದಿನ ನಮ್ಮ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ
  4. ದೈವಿಕ ಕರುಣೆಯ ಕುರಿತ ದೈನಂದಿನ ಚಿಂತನೆಗಳು ಪುಸ್ತಕವನ್ನು ಪೇಪರ್‌ಬ್ಯಾಕ್ ಅಥವಾ ಇ-ಪುಸ್ತಕ ರೂಪದಲ್ಲಿ ಖರೀದಿಸುವ ಮೂಲಕ

ಈ ಹೊಸ ವರ್ಷದಲ್ಲಿ ದೇವರ ಅಪಾರ ಕರುಣೆಯನ್ನು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ!

Amazon ನಲ್ಲಿ ಲಭ್ಯವಿದೆ