ಕನ್ನಡ

ಚಿಂತನೆ 102: ದೇವರು ದುರ್ಬಲರನ್ನು ಬಳಸಿಕೊಳ್ಳುತ್ತಾರೆ

ಪೋಲಿ ಮಗ, ಸಾಲ್ವತೋರ್ ರೋಸಾ ಅವರ ಕೃತಿ

ವೀಡಿಯೊ

ದೈವಿಕ ಕರುಣೆಯ ಭಾನುವಾರದ ಚಿಂತನೆಯನ್ನು ನೋಡಿ.

ನೀವು ದೇವರಾಗಿದ್ದರೆ ಮತ್ತು ಯಾವುದಾದರೂ ಮಹಿಮಾಭರಿತ ಕಾರ್ಯವನ್ನು ನೆರವೇರಿಸಲು ಬಯಸಿದರೆ, ಯಾರನ್ನು ಆರಿಸಿಕೊಳ್ಳುತ್ತಿದ್ದಿರಿ?  ಸ್ಪಷ್ಟವಾಗಿ ಗೋಚರಿಸುವ ಪ್ರತಿಭೆಗಳಿರುವ ಯಾರನ್ನಾದರೂ?  ಅಥವಾ ದುರ್ಬಲರೂ ವಿನಮ್ರರೂ ಆಗಿದ್ದು, ಸಹಜ ಪ್ರತಿಭೆಗಳು ಬಹಳ ಕಡಿಮೆ ಇರುವಂತೆ ಕಾಣುವ ಯಾರನ್ನಾದರೂ?  ಆಶ್ಚರ್ಯಕರವಾಗಿ, ದೇವರು ಅತ್ಯಂತ ಮಹತ್ತರವಾದ ಕಾರ್ಯಗಳಿಗಾಗಿ ಬಹುಮಟ್ಟಿಗೆ ದುರ್ಬಲರನ್ನೇ ಆರಿಸಿಕೊಳ್ಳುತ್ತಾರೆ.  ಅವರು ತಮ್ಮ ಸರ್ವಶಕ್ತಿಯನ್ನು ಪ್ರಕಟಿಸುವ ಒಂದು ವಿಧಾನ ಇದು (ನೋಡಿ ದಿನಚರಿ #464).

ನಿಮ್ಮ ಬಗ್ಗೆ ಮತ್ತು ನಿಮ್ಮ ಸಾಮರ್ಥ್ಯಗಳ ಬಗ್ಗೆ ನೀವು ಅತಿಯಾದ ಹೆಮ್ಮೆಯ ಭಾವನೆ ಹೊಂದಿದ್ದೀರೋ ಎಂದು ಇಂದು ಚಿಂತಿಸಿ.  ಹಾಗಿದ್ದರೆ, ಜಾಗರೂಕರಾಗಿರಿ. ಈ ರೀತಿಯಾಗಿ ಯೋಚಿಸುವವರನ್ನು ಬಳಸಿಕೊಳ್ಳುವುದು ದೇವರಿಗೆ ಕಷ್ಟವಾಗುತ್ತದೆ.  ನಿಮ್ಮ ಅಲ್ಪತೆಯನ್ನು ಅರಿತುಕೊಳ್ಳಲು ಪ್ರಯತ್ನಿಸಿ ಮತ್ತು ದೇವರ ಮಹಿಮೆಯ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿ.  ಮಹತ್ಕಾರ್ಯಗಳಿಗಾಗಿ ನಿಮ್ಮನ್ನು ಬಳಸಿಕೊಳ್ಳಲು ಅವರು ಬಯಸುತ್ತಾರೆ; ಆದರೆ ನಿಮ್ಮಲ್ಲಿ ಮತ್ತು ನಿಮ್ಮ ಮೂಲಕ ಕಾರ್ಯನಿರ್ವಹಿಸುವವರು ಅವರೇ ಆಗಿರಲು ನೀವು ಅವಕಾಶ ನೀಡಿದರೆ ಮಾತ್ರ.  ಆಗ ಮಹಿಮೆ ಅವರಿಗೆ ಸಲ್ಲುತ್ತದೆ; ಕಾರ್ಯವು ಅವರ ಪರಿಪೂರ್ಣ ಜ್ಞಾನಕ್ಕೆ ಅನುಸಾರವಾಗಿ ನೆರವೇರುತ್ತದೆ ಮತ್ತು ಅವರ ಅಪಾರ ಕರುಣೆಯ ಫಲವಾಗುತ್ತದೆ.

ಪ್ರಭುವೇ, ನಿಮ್ಮ ಸೇವೆಗಾಗಿ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ.  ನನ್ನ ದೌರ್ಬಲ್ಯವನ್ನೂ ಪಾಪವನ್ನೂ ಒಪ್ಪಿಕೊಂಡು, ಸದಾ ವಿನಮ್ರತೆಯಿಂದ ನಿಮ್ಮ ಬಳಿಗೆ ಬರಲು ನನಗೆ ಸಹಾಯಮಾಡಿ.  ಈ ವಿನಮ್ರ ಸ್ಥಿತಿಯಲ್ಲಿ, ನಿಮ್ಮ ಮಹಿಮೆಯೂ ಶಕ್ತಿಯೂ ಮಹತ್ಕಾರ್ಯಗಳನ್ನು ಮಾಡುವಂತೆ ದಯವಿಟ್ಟು ನನ್ನ ಮೂಲಕ ಪ್ರಕಾಶಿಸಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಏಪ್ರಿಲ್ 12 – ದೈವಿಕ ಕರುಣೆಯ ಭಾನುವಾರ (ವರ್ಷ A)

ಕರುಣೆಯ ಹಬ್ಬದ ಕುರಿತು ಯೇಸು ಸಂತ ಫೌಸ್ಟಿನಾರಿಗೆ ತಿಳಿಸಿದ ಇನ್ನಷ್ಟು ವಿಷಯಗಳು

ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು