ಮನನ 280: ದೇವರನ್ನು ಕಡೆಗಣಿಸುವುದು
ನೀವು ದೇವರನ್ನು ಕಡೆಗಣಿಸುತ್ತೀರಾ? ಹಾಗೆ ಮಾಡುವುದು ತೀರಾ ಸುಲಭ; ಆದ್ದರಿಂದಲೇ ಅದು ಸರ್ವಸಾಮಾನ್ಯವಾಗಿದೆ. ಅನೇಕ ಬಾರಿ, ದಿವ್ಯಪ್ರಸಾದವನ್ನು ಸ್ವೀಕರಿಸಿದ ನಂತರ ದೇವರನ್ನು ಕಡೆಗಣಿಸಲಾಗುತ್ತದೆ. ಅನೇಕರು ಅವರನ್ನು ಸ್ವೀಕರಿಸಲು ಮುಂದೆ ಬರುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ; ಆದರೆ ಹಾಗೆ ಮಾಡುವಾಗ ಅವರ ಮನಸ್ಸು ಅನೇಕ ವಿಷಯಗಳತ್ತ ಹರಿದಾಡುತ್ತಿರುತ್ತದೆ ಮತ್ತು ಇದರ ಪಾವಿತ್ರ್ಯದ ಕಡೆಗೆ ಅವರ ಗಮನ ತೀರಾ ಕಡಿಮೆಯಾಗಿರುತ್ತದೆ…