ಕನ್ನಡ

ಧ್ಯಾನ 1: “ಆ” ದೈವಿಕ ಕರುಣೆ

ಚಿತ್ರ: pexels.com ಮೂಲಕ

ವೀಡಿಯೊ

ಸೂಚನೆ: ಧ್ಯಾನಗಳು 1-10 ಸಾಮಾನ್ಯ ಪರಿಚಯವನ್ನು ನೀಡುವುದು ಸಂತ ಫೌಸ್ತೀನಾ ಅವರ ದಿನಚರಿಗೆ ಮತ್ತು ದೈವಿಕ ಕರುಣೆಗೆ. ಧ್ಯಾನ 11ರಿಂದ ನಾವು ಅದರ ವಿಷಯವನ್ನು ಧ್ಯಾನಿಸಲು ಪ್ರಾರಂಭಿಸುತ್ತೇವೆ; ಅದಕ್ಕಾಗಿ ಉಲ್ಲೇಖಗಳನ್ನು ಪಡೆಯುವುದು ದಿನಚರಿಯಿಂದ. ಸದ್ಯಕ್ಕೆ, ಈ ಮೊದಲ 10 ದಿನಗಳಲ್ಲಿ, ವರ್ಷವಿಡೀ ಧ್ಯಾನಿಸಲಿರುವ ಈ ಹೊಸ ಭಕ್ತಿಯ ಕುರಿತ ನಿಮ್ಮ ಅರಿವಿಗೆ ಅಡಿಪಾಯ ಹಾಕಲು ಈ ಚಿಕ್ಕ ಪ್ರಾರಂಭಿಕ ಪರಿಚಯಾತ್ಮಕ ಧ್ಯಾನಗಳನ್ನು ಬಳಸಿಕೊಳ್ಳಿ. ಈ ಭಕ್ತಿಯ ಕೇಂದ್ರವು ದೈವಿಕ ಕರುಣೆಯಾಗಿದೆ.

ದೈವಿಕ ಕರುಣೆಯ ಕುರಿತು ಮಾತನಾಡುವಾಗ, ದೇವರಿಂದ ಬರುವ ಈ ಕೊಡುಗೆಯನ್ನು ನಾವು “ಆ ದೈವಿಕ ಕರುಣೆ” ಎಂದು ಕರೆಯುತ್ತೇವೆ. “ಆ” ದೈವಿಕ ಕರುಣೆಯನ್ನು ಧ್ಯಾನಿಸುವ ಮೂಲಕ ನಮಗೆ ಎರಡು ವಿಷಯಗಳು ಇನ್ನಷ್ಟು ಸ್ಪಷ್ಟವಾಗುತ್ತವೆ:  ಮೊದಲನೆಯದಾಗಿ, ದೇವರ ದೈವಿಕ ಕರುಣೆಯು ನಿಜವಾದದ್ದು, ನಿಶ್ಚಿತವಾದದ್ದು ಮತ್ತು ಸ್ಪಷ್ಟವಾದದ್ದು. ಅದು ಯಾವುದೋ ಅಮೂರ್ತ ಕಲ್ಪನೆಯಲ್ಲ, ಬದಲಾಗಿ ನಾವು ಅರಿತುಕೊಂಡು ಅನುಭವಿಸಬೇಕಾದ ವಾಸ್ತವವಾಗಿದೆ.  ಎರಡನೆಯದಾಗಿ, ದೈವಿಕ ಕರುಣೆ ಒಂದೇ ಇದೆ. ಅದು ದೇವರ “ಆ” ಏಕೈಕ ಕೊಡುಗೆಯಾಗಿದೆ. ದೇವರು ನಮಗೆ ನೀಡಿರುವುದೆಲ್ಲವೂ ಒಂದು ಕೊಡುಗೆಯಾಗಿದೆ; ಈ ಕೊಡುಗೆಗಾಗಿ ನಾವು ಸದಾಕಾಲ ಕೃತಜ್ಞರಾಗಿರಬೇಕು.

ದೇವರ ದೈವಿಕ ಕರುಣೆಯನ್ನು ಧ್ಯಾನಿಸುವ ಮಹಿಮಾಮಯ ವರ್ಷವನ್ನಾಗಿ ಈ ವರ್ಷವನ್ನು ರೂಪಿಸಲು ಇಂದೇ ಶ್ರಮಿಸಿ.  ಈ ವರ್ಷ ದೇವರು ನಿಮಗಾಗಿ ಬಯಸುವ ಎಲ್ಲವನ್ನೂ ಸ್ವೀಕರಿಸಿ ಜೀವಿಸಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿ.

ಕರ್ತರೇ, ನೀವು ಹಗಲಿರುಳು ಸುರಿಸುವ ದೈವಿಕ ಕರುಣೆಗೆ ಗಮನಕೊಡಲು ನನಗೆ ಸಹಾಯಮಾಡಿ. ನಿಮ್ಮ ಕರುಣೆಯನ್ನು ಧ್ಯಾನಿಸುವ ಈ ವರ್ಷದಲ್ಲಿ, ಅದು ನನ್ನ ಜೀವನವನ್ನು ನಿಜವಾಗಿಯೂ ಆಳವಾಗಿಯೂ ಪರಿವರ್ತಿಸಲು ಅವಕಾಶಕೊಡುವಂತೆ ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಧ್ಯಾನಗಳು 1-10ರ ಪರಿಚಯವನ್ನು ಓದಿ

ಜನವರಿ 1 – ದೇವಮಾತೆ ಮರಿಯಮ್ಮನವರ ಮಹೋತ್ಸವ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು


ನೀವು ಹೊಸ ವರ್ಷಕ್ಕೆ ಸಿದ್ಧರಾಗಿದ್ದೀರಾ?

ದೈವಿಕ ಕರುಣೆಯ ಕುರಿತ ದೈನಂದಿನ ಧ್ಯಾನಗಳು: ಸಂತ ಫೌಸ್ತೀನಾ ಅವರೊಂದಿಗೆ 365 ದಿನಗಳು ಇಂದಿನಿಂದ ಪ್ರಾರಂಭವಾಗುತ್ತದೆ.  ದೇವರ ಕರುಣೆಯ ಈ ಹೊಸ ವರ್ಷಕ್ಕಾಗಿ ನಾವು ಸಿದ್ಧರಾಗುತ್ತಿರುವಾಗ, ಈ ಪಯಣದಲ್ಲಿ ನಮ್ಮೊಂದಿಗೆ ಸೇರಲು ಕುಟುಂಬದವರನ್ನೂ ಸ್ನೇಹಿತರನ್ನೂ ಆಹ್ವಾನಿಸುವಂತೆ ನಿಮ್ಮನ್ನು ಕೋರುತ್ತೇವೆ!  ಈ ಕೆಳಗಿನ ವಿಧಾನಗಳಲ್ಲಿ ನಮ್ಮೊಂದಿಗೆ ಸೇರಲು ಅವರನ್ನು ಆಹ್ವಾನಿಸಿ:

  1. ದೈನಂದಿನ ಇಮೇಲ್‌ಗಳಿಗಾಗಿ ನೋಂದಾಯಿಸಿಕೊಳ್ಳುವ ಮೂಲಕ
  2. ನಮ್ಮ ಕ್ಯಾಥೊಲಿಕ್ ಡೇಲಿ ರಿಫ್ಲೆಕ್ಷನ್ಸ್ ಆ್ಯಪ್ ಅನ್ನು ಸ್ಥಾಪಿಸಿಕೊಳ್ಳುವ ಮೂಲಕ
  3. ಪ್ರತಿದಿನ ನಮ್ಮ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ
  4. ದೈವಿಕ ಕರುಣೆಯ ಕುರಿತ ದೈನಂದಿನ ಚಿಂತನೆಗಳು ಪುಸ್ತಕವನ್ನು ಪೇಪರ್‌ಬ್ಯಾಕ್ ಅಥವಾ ಇ-ಪುಸ್ತಕ ರೂಪದಲ್ಲಿ ಖರೀದಿಸುವ ಮೂಲಕ

ಈ ಹೊಸ ವರ್ಷದಲ್ಲಿ ದೇವರ ಅಪಾರ ಕರುಣೆಯನ್ನು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ!