“ನಾಲ್ವರು ದೇವದೂತರೊಂದಿಗೆ ಕನ್ಯಾಮಾತೆ ಮತ್ತು ಬಾಲ ಯೇಸು” — ಚಿತ್ರಕಾರ: ಜೆರಾರ್ಡ್ ಡೇವಿಡ್
ಭರವಸೆಯಿಂದ ಪ್ರಾರ್ಥಿಸುತ್ತಾ ನಮ್ಮ ಧನ್ಯ ಮಾತೆಯ ಮೊರೆಹೋಗಿ. ಅವರು ನಿಮ್ಮನ್ನು ತಮ್ಮ ವಿಮಲ ಹೃದಯದ ಬಳಿಯಲ್ಲಿ ಇರಿಸಿಕೊಂಡು, ತಮ್ಮ ಪುತ್ರನಾದ ಯೇಸುವಿನ ಬಳಿಗೆ ನಡೆಸುವರು. ಅವರು ಪರಿಪೂರ್ಣ ತಾಯಿ, ಸಕಲ ಅನುಗ್ರಹಗಳ ಮಾತೆ. ಅವರ ಮಾತೃವಾತ್ಸಲ್ಯದ ಆರೈಕೆ ಮತ್ತು ಮಧ್ಯಸ್ಥಿಕೆಯಲ್ಲಿ ಭರವಸೆಯಿಡಿ. ತಮ್ಮ ಪುತ್ರನ ಕರುಣೆಯ ಅನುಗ್ರಹಗಳ ಬಾಗಿಲನ್ನು ಹೇಗೆ ತೆರೆಯಬೇಕೆಂದು ಅವರಿಗೆ ತಿಳಿದಿದೆ. ತಮ್ಮ ಪ್ರಿಯ ಮಗುವಾದ ನಿಮಗಾಗಿ ಹಾಗೆ ಮಾಡಲು ಅವರು ಹಂಬಲಿಸುತ್ತಾರೆ (ನೋಡಿ ದಿನಚರಿ #11).
ಇಂದು ಕರುಣೆಯ ಮಾತೆಯಾದ ಮರಿಯಮ್ಮನವರೊಂದಿಗಿನ ನಿಮ್ಮ ಸಂಬಂಧವನ್ನು ಪ್ರಾಮಾಣಿಕವಾಗಿ ಚಿಂತಿಸಿ. ಅವರ ಮಾತೃವಾತ್ಸಲ್ಯದ ಆರೈಕೆ ಮತ್ತು ಮಧ್ಯಸ್ಥಿಕೆಯಲ್ಲಿ ನಿಮಗೆ ಭರವಸೆಯಿದೆಯೇ? ನಮ್ಮ ಧನ್ಯ ಮಾತೆಯನ್ನು ನೀವು ಪೂರ್ಣಹೃದಯದಿಂದ ಪ್ರೀತಿಸದಿದ್ದರೆ ಮತ್ತು ಅವರ ತಾಯಿಯ ಆರೈಕೆಯಲ್ಲಿ ಸಂಪೂರ್ಣ ಭರವಸೆ ಇಡದಿದ್ದರೆ, ಅವರ ಆರೈಕೆಯ ಮೂಲಕ ದೇವರು ನಿಮಗೆ ನೀಡಲು ಬಯಸುವ ಎಲ್ಲ ಆಶೀರ್ವಾದಗಳಿಗೂ ನಿಮ್ಮ ಹೃದಯವನ್ನು ಇನ್ನಷ್ಟು ಪೂರ್ಣವಾಗಿ ತೆರೆಯಲು ಇಂದು ಸಮಯ ಮೀಸಲಿಡಿ. ಅವರ ಬಳಿಗೆ ಹೋಗಲು ಹೆದರಬೇಡಿ. ಅವರು ನಿಮಗೆ ತಮ್ಮ ಪುತ್ರನ ದಾರಿ ತೋರಿಸುವರು.
ಅತ್ಯಂತ ಪ್ರೀತಿಯ ತಾಯಿಯೇ, ನನ್ನ ರಾಣಿಯೇ. ಕರ್ತರು ತಮ್ಮ ಕರುಣೆಯ ಭಂಡಾರವನ್ನು ನಿನಗೆ ಒಪ್ಪಿಸಿದ್ದಾರೆ. ರಾಜಾಧಿರಾಜರು ನಿನ್ನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ತಮ್ಮ ಕರುಣೆಯ ಉಸ್ತುವಾರಿಯನ್ನು ನಿನಗೆ ನೀಡಿದ್ದಾರೆ. ನೀನು ನನಗೆ ನೀಡಲು ಬಯಸುವುದನ್ನು ಬೇಡುತ್ತಾ, ಇಂದೂ ಎಂದೆಂದಿಗೂ ನಾನು ನಿನ್ನ ಬಳಿಗೆ ಬರುವಂತಾಗಲಿ. ನಿನ್ನ ಪುತ್ರನ ದೈವಿಕ ಕರುಣೆಯನ್ನು ನನಗೆ ತಂದುಕೊಡುವುದಕ್ಕಾಗಿ ನಿನಗೆ ಧನ್ಯವಾದಗಳು. ಅತ್ಯಂತ ಪ್ರೀತಿಯ ತಾಯಿಯೇ, ನನಗಾಗಿ ಪ್ರಾರ್ಥಿಸು. ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.
ಜೀವಕ್ಕಾಗಿ ಒಂಬತ್ತು ದಿನಗಳ ನೊವೇನಾ
ಜನವರಿ 17 – ಈಜಿಪ್ಟಿನ ಸಂತ ಅಂತೋನಿ, ಮಠಾಧ್ಯಕ್ಷರು—ಸ್ಮರಣೆ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು




