ಕನ್ನಡ

ಚಿಂತನೆ 16: ದೇವರಿಗೆ ಸಂಪೂರ್ಣ ಆತ್ಮಸಮರ್ಪಣೆ

“ಭಾವಪರವಶತೆಯಲ್ಲಿ ಅಸ್ಸಿಸಿಯ ಫ್ರಾನ್ಸಿಸ್” — ಚಿತ್ರಕಾರ: ಕಾರವಾಜ್ಜೊ

ವೀಡಿಯೊ

ದೇವರ ಮುಂದೆ ಅಡ್ಡಬೀಳಿರಿ. ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿರಿ. ಸಾಧ್ಯವಾದರೆ, ದೈಹಿಕವಾಗಿಯೇ ಹಾಗೆ ಮಾಡಿರಿ. ಅದು ಇತರರ ಗಮನಕ್ಕೆ ಭಂಗ ತರುವುದಾದರೆ, ಅಂತರಂಗದಲ್ಲಿ ಹಾಗೆ ಮಾಡಿರಿ. ದೇವರ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು, ತಮ್ಮ ದೈವಿಕ ಕರುಣೆಯನ್ನೂ ಪರಮಪವಿತ್ರ ಚಿತ್ತವನ್ನೂ ನಿಮಗೆ ತೋರಿಸಬೇಕೆಂದು ಅವರನ್ನು ಬೇಡಿಕೊಳ್ಳಿರಿ.  ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಒಂದು ಅಥವಾ ಎರಡು ಸರಳ ಪ್ರಾರ್ಥನೆಗಳು ಸಾಕಾಗುವುದಿಲ್ಲ.  ನಮಗೆ ಬೇಕಾಗಿರುವುದು ದೇವರ ಮುಂದೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ.  ನಿಜಕ್ಕೂ ನಾವು ಪ್ರತಿದಿನವೂ ದಿನವಿಡೀ ಮಾಡಬೇಕಾದದ್ದು ಇದೇ.  ಆದರೆ ದೇವರಿಗೆ ಸಂಪೂರ್ಣ ಆತ್ಮಸಮರ್ಪಣೆಯ ಈ ಆಂತರಿಕ ಮನೋಭಾವವನ್ನು ಉಳಿಸಿಕೊಳ್ಳಲು, ನಾವು ಹೀಗೆ ನಿಸ್ಸೀಮವಾಗಿ ಮತ್ತು ಸಂಪೂರ್ಣವಾಗಿ ಶರಣಾಗುವ ನಿರ್ದಿಷ್ಟ ಕ್ಷಣಗಳು ನಮಗೆ ಅಗತ್ಯವಾಗಿವೆ (ನೋಡಿ ದಿನಚರಿ #9).

ಇಂದು, ನೀವು ಎಷ್ಟು ಆಳವಾಗಿ ಪ್ರಾರ್ಥಿಸುತ್ತೀರಿ ಎಂಬುದನ್ನು ಚಿಂತಿಸಿ.  ನೀವು ಆಗೊಮ್ಮೆ ಈಗೊಮ್ಮೆ ಕೆಲವು ಪ್ರಾರ್ಥನೆಗಳನ್ನು ಮಾತ್ರ ಮಾಡುತ್ತೀರಾ?  ಅಥವಾ ದೇವರಿಗೆ ನಿಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿ ಶರಣಾಗಲು ಪ್ರತಿ ವಾರವೂ ಸಮಯವನ್ನು ಮೀಸಲಿಡುತ್ತೀರಾ?  ಸಂಪೂರ್ಣ ಪ್ರೀತಿ ಮತ್ತು ಭರವಸೆಯಿಂದ ನಮ್ಮ ಮಹೋನ್ನತ ದೇವರ ಮುಂದೆ ನಿಮ್ಮ ಜೀವನವನ್ನು ಉದ್ದೇಶಪೂರ್ವಕವಾಗಿ ಅರ್ಪಿಸುತ್ತೀರಾ?  ಈ ಕುರಿತು ನಿಮಗೆ ಖಚಿತವಿಲ್ಲದಿದ್ದರೆ, ಇಂದೇ ಹಾಗೆ ಮಾಡಲು ನಿಶ್ಚಯಿಸಿಕೊಳ್ಳಿ.

ಪ್ರಭುವೇ, ನಾನು ನನ್ನನ್ನು ನಿಮ್ಮ ಕೈಗಳಿಗೆ ಸಮರ್ಪಿಸುತ್ತೇನೆ ಮತ್ತು ನಿಮ್ಮ ಪರಿಪೂರ್ಣ ಒಳ್ಳೆಯತನದಲ್ಲಿಯೂ ಕರುಣೆಯಲ್ಲಿಯೂ ಭರವಸೆಯಿಡುತ್ತೇನೆ.  ನಿಮ್ಮ ದಿವ್ಯ ಮಹಿಮೆಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಮತ್ತು ನಿಮ್ಮ ಪ್ರೀತಿಯ ಆರೈಕೆಗೆ ನನ್ನನ್ನು ಒಪ್ಪಿಸಿಕೊಡುತ್ತೇನೆ.  ಯೇಸುವೇ, ನಾನು ಸಂಪೂರ್ಣವಾಗಿ ನಿಮ್ಮವನು.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಜೀವಕ್ಕಾಗಿ ಒಂಬತ್ತು ದಿನಗಳ ನೊವೇನಾ

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರ ಸ್ಮರಣೆಗಳು/ಹಬ್ಬಗಳು