ಕನ್ನಡ

ಚಿಂತನೆ 49: ತಪ್ಪಾಗಿ ಅರ್ಥಮಾಡಿಕೊಳ್ಳಲ್ಪಡುವುದು

ಜೊವಾನ್ನಿ ಬೆಲ್ಲಿನಿ ರಚಿಸಿದ ಹುತಾತ್ಮ ಸಂತ ಪೇತ್ರರ ಹತ್ಯೆಯ ಚಿತ್ರ

ವೀಡಿಯೊ

ನಾವು ಸಂತರಾಗಲು ಕರೆಯಲ್ಪಟ್ಟಿದ್ದೇವೆ.  ಆ ಮಾರ್ಗದಲ್ಲಿ ನಾವು ನಡೆದರೆ, ವೀರೋಚಿತ ಸದ್ಗುಣದ ಜೀವನ ನಡೆಸಲು ಕರೆಯಲ್ಪಡುವೆವು.  ವೀರೋಚಿತ ಸದ್ಗುಣವನ್ನು ಇತರರು ಯಾವಾಗಲೂ ಅರ್ಥಮಾಡಿಕೊಳ್ಳುವುದಿಲ್ಲ.  ವಾಸ್ತವವಾಗಿ, ಲೌಕಿಕ ಜ್ಞಾನದ ದೃಷ್ಟಿಯಲ್ಲಿ ವೀರೋಚಿತವೂ ಪವಿತ್ರವೂ ಆದ ಸದ್ಗುಣವು ಮೂರ್ಖತನವಾಗಿದೆ.  ಆದರೆ ಲೌಕಿಕ “ಜ್ಞಾನದ” ಅಭಿಪ್ರಾಯಗಳು ನಮ್ಮನ್ನು ಗೊಂದಲಗೊಳಿಸಲು, ಪ್ರಲೋಭಿಸಲು ಅಥವಾ ನಿಜವಾದ ಸದ್ಗುಣದ ಮಾರ್ಗದಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ನಾವು ಬಿಡಬಾರದು (ನೋಡಿ ದಿನಚರಿ #126).

ನೀವು ಪವಿತ್ರ ಜೀವನ ನಡೆಸಲು ಶ್ರಮಿಸುತ್ತಿರುವುದರಿಂದ ಕೆಲವೊಮ್ಮೆ ಇತರರು ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆಯೇ?  ನಿಮ್ಮ ಅಂತಃಕರಣದಲ್ಲಿ ಕೇಳಿಬರುವ ದೇವರ ಸ್ವರಕ್ಕೆ ವಿರುದ್ಧವಾಗಿ ತೋರುವ ಒಂದಲ್ಲ ಒಂದು ಸಲಹೆಯನ್ನು ಇತರರು ನಿಮಗೆ ನೀಡುತ್ತಾರೆಯೇ?  ದೇವರು ನಿಮ್ಮನ್ನು ಕರೆಯುತ್ತಿರುವ ಸದ್ಗುಣದ ಮಾರ್ಗದ ಕುರಿತು ಚಿಂತಿಸಿ.  ನಾವು ಸ್ವೀಕರಿಸಲು ಕರೆಯಲ್ಪಟ್ಟಿರುವ ಸದ್ಗುಣ, ಕರುಣೆ ಮತ್ತು ಕ್ಷಮೆಯ ಮಾರ್ಗವನ್ನು ಲೋಕವು ಅರ್ಥಮಾಡಿಕೊಳ್ಳುವುದಿಲ್ಲ.  ಕೆಲವೊಮ್ಮೆ ನಾವು ಮೌನದಿಂದಲೂ ಭರವಸೆಯಿಂದಲೂ ಅನ್ಯಾಯವನ್ನು ಸಹಿಸಿಕೊಳ್ಳಬೇಕೆಂಬುದನ್ನು ಲೋಕವು ಅರ್ಥಮಾಡಿಕೊಳ್ಳುವುದಿಲ್ಲ.  ಕ್ರಿಸ್ತನಿಗಾಗಿ ನಾವು ಸಂಕಟ ಅನುಭವಿಸುವಾಗ ನಮಗಿರುವ ಆನಂದವನ್ನು ಲೋಕವು ಅರ್ಥಮಾಡಿಕೊಳ್ಳುವುದಿಲ್ಲ.  ನಿಮ್ಮ ಅಂತಃಕರಣದಲ್ಲಿ ನಿಮ್ಮೊಂದಿಗೆ ಮಾತನಾಡುವ ದೇವರ ಸ್ವರದ ಮೇಲೆಯೇ ನಿಮ್ಮ ಗಮನವಿರಲಿ; ಇತರರ ಅಥವಾ ಲೋಕದ ಅಭಿಪ್ರಾಯಗಳು ನಿಮ್ಮನ್ನು ದಾರಿತಪ್ಪಿಸಲು ಬಿಡಬೇಡಿ.

ಪ್ರಭುವೇ, ವೀರೋಚಿತ ಸದ್ಗುಣದ ಮಾರ್ಗದಲ್ಲಿ ನಡೆಯಲು ನನಗೆ ಸಹಾಯಮಾಡಿ.  ಕೆಲವೊಮ್ಮೆ ಈ ಮಾರ್ಗದಲ್ಲಿ ನಡೆಯುವುದರಿಂದ ಇತರರು ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವರು.  ಕೆಲವೊಮ್ಮೆ ಇತರರು ನಿಮ್ಮ ದಿವ್ಯ ಸ್ವರದಿಂದ ನಾನು ವಿಮುಖನಾಗುವಂತೆ ನನ್ನನ್ನು ಪ್ರಲೋಭಿಸುವರು.  ಪ್ರಿಯ ಪ್ರಭುವೇ, ಎಲ್ಲ ಸಮಯದಲ್ಲೂ ನಿಮ್ಮ ಸ್ವರವನ್ನು ಮಾತ್ರ ಆಲಿಸಲು ಮತ್ತು ನಿಮ್ಮ ಪರಮ ಪವಿತ್ರ ಚಿತ್ತಕ್ಕೆ ಮಾತ್ರ ವಿಧೇಯನಾಗಿರಲು ನನಗೆ ಸಹಾಯಮಾಡಿ.  ಕರುಣೆಯ ನಿಮ್ಮ ದಿವ್ಯ ಮಾರ್ಗಗಳನ್ನು ಸದಾ ಅನುಸರಿಸಲು ನನಗೆ ಜ್ಞಾನ, ಬಲ ಮತ್ತು ಧೈರ್ಯವನ್ನು ದಯಪಾಲಿಸಿ.  ಯೇಸುವೇ, ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಫೆಬ್ರವರಿ 18 – ವಿಭೂತಿ ಬುಧವಾರ

ಮೊದಲ ದಿನದ ಧ್ಯಾನಗಳು:
40 Days in the Desert & 40 Days at the Cross

 ದೈವಿಕ ಕರುಣೆಯ ಕುರಿತು ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು