ಒಳ್ಳೆಯ ಸಮಾರ್ಯನು. ರಚನೆ: Meester van de Barmhartige Samaritaan
“ಸಹಾನುಭೂತಿ” ಮತ್ತು “ಸಹಾನುಕಂಪ” ಇವುಗಳ ನಡುವೆ ವ್ಯತ್ಯಾಸವಿದೆಯೇ? ಇದ್ದರೆ, ಆ ವ್ಯತ್ಯಾಸವೇನು? ಮತ್ತು ಇವುಗಳಲ್ಲಿ ಹೆಚ್ಚು ಅಪೇಕ್ಷಣೀಯವಾದುದು ಯಾವುದು? ಸಹಾನುಭೂತಿ ಎಂದರೆ ಸರಳವಾಗಿ ಇನ್ನೊಬ್ಬರಿಗಾಗಿ ನಾವು ದುಃಖಪಡುವುದು. ಒಂದು ಅರ್ಥದಲ್ಲಿ, ನಾವು ಅವರ ಬಗ್ಗೆ ಮರುಕಪಡುತ್ತೇವೆ ಎಂದರ್ಥ. ಆದರೆ ಸಹಾನುಕಂಪವು ಇದಕ್ಕಿಂತ ಬಹಳ ಮುಂದಕ್ಕೆ ಹೋಗುತ್ತದೆ. ಅದರ ಅರ್ಥ ನಾವು ಅವರ ಕಷ್ಟಗಳಲ್ಲಿ ಪಾಲ್ಗೊಂಡು, ಅವರೊಂದಿಗೆ ಅವರ ಹೊರೆಯನ್ನು ಹೊರುತ್ತೇವೆ ಎಂಬುದು. ನಮ್ಮ ಪ್ರಭು ನಮ್ಮೊಂದಿಗೆ ಮತ್ತು ನಮಗಾಗಿ ಕಷ್ಟಪಟ್ಟಂತೆಯೇ ನಾವು ಅವರೊಂದಿಗೆ ಕಷ್ಟಪಡುತ್ತೇವೆ ಎಂದರ್ಥ. ಇತರರಿಗೆ ನಿಜವಾದ ಸಹಾನುಕಂಪವನ್ನು ತೋರಿಸಲು ಮತ್ತು ನಮಗೂ ಸಹಾನುಕಂಪವನ್ನು ತೋರಿಸುವಂತೆ ಅವರನ್ನು ಆಹ್ವಾನಿಸಲು ಮಾತ್ರ ನಾವು ಪ್ರಯತ್ನಿಸಬೇಕು (ನೋಡಿ ದಿನಚರಿ #279).
ನೀವು ಇದನ್ನು ಎಷ್ಟು ಚೆನ್ನಾಗಿ ಮಾಡುತ್ತೀರಿ? ನೀವು ಎಷ್ಟು ಚೆನ್ನಾಗಿ ನಿಜವಾದ ಸಹಾನುಕಂಪವನ್ನು ತೋರಿಸುತ್ತೀರಿ? ಇತರರ ನೋವನ್ನು ಕಂಡು, ಕ್ರಿಸ್ತನಲ್ಲಿ ಅವರನ್ನು ಪ್ರೋತ್ಸಾಹಿಸುತ್ತಾ ಅವರ ಜೊತೆಗಿರಲು ಪ್ರಯತ್ನಿಸುತ್ತೀರಾ? ಮತ್ತು ನೀವು ಕಷ್ಟಪಡುವಾಗ, ಇತರರ ಸಹಾನುಕಂಪವು ನಿಮ್ಮ ಆತ್ಮವನ್ನು ತುಂಬಲು ಅವಕಾಶ ಕೊಡುತ್ತೀರಾ? ಅವರ ಮೂಲಕ ದೇವರ ಕರುಣೆಯು ನಿಮ್ಮನ್ನು ತಲುಪಲು ಅವಕಾಶ ಕೊಡುತ್ತೀರಾ? ಅಥವಾ ನಿಮ್ಮ ಬಗ್ಗೆ ನೀವೇ ಮರುಕಪಡುವ ಬಲೆಗೆ ಬೀಳುತ್ತಾ, ಇತರರಿಂದ ಕೇವಲ ಮರುಕವನ್ನಷ್ಟೇ ಬಯಸುತ್ತೀರಾ? ಈ ಎರಡು ಗುಣಗಳ ನಡುವಿನ ವ್ಯತ್ಯಾಸವನ್ನು ಧ್ಯಾನಿಸಿ, ಎಲ್ಲರ ಬಗ್ಗೆ ನಿಜವಾದ ಸಹಾನುಕಂಪವುಳ್ಳ ಹೃದಯವನ್ನು ನಿಮಗೆ ನೀಡುವಂತೆ ನಮ್ಮ ಪ್ರಭುವನ್ನು ಬೇಡಿಕೊಳ್ಳಿ.
ಪ್ರಭುವೇ, ಕರುಣೆ ಮತ್ತು ಸಹಾನುಕಂಪದಿಂದ ತುಂಬಿದ ಹೃದಯವನ್ನು ದಯವಿಟ್ಟು ನನಗೆ ದಯಪಾಲಿಸಿರಿ. ಇತರರ ಅಗತ್ಯಗಳಿಗೆ ಗಮನಕೊಡಲು ಮತ್ತು ತಮ್ಮದೇ ದೈವಿಕ ಹೃದಯದಿಂದ ಅವರನ್ನು ತಲುಪಲು ನನಗೆ ಸಹಾಯಮಾಡಿರಿ. ಅಗತ್ಯದಲ್ಲಿರುವ ಎಲ್ಲರಿಗೂ ತಮ್ಮ ಗುಣಪಡಿಸುವ ಅನುಗ್ರಹವನ್ನು ತಲುಪಿಸಲು ನಾನು ಹಂಬಲಿಸುವಂತಾಗಲಿ. ನನ್ನ ಬಗ್ಗೆ ನಾನೇ ಮರುಕಪಡುವುದರಲ್ಲಿ ಎಂದಿಗೂ ಮುಳುಗದಿರಲಿ, ಅಥವಾ ಇತರರಿಂದ ಅಂಥ ಮರುಕವನ್ನು ಬಯಸದಿರಲಿ. ಬದಲಾಗಿ, ಇತರರ ಪ್ರೀತಿಯ ಮೂಲಕ ತಮ್ಮ ಹೃದಯವು ನನಗೆ ನೀಡಲು ಬಯಸುವ ಸಹಾನುಕಂಪವನ್ನು ಸ್ವೀಕರಿಸಲು ನಾನು ತೆರೆದ ಮನಸ್ಸುಳ್ಳವನಾಗಿರಲಿ. ಯೇಸುವೇ, ನಾನು ತಮ್ಮಲ್ಲಿ ಭರವಸೆಯಿಟ್ಟಿದ್ದೇನೆ.
ತಪಸ್ಸುಕಾಲದ ನಾಲ್ಕನೇ ಭಾನುವಾರದ ಧ್ಯಾನ:
ಮರುಭೂಮಿಯಲ್ಲಿ 40 ದಿನಗಳು
ಸಂತ ಜೋಸೆಫರಿಗೆ ನೊವೇನಾ. ಮಾರ್ಚ್ 10-18ರವರೆಗೆ ಪ್ರಾರ್ಥಿಸಲಾಗುತ್ತದೆ.
ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು




