ಕನ್ನಡ

ಧ್ಯಾನ 201: ಕಾರಾಗೃಹದಲ್ಲಿ ಯೇಸುವಿನೊಂದಿಗೆ ಕಳೆದ ರಾತ್ರಿ

ನಿಗೂಢವಾದ ರೀತಿಯಲ್ಲಿ ನೀವು ಹೇಗಾದರೂ ಪವಿತ್ರ ಗುರುವಾರದ ರಾತ್ರಿಗೆ ಕರೆದೊಯ್ಯಲ್ಪಟ್ಟರೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಿ.  ಯೇಸು ಅನುಭವಿಸಿದ ಎಲ್ಲವನ್ನೂ ನೀವು ಹೇಗಾದರೂ ನೋಡಲು ಮತ್ತು ಅನುಭವಿಸಲು ಸಾಧ್ಯವಾದರೆ ಹೇಗಿರಬಹುದೆಂದೂ ಕಲ್ಪಿಸಿಕೊಳ್ಳಿ.  ತೋಟದಲ್ಲಿನ ಪ್ರಾಣವೇದನೆ, ಅಪಹಾಸ್ಯ ಮತ್ತು ಕ್ರೂರ ವರ್ತನೆಯನ್ನು ಕಲ್ಪಿಸಿಕೊಳ್ಳಿ…

ಇನ್ನಷ್ಟು ಓದಿ

ಚಿಂತನೆ 200: ಪ್ರೀತಿ ಮತ್ತು ಯಾತನೆಯ ಏಕತೆ

ಪ್ರೀತಿ ಮತ್ತು ಯಾತನೆ ಪರಸ್ಪರ ವಿರುದ್ಧವಾಗಿವೆಯೇ?  ಬೇರೆ ಮಾತಿನಲ್ಲಿ ಹೇಳುವುದಾದರೆ, ನೀವು ಬಹಳ ಯಾತನೆಯನ್ನು ಅನುಭವಿಸುತ್ತಿದ್ದರೂ ನಿಮ್ಮಲ್ಲಿ ಅಪಾರ ಪ್ರೀತಿ ಇರಲು ಸಾಧ್ಯವೇ?  ಪರಿಗಣಿಸಬೇಕಾದ ಒಂದು ಪ್ರಶ್ನೆ ಇದು: ನಿಮ್ಮ ಯಾತನೆಯ ಮೂಲ ಯಾವುದು?  ಅದು ನಿಮ್ಮ ಪಾಪವೇ?  ಅದು ಮತ್ತೊಬ್ಬರ ಮೇಲಿನ ಸಹಾನುಭೂತಿಯೇ?  ಅದು ದೈಹಿಕ ಅಥವಾ ಮಾನಸಿಕ…

ಇನ್ನಷ್ಟು ಓದಿ

ಚಿಂತನೆ 199: ಯೇಸುವಿನೊಂದಿಗಿನ ಏಕತೆಯೇ ಇತರರೊಂದಿಗಿನ ಏಕತೆ

ಅನೇಕ ಕಾರಣಗಳಿಂದ ಧರ್ಮಸಭೆಯು ಮಹಿಮೆಯಿಂದ ಕೂಡಿದೆ.  ಧರ್ಮಸಭೆಯ ಒಂದು ಮಹಿಮಾಮಯ ಅಂಶವೆಂದರೆ ಅದರೊಳಗೆ ಕಂಡುಬರುವ ಏಕತೆ.  ಕೆಲವೊಮ್ಮೆ ಅದರೊಳಗೆ ಬಹಳಷ್ಟು ಒಡಕು, ನೋವು ಮತ್ತು ಎಲ್ಲ ಬಗೆಯ ಅವ್ಯವಸ್ಥೆ ಇರುತ್ತವೆ ಎಂಬುದು ನಿಜ.  ಆದರೆ ಇವು ಧರ್ಮಸಭೆಯ ಗುಣಲಕ್ಷಣಗಳಲ್ಲ.  ಇವು ಪಾಪಗಳ ಪರಿಣಾಮಗಳು…

ಇನ್ನಷ್ಟು ಓದಿ

ಚಿಂತನೆ 198: ನಿಜವಾದ ಸಹಾನುಭೂತಿಯ ಕರುಣೆ

ನಿಜವಾದ ಹೃತ್ಪೂರ್ವಕ ಸಹಾನುಭೂತಿಯ ಕೊರತೆಯು ಒಂದು ರೀತಿಯ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಸ್ವಸ್ಥತೆಯ ಸ್ಪಷ್ಟ ಲಕ್ಷಣವಾಗಿದೆ.  ಇದನ್ನು ಹೇಳುತ್ತಿರುವುದು, ಇದಕ್ಕೆ ವಿರುದ್ಧವಾದುದೂ ಸತ್ಯವಾಗಿರುವುದರಿಂದಲೇ.  ನಿಜವಾದ ಹೃತ್ಪೂರ್ವಕ ಸಹಾನುಭೂತಿ ಇರುವುದು, ಒಬ್ಬ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ…

ಇನ್ನಷ್ಟು ಓದಿ

ಧ್ಯಾನ 197: ನನಗೆ ದಾಹವಾಗಿದೆ

“ನನಗೆ ದಾಹವಾಗಿದೆ.”  ಈ ಎರಡು ಸರಳ ಪದಗಳಲ್ಲಿ ಎಷ್ಟೋ ಅರ್ಥವಿದೆ.  ನಮ್ಮ ಪ್ರಭು ಶಿಲುಬೆಯಿಂದ ಈ ಮಾತುಗಳನ್ನು ಹೇಳಿದರು.  ಒಬ್ಬ ಸೈನಿಕನು ಅವರ ದಾಹವನ್ನು ತಣಿಸಲು ದ್ರಾಕ್ಷಾರಸದ ಹುಳಿಯಲ್ಲಿ ನೆನೆಸಿದ ಸ್ಪಂಜನ್ನು ಅವರಿಗೆ ನೀಡಿ, ಸ್ವಲ್ಪ ಸಾಂತ್ವನ ನೀಡಲು ಪ್ರಯತ್ನಿಸಿದನು.  ಹುಳಿಯಾಗಿ ಮಾರ್ಪಟ್ಟ ದ್ರಾಕ್ಷಾರಸವು ಕೆಟ್ಟುಹೋದ ಆತ್ಮದ ಸಂಕೇತವಾಗಿದೆ…

ಇನ್ನಷ್ಟು ಓದಿ

ಚಿಂತನೆ 196: ಇತರರಲ್ಲಿ ಯೇಸುವನ್ನು ಪ್ರೀತಿಸುವುದು

“ನನ್ನ ಸಹೋದರರಲ್ಲಿ ಅತ್ಯಲ್ಪನಾದವನಿಗೆ ನೀವು ಏನನ್ನೇ ಮಾಡಿದರೂ, ಅದನ್ನು ನನಗೇ ಮಾಡುತ್ತೀರಿ” (ಮತ್ತಾಯ 25:40) ಎಂಬ ಸುವಾರ್ತೆಯ ವಾಕ್ಯ ನಮಗೆ ಚೆನ್ನಾಗಿ ಪರಿಚಿತವಾಗಿದೆ.  ಆದರೆ ನೀವು ಇದನ್ನು ನಂಬುತ್ತೀರಾ?  ನೀವು ನಂಬಿದರೆ, ಯೇಸುವನ್ನು ಪ್ರೀತಿಸುವುದು ಸುಲಭವೆಂದೂ, ಹಾಗೆ ಮಾಡಲು ನಿಮಗೆ ದಿನವೆಲ್ಲ…

ಇನ್ನಷ್ಟು ಓದಿ

ಚಿಂತನೆ 195: ನಮ್ಮ ಮಧುರ ಆನಂದ

ನೀವು ದ್ರಾಕ್ಷಾರಸವನ್ನು ಸವಿದು ಅದರ ಗುಣಮಟ್ಟವನ್ನು ಗುರುತಿಸುವುದರಲ್ಲಿ ಪರಿಣತರಾಗಿದ್ದು, ಅತ್ಯುತ್ತಮ ದ್ರಾಕ್ಷಾರಸದ ಒಂದು ಬಾಟಲಿ ಮತ್ತು ಅಗ್ಗದ ದ್ರಾಕ್ಷಾರಸದ ಒಂದು ಬಾಟಲಿಯ ನಡುವೆ ಆಯ್ಕೆ ಮಾಡಬೇಕಾಗಿದ್ದರೆ, ನಿಸ್ಸಂದೇಹವಾಗಿ ಅತ್ಯುತ್ತಮವಾದದ್ದನ್ನೇ ಆರಿಸಿಕೊಳ್ಳುತ್ತೀರಿ.  ಅವುಗಳ ನಡುವಿನ ವ್ಯತ್ಯಾಸ ನಿಮಗೆ ತಿಳಿದಿರುತ್ತದೆ ಮತ್ತು ಅಗ್ಗದ ದ್ರಾಕ್ಷಾರಸದಲ್ಲಿ ನಿಮಗೆ ಹೆಚ್ಚಿನ ಆನಂದ ಸಿಗುವುದಿಲ್ಲ, ಏಕೆಂದರೆ ನಿಮಗೆ ತಿಳಿದಿರುತ್ತದೆ…

ಇನ್ನಷ್ಟು ಓದಿ

ಚಿಂತನೆ 194: ಜೀವನದಲ್ಲಿ ಸಂತೃಪ್ತಿ

ಜೀವನದಲ್ಲಿ ನಿಮಗೆ ಸಂತೃಪ್ತಿಯನ್ನು ನೀಡುವುದು ಯಾವುದು?  ಈ ಪ್ರಶ್ನೆಗೆ ಒಬ್ಬೊಬ್ಬರ ಉತ್ತರವೂ ತುಂಬ ಭಿನ್ನವಾಗಿರಬಹುದು.  ಒಬ್ಬರು ಕೆಲಸದಲ್ಲಿ ಸಂತೃಪ್ತಿಯನ್ನು ಕಂಡುಕೊಂಡರೆ, ಮತ್ತೊಬ್ಬರು ಕುಟುಂಬದ ಚಟುವಟಿಕೆಗಳಲ್ಲಿ, ಇನ್ನೊಬ್ಬರು ಸಮುದಾಯ ಸೇವೆಯಲ್ಲಿ, ಮತ್ತೊಬ್ಬರು ಸಂಪತ್ತು ಮತ್ತು ಲೌಕಿಕ ಪ್ರತಿಫಲಗಳಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳಬಹುದು.  ಅನೇಕ ಬಗೆಯ ಉತ್ತರಗಳು…

ಇನ್ನಷ್ಟು ಓದಿ

ಧ್ಯಾನ 193: ಹಿಂಜರಿಯಬೇಡಿ

ನೀವು ಹತ್ತು ಲಕ್ಷ ಡಾಲರ್ ಗೆದ್ದರೆ, “ಬೇಡ, ನನಗೆ ಕೇವಲ $100 ಕೊಡಿ, ನನಗೆ ಬೇಕಾಗಿರುವುದು ಅಷ್ಟೇ” ಎಂದು ಬಹುಶಃ ಹೇಳುವುದಿಲ್ಲ.  ಆದರೂ ದೇವರ ಕರುಣೆಯ ವಿಷಯದಲ್ಲಿ ನಾವು ಅನೇಕ ಬಾರಿ ಮಾಡುವುದೂ ಇದನ್ನೇ.  ದೇವರು ಅಪಾರ ಸಂಪತ್ತನ್ನು ನೀಡುತ್ತಾರೆ; ಆದರೆ ನಾವು ಅದರ ಒಂದು ಸಣ್ಣ ಭಾಗವನ್ನು ಮಾತ್ರ ತೆಗೆದುಕೊಳ್ಳಲು ನಿರ್ಧರಿಸುತ್ತೇವೆ.  ಏಕೆ ಹೀಗೆ?  ಅವರ ಕರುಣೆಗೆ ಮಿತಿಯಿಲ್ಲ.  ಅದು ಅನಂತವಾದದ್ದು.  ನಾವು…

ಇನ್ನಷ್ಟು ಓದಿ

ಧ್ಯಾನ 192: ಸುಖದಲ್ಲೂ ದುಃಖದಲ್ಲೂ ದೇವರನ್ನು ಪ್ರೀತಿಸುವುದು

ಎಲ್ಲವೂ ಚೆನ್ನಾಗಿರುವಾಗ ದೇವರನ್ನು “ಪ್ರೀತಿಸುವುದು” ಸುಲಭ.  ಆದರೆ ಎಲ್ಲವೂ ಚೆನ್ನಾಗಿರುವಾಗ ನಮ್ಮ ಪ್ರೀತಿಯು ಪರೀಕ್ಷೆಗೆ ಒಳಗಾಗುವುದಿಲ್ಲ.  ಮಾನವ ಯಾತನೆಯಿಂದ ಬರುವ ಪರೀಕ್ಷೆಯು ದೇವರ ಮೇಲಿನ ನಮ್ಮ ಪ್ರೀತಿಯನ್ನು ಸ್ಪಷ್ಟಪಡಿಸುತ್ತದೆ.  ಇದು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಬಹಳ ಫಲಪ್ರದವಾಗಬಲ್ಲದು.  ಜೀವನದ ಕಷ್ಟಗಳು ಕೇವಲ…

ಇನ್ನಷ್ಟು ಓದಿ