ಕನ್ನಡ

ಚಿಂತನೆ 306: ದೇವರು ಎಂದಿಗೂ ಪಟ್ಟು ಬಿಡುವುದಿಲ್ಲ

ದೇವರ ಪ್ರೀತಿಯನ್ನು ನೀವು ಸಂದೇಹಿಸುತ್ತೀರಾ?  ಸತ್ಯವೇನೆಂದರೆ, ದೇವರು ನಿಮ್ಮನ್ನು ಹುಡುಕುವುದರಲ್ಲಿ ಎಂದಿಗೂ ಪಟ್ಟು ಬಿಡುವುದಿಲ್ಲ.  ನಮ್ಮ ಪಾವಿತ್ರ್ಯದ ಬಹುಭಾಗವು ನಮ್ಮ ಮೇಲೆ ಅವಲಂಬಿತವಾಗಿದ್ದರೂ, ಅದರ ಬಹುಪಾಲು ದೇವರ ಮೇಲೆ ಅವಲಂಬಿತವಾಗಿದೆ.  ಈ ಭೂಮಿಯ ಮೇಲಿನ ನಿಮ್ಮ ಜೀವನದುದ್ದಕ್ಕೂ, ದೇವರು ನಿಮ್ಮನ್ನು ಹುಡುಕುವುದನ್ನೂ ನಿಮ್ಮ ಮನಪರಿವರ್ತನೆಯನ್ನು ಬಯಸುವುದನ್ನೂ ಎಂದಿಗೂ ನಿಲ್ಲಿಸುವುದಿಲ್ಲ.  ಅವರು ತಮ್ಮ ಕರುಣೆಯನ್ನು…

ಚಿಂತನೆ 285: “ಪ್ರಕಾಶದ ದೂತ”ನ ರೂಪದಲ್ಲಿ ವಂಚನೆ

ದುಷ್ಟನು ನಿಮ್ಮನ್ನು ತೀವ್ರವಾಗಿ ದ್ವೇಷಿಸುತ್ತಾನೆ.  ನೀವು ದೇವರ ದೈವಿಕ ಚಿತ್ತವನ್ನು ನೆರವೇರಿಸುತ್ತಾ ಅವರಿಗೆ ಹೆಚ್ಚು ಹತ್ತಿರವಾದಷ್ಟೂ, ಅವನು ನಿಮ್ಮ ಮೇಲೆ ಆಕ್ರಮಣ ಮಾಡಲು ಹೆಚ್ಚು ಪ್ರಯತ್ನಿಸುತ್ತಾನೆ.  ಈ ಪುಟ್ಟ ನಾಯಿಯ ಬೊಗಳುವಿಕೆಗೆ ಹೆದರಬೇಡಿ.  ದುಷ್ಟನು ನಿಮ್ಮನ್ನು ವಂಚಿಸಲು ಹೆಚ್ಚಾಗಿ ಬಳಸುವ ವಿಧಾನಗಳಲ್ಲಿ ಒಂದು, ತನ್ನನ್ನು ಪ್ರಕಾಶದ ದೂತನಾಗಿ ತೋರಿಸಿಕೊಳ್ಳುವುದು.  ಅವನು ಇದನ್ನು…

ಚಿಂತನೆ 269: ಕರುಣೆ ಮತ್ತು ದೈನ್ಯ—ಎರಡರತ್ತಲೂ ಒಂದು ನೋಟ

ದೃಷ್ಟಿ ನೆಟ್ಟು ನೋಡಲು ನೀವು ಎರಡು ಸಂಗತಿಗಳನ್ನು ಆರಿಸಬಹುದಾದರೆ, ಅವು ಯಾವುವಾಗಿರುತ್ತವೆ?  ನಿಜಕ್ಕೂ, ದೃಷ್ಟಿ ನೆಟ್ಟು ನೋಡಬೇಕಾದ ಅತ್ಯಂತ ಮಹತ್ವದ ಎರಡು ಸಂಗತಿಗಳೆಂದರೆ ದೇವರ ಕರುಣೆ ಮತ್ತು ನಿಮ್ಮ ಸ್ವಂತ ದೈನ್ಯ.  ದೇವರ ಕರುಣೆಯು ದೃಷ್ಟಿ ನೆಟ್ಟು ನೋಡಬೇಕಾದ ಅತ್ಯಂತ ಮುಖ್ಯವಾದ ಸಂಗತಿಗಳಲ್ಲಿ ಒಂದಾಗಿದೆ ಎಂಬುದು ಬಹುಶಃ ನಿಮಗೆ ತಕ್ಷಣವೇ ಅರ್ಥವಾಗುತ್ತದೆ…

ಚಿಂತನೆ 238: ಕತ್ತಲೆಯ ಸಮಯದಲ್ಲಿ ನಿಷ್ಠೆ

ಸಂತ ಫೌಸ್ತೀನಾ ಮತ್ತು ಇತರ ಅನೇಕ ಮಹಾನ್ ಸಂತರು, ಶಿಲುಬೆಯ ಸಂತ ಯೋವಾನ್ನರು “ಆತ್ಮದ ಕತ್ತಲ ರಾತ್ರಿ” ಮತ್ತು “ಆಧ್ಯಾತ್ಮಿಕ ಕತ್ತಲ ರಾತ್ರಿ” ಎಂದು ವ್ಯಾಖ್ಯಾನಿಸಿದ ವಿಶಿಷ್ಟ ಆಧ್ಯಾತ್ಮಿಕ ಕತ್ತಲೆಯನ್ನು ಪ್ರವೇಶಿಸಿದರೂ, ನಾವೆಲ್ಲರೂ ಯಾವುದೋ ಒಂದು ರೂಪದಲ್ಲಿ ಅಥವಾ…

ಚಿಂತನೆ 162: ಬೆಳಕು ಕತ್ತಲೆಯನ್ನು ಹೋಗಲಾಡಿಸುತ್ತದೆ

ಬೆಳಕು ಕತ್ತಲೆಯನ್ನು ಹೋಗಲಾಡಿಸುತ್ತದೆ.  ವೈಜ್ಞಾನಿಕವಾಗಿ ಹೇಳುವುದಾದರೆ, ಬೆಳಕು ಮತ್ತು ಕತ್ತಲೆ ಪರಸ್ಪರ ವಿರೋಧಿ ಶಕ್ತಿಗಳಲ್ಲ ಎಂಬುದು ನಮಗೆ ತಿಳಿದಿದೆ; ಬದಲಾಗಿ, ಕತ್ತಲೆ ಎಂದರೆ ಬೆಳಕಿನ ಅಭಾವ.  ಬೆಳಕು ಒಳಗೆ ಬಂದಾಗ ಕತ್ತಲೆ ಇರುವುದಿಲ್ಲ.  ದೇವರ ಕರುಣೆಯ ವಿಷಯದಲ್ಲಿಯೂ ಹೀಗೆಯೇ.  ಕರುಣೆಯಿಲ್ಲದೆ ನಮ್ಮ ಆತ್ಮಗಳು ಕತ್ತಲೆಯಲ್ಲಿರುತ್ತವೆ.  ನಾವು ಸಂದೇಹ, ಗೊಂದಲಕ್ಕೆ ಒಳಗಾಗುತ್ತೇವೆ…

ಧ್ಯಾನ 143: ಭರವಸೆ, ಭರವಸೆ ಮತ್ತು ಇನ್ನಷ್ಟು ಭರವಸೆ

ಈ ಪುಸ್ತಕದ ಪ್ರತಿಯೊಂದು ಧ್ಯಾನವೂ ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುತ್ತದೆ ಮತ್ತು ಪ್ರತಿಯೊಂದು ಪ್ರಾರ್ಥನೆಯೂ “ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ” ಎಂಬ ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುತ್ತದೆ.  ಆದರೆ ನಿಜವಾಗಿಯೂ ನೀವು ಭರವಸೆಯಿಟ್ಟಿದ್ದೀರಾ?  ಭರವಸೆಯಿಡುವುದು ಕೇವಲ ಒಂದು ಬಾರಿಯ ಕ್ರಿಯೆಯಲ್ಲ.  ಅದು ನಾವು ಮಾಡುತ್ತೇವೆ ಅಥವಾ ಮಾಡುವುದಿಲ್ಲ ಎಂದು ಹೇಳುವಂತಹ ವಿಷಯವಲ್ಲ.  ನಾವು ನಿರಂತರವಾಗಿ ಇನ್ನಷ್ಟು ಆಳವಾಗಿ ಭರವಸೆಯಿಡುತ್ತಾ ಹೋಗಬೇಕು.  ನಾವು ಯಾವ ಭರವಸೆಗೆ ಕರೆಯಲ್ಪಟ್ಟಿದ್ದೇವೆಯೋ ಅದರ ಆಳಕ್ಕೆ ಮಿತಿಯೇ ಇಲ್ಲ…

ಚಿಂತನೆ 111: ದುಷ್ಟನ ಸುಳ್ಳುಗಳು

ಪಿಶಾಚನು ನಮ್ಮನ್ನು ಅನೇಕ ರೀತಿಗಳಲ್ಲಿ ಪ್ರಲೋಭಿಸುತ್ತಾನೆ.  ನಾವು ಪಾಪನಿವೇದನೆಯಲ್ಲಿ ಒಪ್ಪಿಕೊಂಡ ಪಾಪಗಳನ್ನೂ ಒಳಗೊಂಡಂತೆ ನಮ್ಮ ಪಾಪಗಳನ್ನು ನೆನಪಿಗೆ ತರುವುದು, ನಮ್ಮ ಮೇಲೆ ಆಕ್ರಮಣ ಮಾಡಲು ಪಿಶಾಚನು ಇಷ್ಟಪಡುವ ಒಂದು ಸಾಮಾನ್ಯ ವಿಧಾನವಾಗಿದೆ.  ನಾವು ತಪ್ಪು ದಾರಿಯಲ್ಲಿದ್ದೇವೆ, ನಾವು ದೇವರಿಗೆ ಮೆಚ್ಚುಗೆಯಾಗಿಲ್ಲ, ನಾವು ಸುಳ್ಳುಗಾರರು ಮತ್ತು ಪಾಪಿಗಳು ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುವುದರಲ್ಲಿ ಅವನು ಆನಂದಿಸುತ್ತಾನೆ.  ಮತ್ತು…

ಧ್ಯಾನ 109: ದೇವರ ತೋಳುಗಳು

ಮಗುವಿಗೆ ಭಯವಾದಾಗ ಅಥವಾ ಗಾಯವಾದಾಗ, ಅದಕ್ಕೆ ಸಹಜವಾಗಿ ಸಾಂತ್ವನ ಸಿಗುವ ತಾಣವೆಂದರೆ ತಂದೆ ಅಥವಾ ತಾಯಿಯ ತೋಳುಗಳು.  ಅಳುತ್ತಿರುವ ಮಗು ಮೊದಲು ಹುಡುಕುವುದು ಇದನ್ನೇ.  ನಮ್ಮ ವಿಷಯದಲ್ಲಿಯೂ ಹೀಗೆಯೇ ಆಗಬೇಕು.  ನಮಗೆ ನೆರವು ಬೇಕಾದಾಗ ನಾವು ಪರಲೋಕದಲ್ಲಿರುವ ನಮ್ಮ ತಂದೆಯ ಹಾಗೂ ನಮ್ಮ ರಕ್ಷಕರಾದ ಯೇಸುವಿನ ತೋಳುಗಳತ್ತ ಓಡಬೇಕು.  ನಾವು…

ಚಿಂತನೆ 88: ಪರಿವರ್ತಿತ ಆಂತರಿಕ ಯಾತನೆ

ಅನೇಕ ಜನರು ತಮ್ಮ ಅಂತರಾಳದಲ್ಲಿ ಬಹಳ ಭಾರವಾದ ಹೊರೆಗಳನ್ನು ಹೊತ್ತಿರುತ್ತಾರೆ.  ಹೊರನೋಟಕ್ಕೆ ಅವರು ಆನಂದ ಮತ್ತು ಶಾಂತಿಯಿಂದ ಕಂಗೊಳಿಸಬಹುದು.  ಆದರೆ ಅವರ ಅಂತರಾಳದಲ್ಲಿ ತೀವ್ರ ನೋವೂ ಇರಬಹುದು.  ನಾವು ಕ್ರಿಸ್ತನನ್ನು ಅನುಸರಿಸುವಾಗ, ನಮ್ಮ ಆಂತರಿಕ ಮತ್ತು ಬಾಹ್ಯ ಜೀವನದ ಈ ಎರಡು ಅನುಭವಗಳು ಪರಸ್ಪರ ವಿರುದ್ಧವಾಗಿರುವುದಿಲ್ಲ.  ಅನೇಕ ಬಾರಿ…

ಚಿಂತನೆ 66: ಕರುಣೆಯ ಮೂಲಕ ನ್ಯಾಯ

ಕೆಲವರು ದಿನನಿತ್ಯ ಇನ್ನೊಬ್ಬರ ಕಠೋರತೆ ಮತ್ತು ಕ್ರೌರ್ಯವನ್ನು ಅನುಭವಿಸುತ್ತಾರೆ. ಇದು ಬಹಳ ನೋವುಂಟುಮಾಡುತ್ತದೆ. ಇದರ ಪರಿಣಾಮವಾಗಿ, ನೋವುಂಟುಮಾಡುವ ವ್ಯಕ್ತಿಯನ್ನು ಹೊಣೆಗಾರನನ್ನಾಗಿಸಬೇಕೆಂದು ನ್ಯಾಯಕ್ಕಾಗಿ ಬಲವಾದ ಹಂಬಲ ಉಂಟಾಗಬಹುದು. ಆದರೆ ನಿಜವಾದ ಪ್ರಶ್ನೆ ಇದು: ಪ್ರಭು ನನ್ನನ್ನು ಏನು ಮಾಡಲು ಕರೆಯುತ್ತಿದ್ದಾರೆ? ನಾನು ಹೇಗೆ…