ಕನ್ನಡ

ಚಿಂತನೆ 206: ಆಧ್ಯಾತ್ಮಿಕ ಸಂಗ್ರಹದಾಹ

ಆಧ್ಯಾತ್ಮಿಕ ಜೀವನಕ್ಕಿರುವ ಒಂದು ನಿಜವಾದ ಅಪಾಯವನ್ನು “ಆಧ್ಯಾತ್ಮಿಕ ಸಂಗ್ರಹದಾಹ” ಎಂದು ಕರೆಯಬಹುದು.  ದೇವರ ಕರುಣೆಯ ಸಾಧನವಾಗುವ ಬದಲು, ತಾವೇ ದೇವರ ಕರುಣೆಯ ಅಂತಿಮ ಗುರಿಯಾಗಲು ಪ್ರಯತ್ನಿಸುವ ವ್ಯಕ್ತಿಯಲ್ಲಿ ಇದು ಕಂಡುಬರುತ್ತದೆ.  ದೇವರ ಕರುಣೆಯ ಅಂತಿಮ ಗುರಿಯಾಗಲು ಪ್ರಯತ್ನಿಸುವ ಮೂಲಕ, ಒಬ್ಬ…

ಧ್ಯಾನ 205: ಶಾಂತಿಯ ಕೋಟೆ

ಪ್ರಭುವಿನ ಶಾಂತಿಯು ಒಂದು ಕೋಟೆಯಂತಿದೆ; ದುಷ್ಟನಿಂದ ಬರುವ ಎಲ್ಲ ಬಾಹ್ಯ ದಾಳಿಗಳಿಂದ ರಕ್ಷಣೆ ಪಡೆಯಲು ನಾವು ಅದರಲ್ಲಿ ಆಶ್ರಯ ಪಡೆಯಬೇಕು.  ಈ ಕೋಟೆಯ ಹೊರಗೆ ನಾವು ಈ ಎಲ್ಲ ದುರುದ್ದೇಶದ ದಾಳಿಗಳಿಗೆ ತುತ್ತಾಗುತ್ತೇವೆ.  ಕೋಪ, ದಬ್ಬಾಳಿಕೆ, ವಂಚನೆ ಮತ್ತು ಅಸೂಯೆಯ ಬಾಣಗಳು ನಮಗೆ ಬಹಳ ಹಾನಿ ಮಾಡಬಲ್ಲವು, ಪವಿತ್ರ…

ಧ್ಯಾನ 202: ದೈನಂದಿನ ವಾರ್ಷಿಕೋತ್ಸವ

ವಾರ್ಷಿಕೋತ್ಸವಗಳು ಧ್ಯಾನಕ್ಕೂ ಕೃತಜ್ಞತೆಗೂ ಆಶೀರ್ವಾದಮಯ ಅವಕಾಶಗಳಾಗಿವೆ.  ಕೆಲವು ವಾರ್ಷಿಕೋತ್ಸವಗಳು ಆನಂದದಾಯಕವಾಗಿರುತ್ತವೆ; ಉದಾಹರಣೆಗೆ, ಸುದೀರ್ಘವಾದ ಪವಿತ್ರ ದಾಂಪತ್ಯವನ್ನು ಆಚರಿಸುವ ದಂಪತಿಗಳ ವಿವಾಹ ವಾರ್ಷಿಕೋತ್ಸವ.  ಇನ್ನು ಕೆಲವು ವಾರ್ಷಿಕ ಸ್ಮರಣೆಗಳು ನೋವು ತರುತ್ತವೆ; ಉದಾಹರಣೆಗೆ, ಪ್ರೀತಿಪಾತ್ರರ ಮರಣದ ವಾರ್ಷಿಕ ಸ್ಮರಣೆ.  ಆದರೂ…

ಧ್ಯಾನ 201: ಕಾರಾಗೃಹದಲ್ಲಿ ಯೇಸುವಿನೊಂದಿಗೆ ಕಳೆದ ರಾತ್ರಿ

ನಿಗೂಢವಾದ ರೀತಿಯಲ್ಲಿ ನೀವು ಹೇಗಾದರೂ ಪವಿತ್ರ ಗುರುವಾರದ ರಾತ್ರಿಗೆ ಕರೆದೊಯ್ಯಲ್ಪಟ್ಟರೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಿ.  ಯೇಸು ಅನುಭವಿಸಿದ ಎಲ್ಲವನ್ನೂ ನೀವು ಹೇಗಾದರೂ ನೋಡಲು ಮತ್ತು ಅನುಭವಿಸಲು ಸಾಧ್ಯವಾದರೆ ಹೇಗಿರಬಹುದೆಂದೂ ಕಲ್ಪಿಸಿಕೊಳ್ಳಿ.  ತೋಟದಲ್ಲಿನ ಪ್ರಾಣವೇದನೆ, ಅಪಹಾಸ್ಯ ಮತ್ತು ಕ್ರೂರ ವರ್ತನೆಯನ್ನು ಕಲ್ಪಿಸಿಕೊಳ್ಳಿ…

ಚಿಂತನೆ 200: ಪ್ರೀತಿ ಮತ್ತು ಯಾತನೆಯ ಏಕತೆ

ಪ್ರೀತಿ ಮತ್ತು ಯಾತನೆ ಪರಸ್ಪರ ವಿರುದ್ಧವಾಗಿವೆಯೇ?  ಬೇರೆ ಮಾತಿನಲ್ಲಿ ಹೇಳುವುದಾದರೆ, ನೀವು ಬಹಳ ಯಾತನೆಯನ್ನು ಅನುಭವಿಸುತ್ತಿದ್ದರೂ ನಿಮ್ಮಲ್ಲಿ ಅಪಾರ ಪ್ರೀತಿ ಇರಲು ಸಾಧ್ಯವೇ?  ಪರಿಗಣಿಸಬೇಕಾದ ಒಂದು ಪ್ರಶ್ನೆ ಇದು: ನಿಮ್ಮ ಯಾತನೆಯ ಮೂಲ ಯಾವುದು?  ಅದು ನಿಮ್ಮ ಪಾಪವೇ?  ಅದು ಮತ್ತೊಬ್ಬರ ಮೇಲಿನ ಸಹಾನುಭೂತಿಯೇ?  ಅದು ದೈಹಿಕ ಅಥವಾ ಮಾನಸಿಕ…

ಚಿಂತನೆ 199: ಯೇಸುವಿನೊಂದಿಗಿನ ಏಕತೆಯೇ ಇತರರೊಂದಿಗಿನ ಏಕತೆ

ಅನೇಕ ಕಾರಣಗಳಿಂದ ಧರ್ಮಸಭೆಯು ಮಹಿಮೆಯಿಂದ ಕೂಡಿದೆ.  ಧರ್ಮಸಭೆಯ ಒಂದು ಮಹಿಮಾಮಯ ಅಂಶವೆಂದರೆ ಅದರೊಳಗೆ ಕಂಡುಬರುವ ಏಕತೆ.  ಕೆಲವೊಮ್ಮೆ ಅದರೊಳಗೆ ಬಹಳಷ್ಟು ಒಡಕು, ನೋವು ಮತ್ತು ಎಲ್ಲ ಬಗೆಯ ಅವ್ಯವಸ್ಥೆ ಇರುತ್ತವೆ ಎಂಬುದು ನಿಜ.  ಆದರೆ ಇವು ಧರ್ಮಸಭೆಯ ಗುಣಲಕ್ಷಣಗಳಲ್ಲ.  ಇವು ಪಾಪಗಳ ಪರಿಣಾಮಗಳು…

ಚಿಂತನೆ 198: ನಿಜವಾದ ಸಹಾನುಭೂತಿಯ ಕರುಣೆ

ನಿಜವಾದ ಹೃತ್ಪೂರ್ವಕ ಸಹಾನುಭೂತಿಯ ಕೊರತೆಯು ಒಂದು ರೀತಿಯ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಸ್ವಸ್ಥತೆಯ ಸ್ಪಷ್ಟ ಲಕ್ಷಣವಾಗಿದೆ.  ಇದನ್ನು ಹೇಳುತ್ತಿರುವುದು, ಇದಕ್ಕೆ ವಿರುದ್ಧವಾದುದೂ ಸತ್ಯವಾಗಿರುವುದರಿಂದಲೇ.  ನಿಜವಾದ ಹೃತ್ಪೂರ್ವಕ ಸಹಾನುಭೂತಿ ಇರುವುದು, ಒಬ್ಬ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ…

ಚಿಂತನೆ 194: ಜೀವನದಲ್ಲಿ ಸಂತೃಪ್ತಿ

ಜೀವನದಲ್ಲಿ ನಿಮಗೆ ಸಂತೃಪ್ತಿಯನ್ನು ನೀಡುವುದು ಯಾವುದು?  ಈ ಪ್ರಶ್ನೆಗೆ ಒಬ್ಬೊಬ್ಬರ ಉತ್ತರವೂ ತುಂಬ ಭಿನ್ನವಾಗಿರಬಹುದು.  ಒಬ್ಬರು ಕೆಲಸದಲ್ಲಿ ಸಂತೃಪ್ತಿಯನ್ನು ಕಂಡುಕೊಂಡರೆ, ಮತ್ತೊಬ್ಬರು ಕುಟುಂಬದ ಚಟುವಟಿಕೆಗಳಲ್ಲಿ, ಇನ್ನೊಬ್ಬರು ಸಮುದಾಯ ಸೇವೆಯಲ್ಲಿ, ಮತ್ತೊಬ್ಬರು ಸಂಪತ್ತು ಮತ್ತು ಲೌಕಿಕ ಪ್ರತಿಫಲಗಳಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳಬಹುದು.  ಅನೇಕ ಬಗೆಯ ಉತ್ತರಗಳು…

ಧ್ಯಾನ 189: ಭಯವನ್ನು ಜಯಿಸುವುದು

ಭಯವು ವಿವಿಧ ಕಾರಣಗಳಿಂದ ಉಂಟಾಗುತ್ತದೆ.  ತಕ್ಷಣ ಎದುರಾಗುವ ಯಾವುದೋ ಅಪಾಯದ ಅರಿವು, ಒಂದು ರೀತಿಯ ರಕ್ಷಣಾ ಪ್ರತಿಕ್ರಿಯೆಯಾಗಿ ಹಠಾತ್ ಭಯವನ್ನು ಉಂಟುಮಾಡುತ್ತದೆ.  ಉದಾಹರಣೆಗೆ, ತಕ್ಷಣದ ಅಪಾಯವೆಂದರೆ ಕಾರೊಂದು ಥಟ್ಟನೆ ನಿಮ್ಮ ವಾಹನ ಸಾಗುವ ಪಥಕ್ಕೆ ನುಗ್ಗುವುದಾಗಿದ್ದರೆ, ಈ ಭಯವು ನಿಜಕ್ಕೂ ನಿಮ್ಮ ಪ್ರಾಣವನ್ನು ಉಳಿಸಬಲ್ಲದು.  ಹಠಾತ್ ಭಯವು ನಿಮ್ಮನ್ನು ಕ್ರಮ ಕೈಗೊಳ್ಳುವಂತೆ…

ಚಿಂತನೆ 182: ಅಹಂಕಾರದ ರಹಸ್ಯಗಳನ್ನು ಅರಿಯುವ ವಿವೇಕ

ಅಹಂಕಾರವು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಬಹುದು.  ಹಾಗಾದಾಗ ನಾವು ನಮ್ಮ ಬಗ್ಗೆಯೂ ನಮ್ಮ ಸ್ವಂತ ನೋವಿನ ಬಗ್ಗೆಯೂ ಮಾತ್ರ ಯೋಚಿಸುತ್ತೇವೆ.  ಬಹುಶಃ ಈ ಅನುಭವ ನಿಮಗೂ ಆಗಿರಬಹುದು.  ಬಹುಶಃ ನಿಮ್ಮ ಮನಸ್ಸಿಗೆ ಗಾಯವಾಗಿರಬಹುದು; ನೀವು ಆ ಗಾಯದ ಬಗ್ಗೆಯೇ ಕೊರಗುತ್ತಾ ಕುಳಿತಿರಬಹುದು.  ಅದು ನಿಮ್ಮ ಹೃದಯದಲ್ಲಿ ಕಹಿಯನ್ನು ಉಂಟುಮಾಡುತ್ತದೆ ಮತ್ತು ನೀವು ಆ ಗಾಯವನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ.  ಆದರೆ…