ಕನ್ನಡ

ಚಿಂತನೆ 357: ಅನುಗ್ರಹದ ಪ್ರೇರಣೆಗಳು

ಯಾರಾದರೂ ಸಂಕಟದಲ್ಲಿರುವಾಗ ನೀವು ಅವರಿಂದ ದೂರ ಸರಿಯಬಹುದು.  ಅವರೊಂದಿಗೆ ಮಾತನಾಡಲು ಮುಂದಾದರೆ ನಿಮ್ಮ ಸಮಯ ಮತ್ತು ಶಕ್ತಿಯ ಮೇಲೆ ದೊಡ್ಡ ಹೊರೆ ಬೀಳುತ್ತದೆ ಎಂದು ಯೋಚಿಸುವುದು ಸುಲಭ.  ಆದರೆ ನಿಮ್ಮ ಸಂಭಾಷಣೆಯನ್ನು ಪ್ರಭುವೇ ನಡೆಸುತ್ತಿದ್ದರೆ, ಅವರು ಸ್ವಲ್ಪ ಸಮಯದಲ್ಲೇ ಅದ್ಭುತ ಕಾರ್ಯಗಳನ್ನು ಮಾಡಬಲ್ಲರು.  ನಿಜ, ಇವೆ…

ಧ್ಯಾನ 356: ನಿಮ್ಮ ಹೃದಯದ ಬಡಿತ

ನಿಮ್ಮ ಜೀವನದಲ್ಲಿ ಉತ್ಸಾಹ ಮೂಡಿದಾಗ, ನಿಮ್ಮ ಹೃದಯವು ವೇಗವಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ.  ಇದು ಸಹಜ ಪ್ರತಿಕ್ರಿಯೆ.  ಆದ್ದರಿಂದ, ನಿಮ್ಮ ಹೃದಯವು ಎಂದಾದರೂ ದೇವರಿಗಾಗಿ ಬಡಿದುಕೊಳ್ಳುತ್ತದೆಯೇ ಎಂದು ಚಿಂತಿಸುವುದು ಒಳ್ಳೆಯದು.  ದೇವರ ಸಾನ್ನಿಧ್ಯದ ಪವಿತ್ರ ವಿಸ್ಮಯದಲ್ಲಿ ತಲ್ಲೀನರಾಗಲು ನೀವು ನಿಮ್ಮನ್ನು ಬಿಡುತ್ತೀರಾ?  ನೀವು…

ಚಿಂತನೆ 352: ದಂಡನೆ ಮತ್ತು ಅಪರಾಧಭಾವ

ದೇವರ ದಂಡನೆಯ ಬಗ್ಗೆ ಚಿಂತಿಸುವುದು ಹಿತಕರವಾಗಿರದಿರಬಹುದು.  ಆದರೆ ಅವರ ದಂಡನೆಗಳು ನಿಜವಾದವು ಮತ್ತು ಅವರ ಅಪಾರ ಕರುಣೆಯ ಕಾರ್ಯವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.  ಆತ್ಮಗಳು ದೇವರಿಂದ ವಿಮುಖವಾಗಿ ಅವರ ಕರುಣೆಯನ್ನು ನಿರಾಕರಿಸಿದಾಗ, ಅದು ಅವರ ಹೃದಯವನ್ನು ಆಳವಾಗಿ ಗಾಯಗೊಳಿಸುತ್ತದೆ.  ಇದರ ಪರಿಣಾಮವಾಗಿ, ದೇವರು ಇನ್ನಷ್ಟು…

ಧ್ಯಾನಚಿಂತನೆ 350: ಆರಾಧನೆಯಲ್ಲಿ ಸೌಂದರ್ಯ

ಲೋಕವು ಸುಂದರವಾಗಿದೆ ಮತ್ತು ದೇವರ ಸೌಂದರ್ಯವನ್ನು ಪ್ರಕಟಿಸುತ್ತದೆ. ಆದರೆ ಪವಿತ್ರ ದಿವ್ಯಪ್ರಸಾದದಂತಹ ಆಧ್ಯಾತ್ಮಿಕ ವಾಸ್ತವತೆಗಳು ಇನ್ನೂ ಹೆಚ್ಚು ಸುಂದರವಾಗಿವೆ.  ಪರಮಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ದೇವರ ಸೌಂದರ್ಯವನ್ನು ಕಾಣಲು, ನಿಮಗೆ ವಿಶ್ವಾಸದ ಕಣ್ಣುಗಳು ಬೇಕು.  ಈ ಸೌಂದರ್ಯವನ್ನು ಕಾಣುವ ನಿಮ್ಮ ದೃಷ್ಟಿಯನ್ನು ತೀಕ್ಷ್ಣಗೊಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಆರಾಧನೆಯೂ ಒಂದು.  ಸ್ವೀಕರಿಸುವುದು…

ಚಿಂತನೆ 349: ನಿಮ್ಮ ಹೃದಯದ ಶಾಂತಿಯನ್ನು ಕಳೆದುಕೊಳ್ಳುವುದು

ನಿಮ್ಮ ಹೃದಯದ ಶಾಂತಿ ಮತ್ತು ನೆಮ್ಮದಿಯನ್ನು ಕಸಿದುಕೊಳ್ಳುವ ಶಕ್ತಿ ಯಾವುದಕ್ಕಿದೆ?  ನಿಮ್ಮನ್ನು ಅವಮಾನಿಸಿದರೆ, ಅಪಹಾಸ್ಯ ಮಾಡಿದರೆ, ನಿಮ್ಮ ಬಗ್ಗೆ ತಪ್ಪಾಗಿ ತೀರ್ಪು ನೀಡಿದರೆ, ಸೆರೆಮನೆಗೆ ಹಾಕಿದರೆ, ಹೊಡೆದರೆ ಅಥವಾ ಕೊಂದುಹಾಕಿದರೆ ಏನು?  ಇವುಗಳಲ್ಲಿ ಯಾವುದಾದರೂ ನಿಮ್ಮ ಹೃದಯದಲ್ಲಿರುವ ದೇವರ ಶಾಂತಿಯನ್ನು ಕಸಿದುಕೊಳ್ಳಬಹುದೇ?  ನೀವು ಅದಕ್ಕೆ ಅವಕಾಶಕೊಟ್ಟರೆ ಮಾತ್ರ.  ನೀವು ತಿಳಿದುಕೊಂಡು ನಂಬುವುದು ಅತ್ಯಗತ್ಯ…

ಚಿಂತನೆ 345: ದೇವರಲ್ಲಿ ಮುಳುಗುವುದು

ನೀವು ಎಂದಾದರೂ ದೇವರಲ್ಲಿ ಲೀನರಾಗುತ್ತೀರಾ?  ಹೆಚ್ಚಿನ ಜನರಿಗೆ ಇದು ಅಪರೂಪದ ಅನುಭವ; ಕೆಲವರಿಗೆ ಇಂತಹ ಅನುಭವವೇ ಆಗಿರುವುದಿಲ್ಲ.  ದೇವರಲ್ಲಿ ಲೀನರಾಗುವುದು ಅಥವಾ ಮುಳುಗುವುದು ಎಂದರೆ, ಪ್ರಾರ್ಥನೆಯಲ್ಲಿ ಎಷ್ಟು ಆಳವಾಗಿ ತಲ್ಲೀನರಾಗುವುದೆಂದರೆ, ನೀವು ಅವರ ಸಾನ್ನಿಧ್ಯದಲ್ಲಿ ನಿಮ್ಮನ್ನೇ ಮರೆತಂತೆ ಆಗುವುದು.  ಹೀಗಾದಾಗ, ಪ್ರಭು ನಿಮ್ಮನ್ನು ಸಂಪೂರ್ಣವಾಗಿ…

ಚಿಂತನೆ 342: ಶ್ರಮಾನುಭವದಿಂದ ದೊರೆಯುವ ನವಚೈತನ್ಯ

ಸಾಮಾನ್ಯವಾಗಿ ನಾವು “ಶ್ರಮಾನುಭವ” ಮತ್ತು “ನವಚೈತನ್ಯ” ಎಂಬ ಪದಗಳನ್ನು ಒಟ್ಟಿಗೆ ಬಳಸುವುದಿಲ್ಲ.  ಕ್ರಿಸ್ತರ ಶ್ರಮಾನುಭವವು ನವಚೈತನ್ಯವನ್ನು ನೀಡುವುದು ಹೇಗೆ?  ಲೌಕಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದು ಭಯಾನಕವೂ ದುಃಖಕರವೂ ಆಗಿದೆ.  ಪ್ರಭು ಅಪಾರವಾಗಿ ಯಾತನೆ ಅನುಭವಿಸಿದರು ಮತ್ತು ನಮ್ಮ ಧನ್ಯ ಮಾತೆಯೂ ಅತ್ಯಂತ ದುಃಖಭರಿತ…

ಧ್ಯಾನ 339: ಪರಿಶುದ್ಧ ಆತ್ಮ

ನೀವು ತಕ್ಷಣವೇ ಈ ತೀರ್ಮಾನಕ್ಕೆ ಬರದಿರಬಹುದು, ಆದರೆ ದೇವರ ಮೇಲೆ ಪರಿಶುದ್ಧ ಪ್ರೀತಿಯುಳ್ಳ ಆತ್ಮಕ್ಕೆ ಅನೇಕರು ಭಯಪಡುತ್ತಾರೆ.  ಅವರಲ್ಲಿರುವ ಆ “ಭಯ”ವು ಅಂಥ ಆತ್ಮವನ್ನು ವಿರೋಧಿಸುವ ಭಯವಾಗಿದೆ.  ದುರುದ್ದೇಶವುಳ್ಳವರು ಅಂಥ ವ್ಯಕ್ತಿಯ ಮೇಲೆ ದಾಳಿ ಮಾಡಲು ಧೈರ್ಯಮಾಡುವುದಿಲ್ಲ; ಏಕೆಂದರೆ ಅದು ತಮಗೇ ತಿರುಗುಬಾಣವಾಗಬಹುದು ಎಂದು ಅವರಿಗೆ ತಿಳಿದಿದೆ.  ಇದು ಅಸಾಧ್ಯ…

ಧ್ಯಾನ 336: ಲೋಕದ ಐಶ್ವರ್ಯವೋ…ಅಥವಾ ದೇವರೋ?

ನಾವು ಎಷ್ಟು ಬಾರಿ ಲೌಕಿಕ ಸೊತ್ತುಗಳನ್ನು ಬಯಸುತ್ತೇವೆ ಎಂಬುದು ಕುತೂಹಲಕರವಾಗಿದೆ.  ಜಗತ್ತಿನ ಎಲ್ಲ ಸಂಪತ್ತು ನಿಮಗೊಬ್ಬರಿಗೇ ಸೇರಿದ್ದರೂ, ಅದು ನಿಮ್ಮ ಹೃದಯದ ಹಂಬಲವನ್ನು ತಣಿಸಲಾರದು.  ನಿಮ್ಮೊಳಗಿನ ಶೂನ್ಯತೆಯನ್ನು ತುಂಬುವುದು ಒಂದೇ ಒಂದು ಸಂಗತಿ; ಅದು ಪ್ರಭು ಮತ್ತು ಅವರ ಪವಿತ್ರ ಚಿತ್ತ.  ಬೇರೆ ಯಾವುದೂ…