ಕನ್ನಡ

ಧ್ಯಾನ 218: ದೇವರ ಒಂದೇ ಒಂದು ಅನುಭೂತಿ

ದೇವರನ್ನೂ ಅವರ ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವುದು ಮುಖ್ಯ; ಆದರೆ ಅರ್ಥಮಾಡಿಕೊಳ್ಳುವುದು ಮತ್ತು ಅರಿಯುವುದು ಒಂದೇ ಅಲ್ಲ.  ದೇವರನ್ನು ಅರಿಯುವುದೆಂದರೆ ನಾವು ಒಬ್ಬ ವ್ಯಕ್ತಿಯನ್ನು ಸಂಧಿಸುವುದು.  ಆ ವ್ಯಕ್ತಿ ಹೇಳುವುದನ್ನು ನಾವು ಕೇವಲ ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ; ಬದಲಾಗಿ, ಆ ವ್ಯಕ್ತಿಯೊಂದಿಗೆ ಒಡನಾಡುತ್ತೇವೆ, ಅವರನ್ನು ಭೇಟಿಯಾಗುತ್ತೇವೆ, ಅವರ ಅನುಭವವನ್ನು ಪಡೆಯುತ್ತೇವೆ ಮತ್ತು ಅವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತೇವೆ.  ವಾಸ್ತವವಾಗಿ…

ಧ್ಯಾನ 216: ನಿಜವಾದ ಪ್ರೀತಿಯಿಂದ ಮನಸ್ಸಿನ ಸ್ಪಷ್ಟತೆ

ನಮ್ಮ ಧರ್ಮಸಭೆಯು ಅನುಗ್ರಹದಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಅನೇಕ ಬೋಧನೆಗಳನ್ನು ನಮ್ಮ ಮುಂದಿಡುತ್ತದೆ.  ಕೆಲವು ಬೋಧನೆಗಳು ನೈತಿಕತೆಗೆ ಸಂಬಂಧಿಸಿದ್ದು, ಮಹತ್ತರ ಸದ್ಗುಣಗಳ ಜೀವನಕ್ಕೆ ನಮ್ಮನ್ನು ಕರೆಯುತ್ತವೆ.  ಕೆಲವು ಬೋಧನೆಗಳು ದೇವರ ಕುರಿತು, ಅವರ ಅಸ್ತಿತ್ವ ಮತ್ತು ಸಾರಸ್ವರೂಪದ ಕುರಿತಾಗಿವೆ.  ಕೆಲವು ಬೋಧನೆಗಳು ಮಾನವಕುಲಕ್ಕೆ ಸಂಬಂಧಿಸಿದ್ದು, ನಾವು ಯಾರು ಎಂಬುದರ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತವೆ…

ಚಿಂತನೆ 215: ಆಯ್ಕೆ ಮಾಡುವ ಸ್ವಾತಂತ್ರ್ಯ

ಒಂದು ಅರ್ಥದಲ್ಲಿ, ನಮ್ಮ ಸಂಪೂರ್ಣ ಅಸ್ತಿತ್ವದೊಂದಿಗೆ ತಮ್ಮ ಕಡೆಗೆ ತಿರುಗಿ ತಮ್ಮ ಕರುಣೆಯನ್ನು ಸ್ವೀಕರಿಸುವ ಕರ್ತವ್ಯವನ್ನು ದೇವರು ನಮ್ಮ ಮೇಲೆ ಹೇರುತ್ತಾರೆ ಎಂದು ನಾವು ಹೇಳಬಹುದು.  ತಮ್ಮ ಕರುಣೆಯನ್ನು ಇತರರಿಗೆ ಹರಡುವ ಕರ್ತವ್ಯವನ್ನೂ ಅವರು ನಮ್ಮ ಮೇಲೆ ಹೇರುತ್ತಾರೆ.  ಆದರೆ ಇದು ಸಾಮಾನ್ಯವಾದ “ಕರ್ತವ್ಯ” ಅಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.  ಇದು ಒಂದು ಕರ್ತವ್ಯ…

ಧ್ಯಾನ 214: ಸಂಪೂರ್ಣ ಕ್ಷಮೆ

ನೀವು ಗಂಭೀರ ಅಪರಾಧವನ್ನು ಎಸಗಿ, ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಎದುರಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ.  ನೀವು ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟಿದ್ದಿರಿ ಮತ್ತು ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಿರಿ.  ನಿಮಗೆ ಶಿಕ್ಷೆ ವಿಧಿಸುವ ದಿನದಂದು, ಶೀಘ್ರದಲ್ಲೇ ಅಲ್ಲಿಗೆ ಮರಳಬೇಕಾಗುತ್ತದೆ ಎಂಬ ಅರಿವಿನೊಂದಿಗೆ, ನಿಮ್ಮನ್ನು ಬಂಧಿಸಿಟ್ಟಿದ್ದ ಸ್ಥಳದಿಂದ ಕೈಕೋಳ ತೊಡಿಸಿ ನಿಮ್ಮನ್ನು ಕರೆತರಲಾಯಿತು.  ಆದರೆ ಅದಕ್ಕೆ ಬದಲಾಗಿ, ನ್ಯಾಯಾಧಿಪತಿಯು…

ಚಿಂತನೆ 213: ಗ್ರಹಿಕೆಯ ಆಧ್ಯಾತ್ಮಿಕ ವರ

ದೇವರ ರಹಸ್ಯಗಳನ್ನು ನೀವು ಗ್ರಹಿಸಿದ್ದೀರಾ?  ನೀವು ಅನೇಕ ವರ್ಷಗಳ ಕಾಲ ನಮ್ಮ ಸಭೆಯ ವಿಶ್ವಾಸವನ್ನು ಅಧ್ಯಯನ ಮಾಡಿದ ದೇವತಾಶಾಸ್ತ್ರಜ್ಞರೆಂದು ಊಹಿಸಿಕೊಳ್ಳಿ.  ನಮ್ಮ ಸಭೆಯ ದೇವತಾಶಾಸ್ತ್ರದ ಎಲ್ಲ ಶಾಖೆಗಳ ಜ್ಞಾನವು ನಿಮ್ಮಲ್ಲಿ ಈ ರಹಸ್ಯಗಳ ನಿಜವಾದ ಗ್ರಹಿಕೆಯನ್ನು ಅನಿವಾರ್ಯವಾಗಿ ಉಂಟುಮಾಡುತ್ತದೆಯೇ…

ಧ್ಯಾನ 211: ದೇವಮಾತೆಯ ಸನಿಹದಲ್ಲಿ

ತನ್ನ ಮಕ್ಕಳ ರಕ್ಷಣೆಗಾಗಿ ತಾಯಿಯು ಸ್ವಇಚ್ಛೆಯಿಂದ ತನ್ನ ಪ್ರಾಣವನ್ನೇ ಕೊಡಲು ಸಿದ್ಧಳಿರುವುದರಿಂದ, ಅವಳ ಪ್ರೀತಿಯನ್ನು “ಅತ್ಯಂತ ಪ್ರಬಲವಾದದ್ದು” ಎಂದು ವರ್ಣಿಸಬಹುದು.  ತನ್ನ ಮಗು ಅಪಾಯದಲ್ಲಿದ್ದಾಗ, ನೋವಿನಲ್ಲಿದ್ದಾಗ ಅಥವಾ ಅಗತ್ಯದಲ್ಲಿದ್ದಾಗ ಅವಳ ಮಾತೃಸಹಜ ಪ್ರವೃತ್ತಿ ಜಾಗೃತಗೊಳ್ಳುತ್ತದೆ; ಆಗ ಅವಳು ತನ್ನ ಸ್ವಂತ ಯೋಗಕ್ಷೇಮವನ್ನೆಲ್ಲ ಮರೆತು ತನ್ನ…

ಚಿಂತನೆ 210: ದೈವಿಕ ಪ್ರೀತಿಯ ಬೆಳಕಿನಲ್ಲಿ ಸತ್ಕಾರ್ಯಗಳು

ನೀವು ಶ್ರಮಪಟ್ಟು ಕೆಲಸ ಮಾಡುತ್ತೀರಾ?  ಒಳ್ಳೆಯವರಾಗಿರಲು ಪ್ರಯತ್ನಿಸುತ್ತೀರಾ?  ಒಳಿತಿನ ಬದಲಾವಣೆಯನ್ನು ತರಲು ಬಯಸುತ್ತೀರಾ?  ಒಳ್ಳೆಯವರಾಗಿರಲು ಪ್ರಯತ್ನಿಸುವುದು ಖಂಡಿತವಾಗಿಯೂ ಒಳ್ಳೆಯದೇ.  ಆದರೆ ಹೀಗೆ ಮಾಡುವಾಗ, ದೈವಿಕ ಪ್ರೀತಿಯೇ ಮೂಲವಾಗಿರದ ಹೊರತು, ನಮ್ಮ “ಒಳ್ಳೆಯತನ” ದೇವರ ದೃಷ್ಟಿಯಲ್ಲಿ ನಿಜವಾಗಿಯೂ ಒಳ್ಳೆಯದು ಎಂದು ನಾವು ಎಂದಿಗೂ ಭಾವಿಸಬಾರದು…

ಚಿಂತನೆ 209: ಪಾಪದ ಅಭ್ಯಾಸವನ್ನು ಜಯಿಸುವುದು

ಪಾಪವನ್ನು ಜಯಿಸಲು ದೇವರ ಕರುಣೆ ಅಗತ್ಯ.  ಅನೇಕ ಬಾರಿ ನಾವು ನಮ್ಮ ಸ್ವಂತ ಪ್ರಯತ್ನದಿಂದಲೇ ಪಾಪವನ್ನು ಜಯಿಸಲು ಯತ್ನಿಸುತ್ತೇವೆ.  ಇದು ವ್ಯರ್ಥ ಪ್ರಯತ್ನ, ಏಕೆಂದರೆ ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ಪಾಪವನ್ನು ನೀವು ಎಂದಿಗೂ ಜಯಿಸಲಾರಿರಿ.  ನೀವು ಹೋರಾಡುತ್ತಿರುವ ಪಾಪದಿಂದ ಮುಕ್ತರಾಗಲು ಒಂದೇ ಒಂದು ಮಾರ್ಗವಿದೆ, ಮತ್ತು…

ಚಿಂತನೆ 208: ಕರುಣೆಯ ಆಧ್ಯಾತ್ಮಿಕ ಬಾಣ

ಸಾಮಾನ್ಯವಾಗಿ ಬಾಣವು ಗಾಯಗೊಳಿಸುತ್ತದೆ ಮತ್ತು ಕೊಲ್ಲುತ್ತದೆ.  ಇತಿಹಾಸದುದ್ದಕ್ಕೂ ಬಾಣಗಳನ್ನು ಯುದ್ಧಕ್ಕೂ ಬೇಟೆಗೂ ಬಳಸಲಾಗಿದೆ.  ಆದರೆ ಕರುಣೆಯ ಆಧ್ಯಾತ್ಮಿಕ ಬಾಣವು ಬಹಳ ಭಿನ್ನವಾಗಿದೆ.  ಪ್ರವಾದಿ ಸಿಮೆಯೋನನು ನಮ್ಮ ಪೂಜ್ಯ ಮಾತೆಗೆ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳಿ: “ನಿನ್ನನ್ನೂ ಒಂದು ಖಡ್ಗವು ಇರಿಯುವುದು” (ಲೂಕ 2:35).  ಮತ್ತು…

ಧ್ಯಾನ 207: ಕ್ರಿಸ್ತನ ಹೃದಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವುದು

ಪ್ರೀತಿವಂತ ಹಾಗೂ ಕೋಮಲ ಹೃದಯದ ತಂದೆ ಅಥವಾ ತಾಯಿಗೆ ಒತ್ತಿಕೊಂಡು ಮಲಗುವುದರಲ್ಲಿ ಮಕ್ಕಳು ಹೆಚ್ಚಾಗಿ ಅಪಾರ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ.  ಪ್ರೀತಿಯ ಈ ತೋಳುಗಳ ಬಿಗಿಯಾದ ಅಪ್ಪುಗೆಯಲ್ಲಿ ಅಪಾರ ತೃಪ್ತಿಯಿದೆ.  ಈ ಕ್ಷಣಗಳಲ್ಲಿ ಭಯ ಮತ್ತು ಚಿಂತೆ ದೂರವಾಗುತ್ತವೆ; ಸಂಕಟವಿದ್ದಾಗ ಶಾಂತಿ ಮತ್ತು ಸಾಂತ್ವನ ಮರಳಿ ದೊರೆಯುತ್ತವೆ.  ಹಾಗೆಯೇ ಆಗಬೇಕು…