ಕನ್ನಡ

ಚಿಂತನೆ 309: ಇತರರೊಂದಿಗೆ ಸಂಭಾಷಿಸುವುದು

ನಾವು ಇನ್ನೊಬ್ಬರೊಂದಿಗೆ ಸಂಭಾಷಿಸುವಾಗ, ಅದು ಯಾವಾಗಲೂ ದೇವರ ಪ್ರೀತಿಯನ್ನು ಹಂಚಿಕೊಳ್ಳುವ ಒಂದು ಅವಕಾಶವಾಗಿರುತ್ತದೆ.  ಸಾಮಾನ್ಯ ಮಾತುಕತೆಯಲ್ಲಿಯೂ ಇಂತಹ ಸಾಧ್ಯತೆ ಇರುತ್ತದೆ.  ಉದಾಹರಣೆಗೆ, ಇನ್ನೊಬ್ಬರ ಜೀವನದ ವಿವರಗಳನ್ನು ಗಮನವಿಟ್ಟು ಆಲಿಸುವುದು ಅವರ ಬಗೆಗಿನ ಕಾಳಜಿ ಮತ್ತು ಆಸಕ್ತಿಯನ್ನು ವ್ಯಕ್ತಪಡಿಸುತ್ತದೆ ಹಾಗೂ ನೀವು ಅವರ ಘನತೆಯನ್ನು ಗುರುತಿಸುತ್ತೀರಿ ಎಂಬುದನ್ನು ತೋರಿಸುತ್ತದೆ…

ಚಿಂತನೆ 308: ತಾಯಿಯ ಪ್ರೀತಿ

ಈ ಲೋಕದ ಯಾವುದೇ ಚಿತ್ರಣವೂ ದೇವರ ಪರಿಪೂರ್ಣ ಪ್ರೀತಿಯನ್ನು ಪೂರ್ಣವಾಗಿ ಪ್ರಕಟಿಸಲಾರದು ಎಂಬುದು ನಿಜ.  ದೇವರು ಎಲ್ಲವನ್ನೂ ಮೀರಿದವರು; ಅವರ ಪ್ರೀತಿಯು ಈ ಲೋಕವು ಒಳಗೊಳ್ಳಬಹುದಾದುದಕ್ಕಿಂತ ಮಿಗಿಲಾದದ್ದು.  ಆದರೂ, ದೇವರ ಪ್ರೀತಿಯ ವಿವಿಧ ಅಂಶಗಳನ್ನು ಪ್ರಕಟಿಸುವ ಅನೇಕ ಸಂಗತಿಗಳು ಈ ಲೋಕದಲ್ಲಿವೆ.  ತಾಯಿಯ ಪ್ರೀತಿಯು ಅಂತಹ ಒಂದು ಚಿತ್ರಣವಾಗಿದೆ.  ಆದರೂ…

ಚಿಂತನೆ 307: ದೈವಿಕ ಮಿತ್ರನೊಂದಿಗೆ ಸಂಭಾಷಿಸುವುದು

ಪ್ರಾರ್ಥನೆಯಲ್ಲಿ ನಿರತನಾದ ಏಕಾಂತವಾಸಿ, ಗೆರಿಟ್ ಡೌ ಅವರ ಕಾರ್ಯಾಗಾರದಿಂದ Video ನೀವು ಹೇಗೆ ಪ್ರಾರ್ಥಿಸುತ್ತೀರಿ?  ಪ್ರಾರ್ಥಿಸಲು ಅನೇಕ ಒಳ್ಳೆಯ ವಿಧಾನಗಳಿವೆ.  ಕೆಲವು ಸಾಮಾನ್ಯ ವಿಧಾನಗಳು ಇವು: ದಿವ್ಯಬಲಿ ಅಥವಾ ಇತರ ಆರಾಧನಾ ವಿಧಿಗಳಲ್ಲಿ ಭಾಗವಹಿಸುವುದು, ಜಪಮಾಲೆ ಅಥವಾ ಇತರ ಜಪಸರಗಳನ್ನು ಪ್ರಾರ್ಥಿಸುವುದು, ಪವಿತ್ರ ಗ್ರಂಥವನ್ನು ಧ್ಯಾನಪೂರ್ವಕವಾಗಿ …

ಇನ್ನಷ್ಟು ಓದಿ

ಚಿಂತನೆ 306: ದೇವರು ಎಂದಿಗೂ ಪಟ್ಟು ಬಿಡುವುದಿಲ್ಲ

ದೇವರ ಪ್ರೀತಿಯನ್ನು ನೀವು ಸಂದೇಹಿಸುತ್ತೀರಾ?  ಸತ್ಯವೇನೆಂದರೆ, ದೇವರು ನಿಮ್ಮನ್ನು ಹುಡುಕುವುದರಲ್ಲಿ ಎಂದಿಗೂ ಪಟ್ಟು ಬಿಡುವುದಿಲ್ಲ.  ನಮ್ಮ ಪಾವಿತ್ರ್ಯದ ಬಹುಭಾಗವು ನಮ್ಮ ಮೇಲೆ ಅವಲಂಬಿತವಾಗಿದ್ದರೂ, ಅದರ ಬಹುಪಾಲು ದೇವರ ಮೇಲೆ ಅವಲಂಬಿತವಾಗಿದೆ.  ಈ ಭೂಮಿಯ ಮೇಲಿನ ನಿಮ್ಮ ಜೀವನದುದ್ದಕ್ಕೂ, ದೇವರು ನಿಮ್ಮನ್ನು ಹುಡುಕುವುದನ್ನೂ ನಿಮ್ಮ ಮನಪರಿವರ್ತನೆಯನ್ನು ಬಯಸುವುದನ್ನೂ ಎಂದಿಗೂ ನಿಲ್ಲಿಸುವುದಿಲ್ಲ.  ಅವರು ತಮ್ಮ ಕರುಣೆಯನ್ನು…

ಧ್ಯಾನ 305: ದೇವರ ಪ್ರೀತಿಯ ಆಳ

ಯಾರಾದರೂ ನಿಮ್ಮನ್ನು ಪ್ರೀತಿಸುವುದರಿಂದ ನಿಮಗಾಗಿ ತಮ್ಮ ಜೀವವನ್ನೇ ಕೊಟ್ಟರೆ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ.  ಅವರು ಸ್ವಯಂಪ್ರೇರಣೆಯಿಂದ ತಮ್ಮ ಜೀವವನ್ನು ಕೊಡದಿದ್ದರೆ ನೀವು ನಿಮ್ಮ ಜೀವವನ್ನು ಕಳೆದುಕೊಳ್ಳುತ್ತೀರಿ ಎಂದು ಅವರಿಗೆ ತಿಳಿದಿರುವಂತಹ ಪರಿಸ್ಥಿತಿಯಲ್ಲಿ ಅವರಿದ್ದಾರೆ.  ಆದ್ದರಿಂದ ಅವರು ಧೈರ್ಯದಿಂದ ಮುಂದೆ ಬಂದು, ನಿಮ್ಮ ಜೀವಕ್ಕೆ ಬದಲಾಗಿ ತಮ್ಮ ಜೀವವನ್ನು ಕೊಡಲು ನಿರ್ಧರಿಸಿದರು.  ಹೀಗೆ ಮಾಡಲು…

ಧ್ಯಾನ 303: ಮೌನ

ನಮ್ಮ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಅನೇಕರು ಎದುರಿಸುವ ಅಪಾಯಗಳಲ್ಲಿ ನಿರಂತರ ಗದ್ದಲವೂ ಒಂದು.  ದಿನವಿಡೀ ಮಾತುಗಳ ಸುರಿಮಳೆ ನಮ್ಮ ಮೇಲೆ ಸುಲಭವಾಗಿ ಎರಗುತ್ತದೆ.  ಅದು ರೇಡಿಯೋ, ಟಿವಿ, ಅಂತರ್ಜಾಲದ ಮೂಲಕವಾಗಿರಬಹುದು, ಅಥವಾ ಇನ್ನೊಬ್ಬರ ನಿಲ್ಲದ ಮಾತುಗಳಿಂದಾಗಿರಬಹುದು.  ಅಪರೂಪಕ್ಕಷ್ಟೇ ನಮಗೆ ದೊರೆಯುವುದು ಗಾಢವಾದ…

ಧ್ಯಾನ 301: ಸಂತರ ಅನ್ಯೋನ್ಯತೆ

ದೇವರ ಕರುಣೆಯನ್ನು ಹರಡಲು ಶ್ರದ್ಧೆಯಿಂದ ಶ್ರಮಿಸುವುದಕ್ಕೆ ನಮಗಿರಬೇಕಾದ ಪ್ರೇರಣೆಗಳಲ್ಲಿ ಒಂದು ಸಂತರ ಅನ್ಯೋನ್ಯತೆಯ ವಾಸ್ತವವಾಗಿದೆ.  ಈ ಶಾಶ್ವತ ಅನ್ಯೋನ್ಯತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವೀಗ ಮಾಡುವ ಕಾರ್ಯಗಳಲ್ಲಿ ಸ್ವರ್ಗದಲ್ಲಿ ಸದಾಕಾಲ ಆನಂದಿಸುವೆವು ಎಂಬುದನ್ನು ಅರಿತುಕೊಳ್ಳಲು ನಮಗೆ ಸಾಧ್ಯವಾಗುತ್ತದೆ.  ಉದಾಹರಣೆಗೆ, ಒಂದು ವೇಳೆ…

ಚಿಂತನೆ 300: ನಿಮ್ಮ ಆತ್ಮದ ರಹಸ್ಯಗಳನ್ನು ಬಹಿರಂಗಪಡಿಸುವುದು

ನಿಮ್ಮ ಆತ್ಮದ ಆಳವನ್ನು ತೆರೆದಿಡಲು ಒಬ್ಬ ವ್ಯಕ್ತಿ ಇರುವುದು ನಿಜಕ್ಕೂ ಬಹಳ ಸಾಂತ್ವನದಾಯಕ.  ಸಂಪೂರ್ಣ ಗೌಪ್ಯತೆ, ಕರುಣೆ ಮತ್ತು ಅರ್ಥಮಾಡಿಕೊಳ್ಳುವ ಮನಸ್ಸನ್ನು ಹೊಂದಿರುವ ಇಂತಹ ವಿಶ್ವಾಸಪಾತ್ರ ವ್ಯಕ್ತಿ ದೊರಕುವುದು ಒಂದು ದೊಡ್ಡ ಆಶೀರ್ವಾದ.  ಹಿಂಜರಿಕೆಯಿಲ್ಲದೆ ನಿಮ್ಮ ಪಾಪಗಳ ಬಗ್ಗೆಯೂ ಮಾತನಾಡುವುದು…

ಚಿಂತನೆ 299: ಮಾನವ ವಿವೇಕದ ದಣಿವು

ನಮ್ಮ ಪ್ರಭುವಿನ ಹೃದಯದಿಂದ ಹೊರಹೊಮ್ಮುವ ಸತ್ಯದ ಮಾತುಗಳು ನಮ್ಮ ಜೀವನಕ್ಕೆ ಆನಂದವನ್ನು ತರುತ್ತವೆ ಮತ್ತು ನಮ್ಮ ಅಂತರಂಗಕ್ಕೆ ನವಚೈತನ್ಯ ನೀಡುತ್ತವೆ.  ನೀವು ಈ ಸತ್ಯದ ಮಾತುಗಳನ್ನು ಕೇಳಿ, ಮನಸ್ಸಿಗೆ ತೆಗೆದುಕೊಂಡು, ಅವುಗಳಂತೆ ನಡೆದುಕೊಂಡಾಗ, ತಪ್ಪಿನ ಹೊರೆಯಿಂದ ಬಿಡುಗಡೆ ಹೊಂದುತ್ತೀರಿ ಮತ್ತು ಅಂತರಂಗದಲ್ಲಿ ಒಂದು ಬಗೆಯ ಹಗುರತನವನ್ನೂ ಉಲ್ಲಾಸವನ್ನೂ ಅನುಭವಿಸಬಹುದು.  ಆದರೆ…

ಚಿಂತನೆ 296: ಹೆತ್ತವರ ಪ್ರೀತಿ

ತಮ್ಮ ಮಗುವನ್ನು ಉತ್ಕಟ ಪ್ರೀತಿಯಿಂದ ಪ್ರೀತಿಸುವ ತಂದೆ ಅಥವಾ ತಾಯಿಯನ್ನು ಕಲ್ಪಿಸಿಕೊಳ್ಳಿ.  ಅವರು ತಮ್ಮ ಮಗುವಿನ ಆರೈಕೆ ಮತ್ತು ಒಳಿತಿಗಾಗಿ ಎಲ್ಲ ರೀತಿಯಲ್ಲೂ ಬದ್ಧರಾಗಿರುತ್ತಾರೆ.  ಮಗು ಹುಟ್ಟಿದಂದಿನಿಂದ ವಯಸ್ಕನಾಗುವವರೆಗೂ ಅವರ ಪ್ರೀತಿ ಸ್ಥಿರವಾಗಿರುತ್ತದೆ; ಅದನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ.  ಈಗ, ಯಾವುದೋ ಒಂದು ಹಂತದಲ್ಲಿ ಅವರ ಮಗು ಅವರನ್ನು ಬಿಟ್ಟು ಹೊರಟು…