ಕನ್ನಡ

ಚಿಂತನೆ 278: ದೇವರ ಕರುಣೆಯ ರಹಸ್ಯಗಳಿಗೆ ಕಿಟಕಿಗಳು

ಯೇಸುವಿನ ಹೃದಯದಿಂದ ಕರುಣೆಯ ಕಿರಣಗಳು ಹರಿಯುತ್ತಿರುವಂತೆ ಅವರ ಚಿತ್ರವನ್ನು ಬಿಡಿಸುವಂತೆ ಸಂತ ಫೌಸ್ಟಿನಾರನ್ನು ಕೇಳಲಾಯಿತು.  ಅವರು ಹಾಗೆಯೇ ಮಾಡಿದರು. ಈ ಚಿತ್ರದ ಮೂಲಕ ಅನೇಕ ಆತ್ಮಗಳು ತಮ್ಮತ್ತ ಆಕರ್ಷಿತರಾಗುವರು ಎಂದು ಯೇಸು ಅವರಿಗೆ ಭರವಸೆ ನೀಡಿದರು.  ಯೇಸು ಮತ್ತು ಸಂತ ಫೌಸ್ಟಿನಾ ನೀಡಿದ ಪ್ರಾಮುಖ್ಯತೆಯ ಕುರಿತು ಯೋಚಿಸುವುದು ಆಸಕ್ತಿದಾಯಕವಾಗಿದೆ…

ಚಿಂತನೆ 273: ಲೌಕಿಕ ಬಂಧಗಳಿಲ್ಲ, ದೇವರ ಮೇಲಿನ ಪ್ರೀತಿ ಮಾತ್ರ

ದೇವರೊಂದಿಗಿನ ನಮ್ಮ ಸಂಬಂಧದ ಉತ್ತುಂಗದಲ್ಲಿ, ಉಳಿದೆಲ್ಲ ಲೌಕಿಕ ಬಂಧಗಳಿಂದ ನಾವು ಮುಕ್ತರಾಗುತ್ತೇವೆ. ಹೀಗೆ ಮಹಾ ಉತ್ಸಾಹದಿಂದಲೂ ದೃಢ ಉದ್ದೇಶದಿಂದಲೂ ದೇವರ ಕಡೆಗೆ ಓಡಲು ಯಾವುದೂ ನಮ್ಮನ್ನು ತಡೆಯುವುದಿಲ್ಲ.  ಈ ಜೀವನದ ಪ್ರತಿಯೊಂದು ವ್ಯಾಮೋಹದಿಂದಲೂ ನಾವು ಮುಕ್ತರಾಗಬೇಕು. ಆಗ ನಾವು ಅಂಟಿಕೊಂಡಿರುವುದು ದೇವರಿಗೆ ಮತ್ತು ಅವರ ಪವಿತ್ರ…

ಧ್ಯಾನ 272: ಹೃದಯದ ಬಾಹ್ಯ ಅಭಿವ್ಯಕ್ತಿ

ನೀವು ಮತ್ತು ದೇವರನ್ನು ಹೊರತುಪಡಿಸಿ ಬೇರೆ ಯಾರೂ ನಿಮ್ಮ ಹೃದಯವನ್ನು ನೋಡಲಾರರು.  ದೇವರಿಗೆ ನಿಮ್ಮ ಅಂತರಂಗ ಜೀವನದ ಪ್ರತಿಯೊಂದು ವಿವರವೂ ಸಂಪೂರ್ಣವಾಗಿ ತಿಳಿದಿದೆ; ಆದರೆ ನಿಮಗೆ ನಿಮ್ಮ ಅಂತರಂಗ ಜೀವನದ ವಿವರಗಳು ಅಪೂರ್ಣವಾಗಿಯೇ ಗೋಚರಿಸುತ್ತವೆ.  ಆದರೂ, ನಿಮ್ಮ ಅಂತರಂಗ ಜೀವನದ ವಾಸ್ತವತೆಯನ್ನು ಹೆಚ್ಚು ಹೆಚ್ಚು ಅರಿತುಕೊಳ್ಳುವುದು ಮುಖ್ಯವಾಗಿದೆ.  ನೋಡಿ…

ಚಿಂತನೆ 270: ದೇವರ ಚಿತ್ತದ ಸೂಕ್ಷ್ಮ ವಿವರಗಳು

ನಿಮ್ಮ ಜೀವನದಲ್ಲಿ ದೇವರ ಚಿತ್ತವನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ?  ಹಾಗಿದ್ದರೆ, ಅದರ ಎಲ್ಲ ವಿವರಗಳಿಗೂ ನೀವು ತೆರೆದ ಮನಸ್ಸಿನವರಾಗಿರಬೇಕು.  ದೇವರ ಚಿತ್ತವು ಕೇವಲ ಯಾವುದೋ ಭವ್ಯವಾದ ಸಾಮಾನ್ಯ ಕಲ್ಪನೆಯಲ್ಲ.  ಅವರ ಚಿತ್ತವನ್ನು ಆರಿಸಿಕೊಳ್ಳುವುದೆಂದರೆ, ಒಟ್ಟಾರೆಯಾಗಿ ಅವರನ್ನು ಅನುಸರಿಸಲು ಆರಿಸಿಕೊಂಡಿದ್ದೇನೆ ಎಂದು ಹೇಳುವುದಷ್ಟೇ ಅಲ್ಲ.  ಬದಲಾಗಿ, ಅವರ ಚಿತ್ತವನ್ನು ಆರಿಸಿಕೊಳ್ಳುವುದೆಂದರೆ…

ಚಿಂತನೆ 268: ಮರಣದ ಕುರಿತು ಚಿಂತಿಸುವುದು

ಬಹುಶಃ ನಿಮ್ಮ ಮರಣದ ಬಗ್ಗೆ ಯೋಚಿಸುವುದು ಭಯ ಹುಟ್ಟಿಸಬಹುದು.  ನೀವು ಅದರ ಬಗ್ಗೆ ಆಗಾಗ್ಗೆ ಯೋಚಿಸದಿರಬಹುದು.  ಆದರೆ ಒಬ್ಬರು ತಮ್ಮ ಮರಣವನ್ನು ನೇರವಾಗಿ ಮತ್ತು ಪೂರ್ಣ ಭರವಸೆಯಿಂದ ಎದುರುನೋಡಲು ಸಾಧ್ಯವಾಗುವುದು ಒಂದು ಅನುಗ್ರಹ.  ನಿಮ್ಮ ಜೀವನವು ಸರಿಯಾದ ಸ್ಥಿತಿಯಲ್ಲಿದ್ದರೆ ಮಾತ್ರ ಹೀಗೆ ಪೂರ್ಣ ಭರವಸೆಯಿಂದ ಎದುರುನೋಡಲು ಸಾಧ್ಯ…

ಧ್ಯಾನ 267: ನ್ಯಾಯವೋ ಕರುಣೆಯೋ?

ದೇವರ ನ್ಯಾಯದ ಬಗ್ಗೆಯೂ ಅವರ ಕರುಣೆಯ ಬಗ್ಗೆಯೂ ಮಾತನಾಡುವುದು ಸೂಕ್ತವೇ.  ಅವು ಒಂದಕ್ಕೊಂದು ವಿರುದ್ಧವಲ್ಲ.  ದೇವರ ಸೇವೆ ಮಾಡಲು ನಿರಾಕರಿಸಿದ ದೇವದೂತರ ಮೇಲೆ ಅವರ ನ್ಯಾಯವು ಜಾರಿಯಾದಂತೆಯೇ, ಪಶ್ಚಾತ್ತಾಪಪಡಲು ನಿರಾಕರಿಸುವವರ ಮೇಲೆಯೂ ಅದು ಜಾರಿಯಾಗುವುದು.  ಆದರೆ ಸದ್ಯಕ್ಕೆ, ದೇವರು ಕರುಣಾಮಯರು ಎಂದು ಹೇಳುವುದೇ ಹೆಚ್ಚು ಸೂಕ್ತ.  ವಾಸ್ತವವಾಗಿ…

ಧ್ಯಾನ 265: ಭಾವೋದ್ರೇಕಗಳ ಅಪಾಯ ಮತ್ತು ಆಶೀರ್ವಾದ

ದೇವರು ನಮ್ಮನ್ನು ಭಾವೋದ್ರೇಕಗಳೊಂದಿಗೆ ಸೃಷ್ಟಿಸಿದ್ದಾರೆ.  ಇವು ನಮ್ಮ ಕ್ರೈಸ್ತ ಜೀವನದ ಪಯಣದಲ್ಲಿ ಮಹತ್ತರ ಆಶೀರ್ವಾದಗಳಾಗಬಹುದು ಅಥವಾ ದೊಡ್ಡ ಬಲೆಗಳಾಗಬಹುದು.  ಪ್ರತಿಯೊಂದು ಭಾವೋದ್ರೇಕವನ್ನು ಯಾವುದು ನಿಯಂತ್ರಿಸುತ್ತದೆ ಎಂಬುದರ ಮೇಲೆ ಇದೆಲ್ಲವೂ ಅವಲಂಬಿತವಾಗಿದೆ.  ಉದಾಹರಣೆಗೆ, ಕೋಪದ ಭಾವೋದ್ರೇಕಗಳನ್ನು ಒಳಿತಿಗಾಗಿಯೂ ಕೆಡುಕಿಗಾಗಿಯೂ ಬಳಸಬಹುದು.  ಕೋಪವು ನಮ್ಮನ್ನು ಆವರಿಸಿಕೊಂಡು, ಈ ಕೋಪದ ಮೂಲವು…

ಧ್ಯಾನ 263: ಬಿರುಗಾಳಿಯಲ್ಲಿ ನಿಮ್ಮ ಚುಕ್ಕಾಣಿಗನಾಗಿರುವ ದೇವರು

ನೀವು ಸಮುದ್ರದ ಮಧ್ಯದಲ್ಲಿ ಒಂದು ಪುಟ್ಟ ದೋಣಿಯಲ್ಲಿರುವ ಚಿಕ್ಕ ಮಗುವಾಗಿದ್ದೀರಿ ಎಂದು ಕಲ್ಪಿಸಿಕೊಳ್ಳಿ.  ಬಿರುಗಾಳಿ ಏಳುತ್ತದೆ; ಯಾವ ದಿಕ್ಕಿನಲ್ಲಿಯೂ ನಿಮಗೆ ನೆಲ ಕಾಣಿಸುವುದಿಲ್ಲ.  ಅಲೆಗಳು ಅಪ್ಪಳಿಸಿದಾಗಲೆಲ್ಲ ದೋಣಿಯ ಮುಂಭಾಗವನ್ನು ಮುಳುಗಿಸುತ್ತವೆ; ಅವುಗಳಲ್ಲಿ ನೀವು ಅತ್ತಿತ್ತ ತೂಗಾಡುತ್ತಾ, ಹೇಗೆ ಬದುಕುಳಿಯುವಿರಿ ಎಂದು ಚಿಂತಿಸುತ್ತೀರಿ.  ಈಗ ನಿಮ್ಮ ಅಪ್ಪ…

ಧ್ಯಾನ 262: ಪ್ರೀತಿಯ ಅಥವಾ ನ್ಯಾಯದ ಆಳ್ವಿಕೆ

ನಾವು ದೇವರ ಹಸ್ತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ವಿಶ್ವವನ್ನು ಪೋಷಿಸಿ, ಸಮಸ್ತವೂ ಅಸ್ತಿತ್ವದಲ್ಲಿರುವಂತೆ ಕಾಪಾಡುವವರು ಅವರೇ.  ಅವರ ನಿರಂತರ ಆರೈಕೆಯಿಲ್ಲದೆ ನಮ್ಮ ಅಸ್ತಿತ್ವವೇ ಕೊನೆಗೊಳ್ಳುತ್ತಿತ್ತು.  ಆದರೆ ನಾವು ಎರಡು ರೀತಿಗಳಲ್ಲಿ ಯಾವುದಾದರೊಂದು ರೀತಿಯಲ್ಲಿ ಅವರ ಪರಿಪಾಲನೆಯ ಹಸ್ತದ ಅಡಿಯಲ್ಲಿ ಇರುತ್ತೇವೆ.  ನಾವು “ಪ್ರೀತಿಯ ಆಳ್ವಿಕೆ”ಯಿಂದ ಅಥವಾ “ನ್ಯಾಯದ ಆಳ್ವಿಕೆ”ಯಿಂದ ಮಾರ್ಗದರ್ಶನ ಪಡೆಯುತ್ತೇವೆ.  ಆ…

ಧ್ಯಾನ 261: ಇತರರಲ್ಲಿ ಅಡಗಿರುವ ಯೇಸು

ಯೇಸು ಬಡತನ, ಹಸಿವು ಮತ್ತು ಚಳಿಯಿಂದ ಬಳಲುತ್ತಾ ನಿಮ್ಮ ಬಳಿಗೆ ಬಂದು, ತಮ್ಮನ್ನು ನೋಡಿಕೊಳ್ಳುವಂತೆ ಕೇಳಿಕೊಂಡರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಿ.  ಈ ಅನುಭವವು ನಿಮ್ಮನ್ನು ಬೆಚ್ಚಿಬೀಳಿಸಿ, ಈ ವ್ಯಕ್ತಿ ನಿಜವಾಗಿಯೂ ಯೇಸುವೇ ಎಂದು ಪ್ರಶ್ನಿಸುವಂತೆ ಮಾಡಬಹುದು.  ಆದರೆ ಆ ವ್ಯಕ್ತಿ ಯೇಸುವೇ.  ಅಗತ್ಯದಲ್ಲಿರುವ ವ್ಯಕ್ತಿಯ ರೂಪದಲ್ಲಿ ಯೇಸು ಪ್ರತಿದಿನ ನಮ್ಮ ಬಳಿಗೆ ಬರುತ್ತಾರೆ.  ಬಹುಶಃ ನಾವು…