ಕನ್ನಡ

ಧ್ಯಾನ 184: ಯಾಜಕರ ಸೇವಾಕಾರ್ಯದ ಕರುಣೆ

ಇಲ್ಲ, ಯಾಜಕರು ಪರಿಪೂರ್ಣರಲ್ಲ.  ಅವರು ದಿನನಿತ್ಯ ಪಾಪ ಮಾಡುತ್ತಾರೆ.  ಉಳಿದ ಎಲ್ಲ ಮಾನವರಂತೆಯೇ ಅವರಿಗೂ ತಮ್ಮ ದೈನಂದಿನ ಜೀವನದಲ್ಲಿ ನಿರಂತರ ಪಶ್ಚಾತ್ತಾಪ ಮತ್ತು ಮನಃಪರಿವರ್ತನೆಯ ಅಗತ್ಯವಿದೆ.  ಆದರೂ ಅವರು ಯಾಜಕರು.  ಅವರ ಪವಿತ್ರ ಯಾಜಕ ದೀಕ್ಷೆಯ ಕಾರಣದಿಂದಾಗಿ ಪ್ರಭು ಅವರ ಮೂಲಕ ಸ್ಪಷ್ಟವಾದ…

ಮನನ 149: ಆಂತರಿಕ ಪ್ರೇರಣೆಗಳು

ಅಗತ್ಯದಲ್ಲಿರುವವರೊಂದಿಗೆ ದೇವರ ಕರುಣೆಯನ್ನು ಹಂಚಿಕೊಳ್ಳಲು ನಮ್ಮ ಸುತ್ತಲೂ ಅಸಂಖ್ಯಾತ ಅವಕಾಶಗಳಿವೆ.  ಆದರೆ ಈ ಅವಕಾಶಗಳನ್ನು ತಪ್ಪಿಸಿಕೊಳ್ಳುವುದು ಬಹಳ ಸುಲಭ.  ದೈವಿಕ ಕರುಣೆಯ ಸಾಧನಗಳಾಗಲು ನಾವು ನಮ್ಮನ್ನು ತೆರೆದುಕೊಳ್ಳುವ ಒಂದು ಪ್ರಮುಖ ಮಾರ್ಗವೆಂದರೆ ನಿರಂತರವಾಗಿ ಗಮನಹರಿಸಲು ಪ್ರಯತ್ನಿಸುವುದು…

ಚಿಂತನೆ 135: ಯೇಸುವಿನೊಂದಿಗೆ ಸಂಭಾಷಿಸುವುದು

ನೀವು ಯೇಸುವಿನೊಂದಿಗೆ ಸಂಭಾಷಿಸುತ್ತೀರಾ?  ಇದು ಅತ್ಯಂತ ಫಲಪ್ರದವಾದ ಪ್ರಾರ್ಥನೆಯ ಒಂದು ರೂಪವಾಗಿದೆ.  ದೇವರೊಂದಿಗೆ ನಡೆಸುವ “ಸಂಭಾಷಣೆ” ಪ್ರಾರ್ಥನೆಯ ಅತ್ಯುನ್ನತ ರೂಪವಲ್ಲ, ಆದರೆ ಅನೇಕ ಬಾರಿ ನಾವು ಪ್ರಾರ್ಥನೆಯನ್ನು ಈ ರೂಪದಲ್ಲಿಯೇ ಆರಂಭಿಸಬೇಕಾಗುತ್ತದೆ.  ಜೀವನದಲ್ಲಿ ಯಾವುದಾದರೂ ಹೊರೆಯನ್ನು ಹೊತ್ತಿರುವಾಗ ಅಥವಾ ಗೊಂದಲದಲ್ಲಿರುವಾಗ ದೇವರೊಂದಿಗೆ ಸಂಭಾಷಿಸುವುದು ವಿಶೇಷವಾಗಿ ಫಲಪ್ರದವಾಗಿರುತ್ತದೆ…

ಚಿಂತನೆ 64: ದೇವರ ಸ್ವರವನ್ನು ಆಲಿಸುವುದು

ನೀವು ದೇವಾಲಯದಲ್ಲಿರುವಾಗ ಆಲಿಸುತ್ತೀರಾ?  ನಿರ್ದಿಷ್ಟವಾಗಿ ಹೇಳುವುದಾದರೆ, ದೇವರ ಸ್ವರವನ್ನು ಆಲಿಸುತ್ತೀರಾ?  ಅನೇಕ ಬಾರಿ ನಾವು ಕುಳಿತು ಪ್ರವಚನವನ್ನು ಕೇಳುತ್ತಿರುವಾಗ ನಮ್ಮ ಮನಸ್ಸು ಅಲೆದಾಡುತ್ತದೆ; ಹೇಳಿದ್ದೆಲ್ಲವನ್ನೂ ಅಥವಾ ಅದರ ಬಹುಭಾಗವನ್ನೂ ನಾವು ತಪ್ಪಿಸಿಕೊಳ್ಳುತ್ತೇವೆ.  ನಿಮ್ಮ ಮನಸ್ಸು ಎಲ್ಲಿ ಅಲೆದಾಡುತ್ತದೆ?  ಸತ್ಯವೇನೆಂದರೆ, ಕೆಲವೊಮ್ಮೆ ಅಲೆದಾಡುವ…

ಚಿಂತನೆ 15: ದೇವರು ತಮ್ಮ ಪ್ರೀತಿಯಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ

ದೇವರಿಗೆ ಸ್ಪಂದಿಸುವುದನ್ನು ನೀವು ಮುಂದೂಡುತ್ತೀರಾ? ಅವರು ನಿರಂತರವಾಗಿ ನೀಡುವ ಕರೆಯನ್ನು ನಿರ್ಲಕ್ಷಿಸುತ್ತೀರಾ? ಅಸಂಖ್ಯಾತ ಚಿತ್ತಭಂಗಗಳ ನಡುವೆ ಅವರ ಸ್ವರ ಕೇಳಿಸದಂತೆ ಮಾಡುತ್ತೀರಾ? ದೇವರು ನಿಮ್ಮನ್ನು ಕರೆಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಅವರಿಗೆ ಕಿವಿಗೊಡಿ. ಕೆಲವೊಮ್ಮೆ ನಾವು ದೇವರಿಗೆ ಸ್ಪಂದಿಸುವುದನ್ನು ಮುಂದೂಡುತ್ತೇವೆ; ಏಕೆಂದರೆ ಜೀವನದಲ್ಲಿ ತೃಪ್ತಿಯನ್ನು ಬೇರೆ ಯಾವುದಾದರೂ…

ಚಿಂತನೆ 363: ದೇವರು ಮಾತನಾಡುವುದನ್ನು ಆಲಿಸುವುದು

ನೀವು ತುಂಬಾ ಗದ್ದಲವಿರುವ, ಜನರಿಂದ ಕಿಕ್ಕಿರಿದ ಕೋಣೆಯಲ್ಲಿದ್ದೀರಿ ಮತ್ತು ಕೋಣೆಯ ಇನ್ನೊಂದು ತುದಿಯಿಂದ ಯಾರೋ ನಿಮ್ಮೊಡನೆ ಪಿಸುಮಾತಿನಲ್ಲಿ ಮಾತನಾಡುತ್ತಿದ್ದಾರೆಂದು ಊಹಿಸಿಕೊಳ್ಳಿ.  ಅವರು ಮಾತನಾಡಲು ಪ್ರಯತ್ನಿಸುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು, ಆದರೆ ಅವರ ಮಾತುಗಳನ್ನು ಕೇಳುವುದು ಕಷ್ಟವಾಗಬಹುದು.  ದೇವರ ಸ್ವರವೂ ಬಹುಮಟ್ಟಿಗೆ ಹೀಗೆಯೇ ಇರುತ್ತದೆ.  ದೇವರು ಮಾತನಾಡುವಾಗ ಪಿಸುಮಾತಿನಲ್ಲಿ ಮಾತನಾಡುತ್ತಾರೆ.  ಅವರು ಮೃದುವಾಗಿ ಮಾತನಾಡುತ್ತಾರೆ…

ಚಿಂತನೆ 357: ಅನುಗ್ರಹದ ಪ್ರೇರಣೆಗಳು

ಯಾರಾದರೂ ಸಂಕಟದಲ್ಲಿರುವಾಗ ನೀವು ಅವರಿಂದ ದೂರ ಸರಿಯಬಹುದು.  ಅವರೊಂದಿಗೆ ಮಾತನಾಡಲು ಮುಂದಾದರೆ ನಿಮ್ಮ ಸಮಯ ಮತ್ತು ಶಕ್ತಿಯ ಮೇಲೆ ದೊಡ್ಡ ಹೊರೆ ಬೀಳುತ್ತದೆ ಎಂದು ಯೋಚಿಸುವುದು ಸುಲಭ.  ಆದರೆ ನಿಮ್ಮ ಸಂಭಾಷಣೆಯನ್ನು ಪ್ರಭುವೇ ನಡೆಸುತ್ತಿದ್ದರೆ, ಅವರು ಸ್ವಲ್ಪ ಸಮಯದಲ್ಲೇ ಅದ್ಭುತ ಕಾರ್ಯಗಳನ್ನು ಮಾಡಬಲ್ಲರು.  ನಿಜ, ಇವೆ…

ಧ್ಯಾನ 348: ದೇವರು ತಾವು ಪ್ರಕಟಿಸುವುದನ್ನು ನೆರವೇರಿಸುತ್ತಾರೆ

ಎರಡು ಸಂಗತಿಗಳನ್ನು ಒಟ್ಟಿಗೆ ಪರಿಗಣಿಸುವುದು ಆಶ್ಚರ್ಯಕರವಾಗಿದೆ.  ಮೊದಲನೆಯದಾಗಿ, ದೈವಿಕ ಕರುಣೆಯ ಹಬ್ಬವನ್ನು ಅಧಿಕೃತವಾಗಿ ಘೋಷಿಸಿ, ಪ್ರತಿ ವರ್ಷ ಪಾಸ್ಕದ ಎರಡನೆಯ ಭಾನುವಾರದಂದು ಆಚರಿಸಬೇಕೆಂಬ ತಮ್ಮ ಬಯಕೆಯನ್ನು ಯೇಸು ಸಂತ ಫೌಸ್ಟಿನಾರಿಗೆ ಮತ್ತೆ ಮತ್ತೆ ತಿಳಿಸಿದ್ದನ್ನು ಪರಿಗಣಿಸಿ.  ಮಠದ ಏಕಾಂತವಾಸದಲ್ಲಿದ್ದ ಈ ವಿನಮ್ರ ಕನ್ಯಾಸ್ತ್ರೀ ಇಂತಹ ಕಾರ್ಯವನ್ನು ಹೇಗೆ ಸಾಧಿಸಬೇಕಿತ್ತು…

ಚಿಂತನೆ 338: ರಹಸ್ಯವನ್ನು ಕಾಪಾಡುವುದು

ಇನ್ನೊಬ್ಬರಿಗೆ ನಾವು ತೋರಿಸಬಹುದಾದ ಪ್ರೀತಿಯ ಒಂದು ಕ್ರಿಯೆಯೆಂದರೆ ಅವರ ವಿಷಯಗಳನ್ನು ಗೌಪ್ಯವಾಗಿಡುವುದು.  ಜನರು ಸಮಸ್ಯೆಯೊಂದನ್ನು ಅಥವಾ ಗೊಂದಲವನ್ನು ಹೊತ್ತು ನಮ್ಮ ಬಳಿಗೆ ಬಂದು, ಅದನ್ನು ಯಾರಿಗೂ ಹೇಳಬಾರದೆಂದು ಕೇಳಿಕೊಂಡ ಅನುಭವ ನಮ್ಮೆಲ್ಲರಿಗೂ ಇದೆ.  ಈ ರೀತಿಯ ಪವಿತ್ರ ರಹಸ್ಯವನ್ನು ನೀವು ಕಾಪಾಡಬಲ್ಲಿರಾ?  ಗೌಪ್ಯತೆಯನ್ನು ಕಾಪಾಡುವುದು ಇತರರಿಗೆ ತೋರುವ ಅದ್ಭುತವಾದ ಕರುಣೆಯ ಕಾರ್ಯವಾಗಿದೆ.  ಒಂದು ವೇಳೆ…