ಕನ್ನಡ

ಚಿಂತನೆ 354: ಪಾಪದ ಜಾಲವನ್ನು ಬಿಡಿಸುವುದು

ಒಬ್ಬ ವ್ಯಕ್ತಿ ಸುಳ್ಳು ಹೇಳಲು ಆರಂಭಿಸಿ, ಅದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡಾಗ, ಕೊನೆಗೆ ಸುಳ್ಳಿನ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಒಂದು ಸುಳ್ಳು ಮತ್ತೊಂದು ಸುಳ್ಳಿಗೆ ದಾರಿಮಾಡಿಕೊಡುತ್ತದೆ; ಸ್ವಲ್ಪ ಸಮಯದಲ್ಲೇ ಈ ಜಾಲದಿಂದ ಹೇಗೆ ಬಿಡಿಸಿಕೊಳ್ಳಬೇಕೆಂದು ಅವರಿಗೆ ತಿಳಿಯದಂತಾಗುತ್ತದೆ. ಇಂತಹ ಸಂದರ್ಭದಲ್ಲೇ ನೀವು ಕರುಣೆ ತೋರಿಸಬೇಕು. ಕಠೋರವಾಗಿ ವರ್ತಿಸುವುದು ಬಹಳ ಸುಲಭ…

ಚಿಂತನೆ 353: ಮಹಿಮೆಯ ಸ್ತುತಿಗೀತೆ

ಸಂಗೀತವು ದೇವರ ಸೃಷ್ಟಿಯ ಸಹಜ ವಿನ್ಯಾಸದಲ್ಲಿ ಕಂಡುಬರುವ ಸುವ್ಯವಸ್ಥೆ ಮತ್ತು ಲಯವನ್ನು ಆಧರಿಸಿ, ಅದರ ನೈಸರ್ಗಿಕ ನಿಯಮಗಳನ್ನು ಕಂಡುಕೊಳ್ಳುವ ಮತ್ತು ವ್ಯಕ್ತಪಡಿಸುವ ಒಂದು ವಿಧಾನವಾಗಿದೆ.  ಕೆಲವು ಸಂಗೀತವು ಲೌಕಿಕ ಸಂಗತಿಗಳನ್ನು ವೈಭವೀಕರಿಸಲು ಸೃಷ್ಟಿಯ ಸಹಜ ಕ್ರಮವನ್ನು ಬಳಸುತ್ತದೆ.  ಸಂಗೀತದ ಕೆಲವು ರೂಪಗಳು ಪಾಪ ಮತ್ತು ಅವ್ಯವಸ್ಥೆಯನ್ನೂ ವ್ಯಕ್ತಪಡಿಸುತ್ತವೆ.  ಆದರೆ…

ಚಿಂತನೆ 351: ದೇವರನ್ನು ತಿಳಿದುಕೊಳ್ಳುವುದು ಅಥವಾ ಅನುಭವಿಸುವುದು

ದೇವರನ್ನು ತಿಳಿದುಕೊಳ್ಳುವುದು ನಿಮ್ಮ ನಿರಂತರ ಗುರಿಯಾಗಿರಬೇಕು.  ಪವಿತ್ರ ಗ್ರಂಥ, ಧರ್ಮಸಭೆಯ ಬೋಧನೆಗಳು ಮತ್ತು ಸಂತರ ಜೀವನಗಳ ಅಧ್ಯಯನವು ಈ ಪ್ರಯತ್ನದಲ್ಲಿ ನೆರವಾಗುತ್ತದೆ.  ಆದರೆ ದೇವರನ್ನು ತಿಳಿದುಕೊಳ್ಳುವುದೇ ಜೀವನದ ಪರಮ ಗುರಿಯಲ್ಲ.  ಜ್ಞಾನವು ವಿಶ್ವಾಸದಿಂದ ಬರುತ್ತದೆ; ವಿಶ್ವಾಸವು ದೇವರ ಕೊಡುಗೆಯಾಗಿದೆ.  ಆದರೆ ಸಂಪೂರ್ಣವಾಗಿ…

ಚಿಂತನೆ 346: ಇತರರ ವರಗಳು

ಇತರರ ಜೀವನದಲ್ಲಿರುವ ದೇವರ ವರಗಳನ್ನು ಗುರುತಿಸಿ, ಅದಕ್ಕಾಗಿ ಸಂತೋಷಪಡುವುದು ನೀವು ಅವರಿಗೆ ತೋರಿಸಬಹುದಾದ ಕರುಣೆಯ ಒಂದು ಕಾರ್ಯವಾಗಿದೆ.  ವಿಷಾದಕರವಾಗಿ, ಇತರರ ಬಗ್ಗೆ ಅಸೂಯೆ ಅಥವಾ ಈರ್ಷೆಪಡುವ ಪ್ರಲೋಭನೆ ಅನೇಕ ಬಾರಿ ಉಂಟಾಗಬಹುದು; ವಿಶೇಷವಾಗಿ ಅವರ ಪ್ರಕೃತಿಸಹಜ ಪ್ರತಿಭೆಗಳನ್ನು ಅಥವಾ ಅವರ ಜೀವನದಲ್ಲಿ ದೇವರ ಅನುಗ್ರಹವನ್ನು ನೀವು ಕಂಡಾಗ.  ಆದರೆ…

ಮನನ 344: ಪಾಪದ ಬಗ್ಗೆ ಆತಂಕಪಡುವುದನ್ನು ನಿಲ್ಲಿಸಿ

ಇದು ಅಸಾಮಾನ್ಯ ಶೀರ್ಷಿಕೆಯಂತೆ ತೋರಬಹುದು.  ಪಾಪವನ್ನು ತಪ್ಪಿಸಲು ನೀವು ಶ್ರದ್ಧೆಯಿಂದ ಪ್ರಯತ್ನಿಸಬೇಕೆಂಬ ಅರ್ಥದಲ್ಲಿ, ಪಾಪದ ಬಗ್ಗೆ ನಿಮಗೆ ಕಾಳಜಿ ಇರಬೇಕು.  ಆದರೆ ದೇವರ ಕರುಣೆಯ ಕುರಿತು ನಿಮ್ಮ ತಿಳಿವಳಿಕೆಯು ಸಾಗರಕ್ಕೆ ಹೋಲಿಸಿದರೆ ಕೇವಲ ಒಂದು ಹನಿ ನೀರಷ್ಟೇ ಎಂದು ನೀವು ಅರಿತುಕೊಂಡರೆ, ನೀವು ಅವಕಾಶ ಕೊಡುವುದಿಲ್ಲ…

ಮನನ 343: ಎಲ್ಲದರಲ್ಲಿಯೂ ಪ್ರಭುವನ್ನು ಮಹಿಮೆಪಡಿಸುವುದು

ಎಲ್ಲವೂ ಸುಗಮವಾಗಿ ಸಾಗುವಾಗ ಮಾತ್ರ ಕೃತಜ್ಞರಾಗಿರುವುದು ಸುಲಭ.  ಆದರೆ ಕಷ್ಟದ ಸಮಯದಲ್ಲಿ ನಾವು ಆತ್ಮಾನುಕಂಪದಿಂದ ನಮ್ಮೊಳಗೇ ಮುಳುಗಿಹೋಗುವ ಪ್ರವೃತ್ತಿ ಹೊಂದಿರುತ್ತೇವೆ.  ಆದರೆ ನೀವು ಎಲ್ಲದರಲ್ಲಿಯೂ ಪ್ರಭುವನ್ನು ಮಹಿಮೆಪಡಿಸಲು ಕಲಿಯಬೇಕು.  ದೇವರು ನಿಮಗೆ ನೀಡುವ ಅಸಂಖ್ಯಾತ ಆಶೀರ್ವಾದಗಳು ಮತ್ತು ಅನುಗ್ರಹಗಳಿಗಾಗಿ ನೀವು ಅಪಾರವಾದ…

ಚಿಂತನೆ 338: ರಹಸ್ಯವನ್ನು ಕಾಪಾಡುವುದು

ಇನ್ನೊಬ್ಬರಿಗೆ ನಾವು ತೋರಿಸಬಹುದಾದ ಪ್ರೀತಿಯ ಒಂದು ಕ್ರಿಯೆಯೆಂದರೆ ಅವರ ವಿಷಯಗಳನ್ನು ಗೌಪ್ಯವಾಗಿಡುವುದು.  ಜನರು ಸಮಸ್ಯೆಯೊಂದನ್ನು ಅಥವಾ ಗೊಂದಲವನ್ನು ಹೊತ್ತು ನಮ್ಮ ಬಳಿಗೆ ಬಂದು, ಅದನ್ನು ಯಾರಿಗೂ ಹೇಳಬಾರದೆಂದು ಕೇಳಿಕೊಂಡ ಅನುಭವ ನಮ್ಮೆಲ್ಲರಿಗೂ ಇದೆ.  ಈ ರೀತಿಯ ಪವಿತ್ರ ರಹಸ್ಯವನ್ನು ನೀವು ಕಾಪಾಡಬಲ್ಲಿರಾ?  ಗೌಪ್ಯತೆಯನ್ನು ಕಾಪಾಡುವುದು ಇತರರಿಗೆ ತೋರುವ ಅದ್ಭುತವಾದ ಕರುಣೆಯ ಕಾರ್ಯವಾಗಿದೆ.  ಒಂದು ವೇಳೆ…

ಧ್ಯಾನ 336: ಲೋಕದ ಐಶ್ವರ್ಯವೋ…ಅಥವಾ ದೇವರೋ?

ನಾವು ಎಷ್ಟು ಬಾರಿ ಲೌಕಿಕ ಸೊತ್ತುಗಳನ್ನು ಬಯಸುತ್ತೇವೆ ಎಂಬುದು ಕುತೂಹಲಕರವಾಗಿದೆ.  ಜಗತ್ತಿನ ಎಲ್ಲ ಸಂಪತ್ತು ನಿಮಗೊಬ್ಬರಿಗೇ ಸೇರಿದ್ದರೂ, ಅದು ನಿಮ್ಮ ಹೃದಯದ ಹಂಬಲವನ್ನು ತಣಿಸಲಾರದು.  ನಿಮ್ಮೊಳಗಿನ ಶೂನ್ಯತೆಯನ್ನು ತುಂಬುವುದು ಒಂದೇ ಒಂದು ಸಂಗತಿ; ಅದು ಪ್ರಭು ಮತ್ತು ಅವರ ಪವಿತ್ರ ಚಿತ್ತ.  ಬೇರೆ ಯಾವುದೂ…

ಧ್ಯಾನ 334: ಆತ್ಮಗಳ ಸೇವೆ

ನಮಗೆ ನೀಡಲಾಗಿರುವ ಅತ್ಯಂತ ದೊಡ್ಡ ಆಶೀರ್ವಾದಗಳಲ್ಲಿ ಒಂದು ಇತರರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ.  ನಾವು ಅನೇಕ ರೀತಿಗಳಲ್ಲಿ, ವಿಶೇಷವಾಗಿ ನಮ್ಮ ನಿರ್ದಿಷ್ಟ ಕರೆಯನುಸಾರ ಅವರಿಗೆ ಸೇವೆ ಸಲ್ಲಿಸುತ್ತೇವೆ.  ಆದರೆ ಒಬ್ಬ ವ್ಯಕ್ತಿಗೆ ನಾವು ಸಲ್ಲಿಸಬಹುದಾದ ಅತ್ಯಂತ ದೊಡ್ಡ ಸೇವೆಯೆಂದರೆ, ದೇವರ ಕರುಣೆಯ ಸೇವಕರಾಗಿ ಅವರನ್ನು ಮಹಿಮೆಗಳ ಕಡೆಗೆ ನಡೆಸುವುದು…

ಚಿಂತನೆ 333: ಸರಳತೆ

ಕೆಲವೊಮ್ಮೆ ಜೀವನವು ಸಂಕೀರ್ಣವಾಗಿ ತೋರಬಹುದು; ನಾವೂ ಹಾಗೆಯೇ ತೋರಬಹುದು.  ಆದರೆ ಸತ್ಯವೇನೆಂದರೆ, ನಾವು ಜೀವನದ ಸಂಕೀರ್ಣತೆಗಳನ್ನು ಮೀರಿ, ದೇವರ ದೃಷ್ಟಿಯಿಂದಲೂ ಅವರ ಚಿತ್ತದ ಪ್ರಕಾರವೂ ಜೀವನವು ಸರಳವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು.  ಅದು ಸರಳವಾಗಿರುವುದೇಕೆಂದರೆ, ನಾವು ಮಾಡಬೇಕಾಗಿರುವುದೆಲ್ಲವೂ ಪ್ರತಿದಿನ ಅವರಿಗೆ “ಹೌದು” ಎಂದು ಹೇಳಿ, ಎಲ್ಲವನ್ನೂ ಅವರಿಗೆ ಸಮರ್ಪಿಸಿ, ಭರವಸೆಯಿಡುವುದು…