ಕನ್ನಡ

ಧ್ಯಾನ 124: ಮಧ್ಯಸ್ಥ ಪ್ರಾರ್ಥನೆಯ ಕರುಣೆ

ದೇವರ ದೈವಿಕ ಕರುಣೆಯು ಲೋಕದ ಮೇಲೆ ಸಮೃದ್ಧವಾಗಿ ಹರಿಯುವುದನ್ನು ನೋಡಲು ನೀವು ಬಯಸುತ್ತೀರಾ?  ಆ ಪ್ರಶ್ನೆಗೆ ನಿಮ್ಮ ಉತ್ತರ ಸುಲಭವಾಗಿ “ಹೌದು” ಎಂದೇ ಆಗಿರುತ್ತದೆ ಎಂದು ಆಶಿಸಬಹುದು, ಊಹಿಸಲೂಬಹುದು.  ಅದು ಸಂಭವಿಸುತ್ತದೆಯೋ ಇಲ್ಲವೋ ಎಂಬುದಕ್ಕೆ ಕೆಲವು ರೀತಿಗಳಲ್ಲಿ ನೀವೂ ಜವಾಬ್ದಾರರು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.  ನಿರ್ದಿಷ್ಟವಾಗಿ ಹೇಳುವುದಾದರೆ, ಯೇಸು…

ಧ್ಯಾನ 123: ಅವಮಾನಗಳ ಆಶೀರ್ವಾದ

ಸ್ವಸ್ಥ ಮನಸ್ಸಿರುವ ಯಾರು ತಾನೇ ಅವಮಾನಕ್ಕೊಳಗಾಗಲು ಬಯಸುತ್ತಾರೆ?  ನೀವು ಅವಮಾನಕ್ಕೊಳಗಾದರೆ ಏನು ಮಾಡುತ್ತೀರಿ?  ಹೆಚ್ಚಿನ ಜನರಿಗೆ ಅವಮಾನವನ್ನು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಬೇಕೆಂಬ ಪ್ರಲೋಭನೆ ಉಂಟಾಗುತ್ತದೆ. ಕೆಲವರು ಅದರಿಂದ ಆಳವಾಗಿ ನೊಂದುಕೊಳ್ಳುತ್ತಾರೆ.  ಇನ್ನು ಕೆಲವರು ಕೋಪಗೊಂಡು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ.  ಮತ್ತು…

ಧ್ಯಾನ 121: ನಿಮ್ಮ ಹೃದಯದ ರಹಸ್ಯ ಒಳತೋಟ

ನಿಮ್ಮ ಮನೆಯಲ್ಲಿ ಹೊರಗಿನವರಿಗೆ ಕಾಣದ ಒಳಾಂಗಣವಿದ್ದು, ಅಲ್ಲಿ ನಿಮ್ಮದೊಂದು ತೋಟವಿದೆ ಎಂದು ಕಲ್ಪಿಸಿಕೊಳ್ಳಿ.  ಈ ರಹಸ್ಯ ತೋಟದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.  ಅಲ್ಲಿ ನೀವು ಗಿಡಗಳನ್ನು ನೆಟ್ಟು, ನೆಲವನ್ನು ಉಳುಮೆ ಮಾಡಿ, ಶ್ರಮಿಸಿ, ಕಳೆ ಕಿತ್ತು, ಫಸಲು ಕೊಯ್ಯುತ್ತಿದ್ದಿರಿ.  ಬಳಿಕ ಈ ತೋಟದ ಬೆಳೆಯನ್ನು ರಹಸ್ಯವಾಗಿ ಹಂಚಲಾಗುತ್ತಿತ್ತು…

ಧ್ಯಾನ 118: ಹಠಮಾರಿ ಹೃದಯ

ದೇವರ ಕರುಣೆಯು ನಮ್ಮ ಜೀವನವನ್ನು ಪ್ರವೇಶಿಸದಂತೆ ನಾವು ತಡೆಯುವ ಪ್ರಮುಖ ಮಾರ್ಗಗಳಲ್ಲಿ ಒಂದು ಹಠಮಾರಿತನ.  ನಿರ್ದಿಷ್ಟವಾಗಿ ಹೇಳುವುದಾದರೆ, ನಮ್ಮ ಅಹಂಕಾರದ ಕಾರಣದಿಂದ ನಾವು ನಮ್ಮದೇ ಅಭಿಪ್ರಾಯಕ್ಕೆ ಹಠದಿಂದ ಅಂಟಿಕೊಂಡು, ಸತ್ಯಕ್ಕೆ ತೆರೆದುಕೊಳ್ಳಲು ವಿಫಲರಾದಾಗ, ಅನುಗ್ರಹದ ಬಾಗಿಲನ್ನು ಮುಚ್ಚುತ್ತೇವೆ.  ಇದು…

ಧ್ಯಾನ 115: ದೇವರ ಚಿತ್ತವು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ದೇವರ ಚಿತ್ತವೆಂದರೆ ಅವರು ನಿಮಗಾಗಿ ರೂಪಿಸಿರುವ ಭವಿಷ್ಯದ ಯೋಜನೆಗಿಂತಲೂ ಬಹಳ ಹೆಚ್ಚಿನದು.  ಅದು ನಿಮ್ಮ ಕುರಿತಾದ ಅವರ ಆಶೆ ಮತ್ತು ಕನಸುಗಳಿಗಿಂತಲೂ ಹೆಚ್ಚಿನದು.  ಅವರ ಚಿತ್ತವು ಪಾವಿತ್ರ್ಯದ ಕಡೆಗೆ ನಿಮ್ಮನ್ನು ನಡೆಸುವ ಮಾರ್ಗವಾಗಿದೆ; ಅದು ಅತ್ಯಂತ ಹೆಚ್ಚಿನ ಸಾಂತ್ವನ ಮತ್ತು ಆನಂದದ ಮೂಲವೂ ಆಗಿದೆ.  ಅವರ ಚಿತ್ತವು ಸಕ್ರಿಯವೂ ನಿಷ್ಕ್ರಿಯವೂ (ಅನುಮತಿಸುವಂಥದ್ದೂ) ಆಗಿದೆ.  ಅದು…

ಚಿಂತನೆ 110: ಕರುಣೆಯ ಕಿರಣಗಳು

ಯೇಸುವಿನ ಹೃದಯದ ಕರುಣೆಯು ಮಹಾ ತೇಜಸ್ಸಿನಿಂದ ಪ್ರಕಾಶಿಸುತ್ತದೆ.  ಸಂತ ಫೌಸ್ಟಿನಾ ಕಂಡ ದೈವಿಕ ಕರುಣೆಯ ಚಿತ್ರಣ ಇದೇ ಆಗಿತ್ತು.  ನಮ್ಮ ಪ್ರಭುವಿನ ತೆರೆದ ಹೃದಯದಿಂದ ಬೆಳಕು ಮತ್ತು ಅನುಗ್ರಹವು ಲೋಕದ ಮೇಲೆ ಧಾರಾಳವಾಗಿ ಹರಿದುಬಂದವು.  ಯೇಸು ಲೋಕದ ಮೇಲೆ ನಿರಂತರವಾಗಿ ಪ್ರಕಾಶಿಸಲು ಬಯಸುತ್ತಾರೆ…

ಧ್ಯಾನ 108: ಧರ್ಮಸಭೆಯ ವಾಣಿ

ದೇವರು ಅನೇಕ ಆಂತರಿಕ ಅನುಗ್ರಹಗಳು ಮತ್ತು ಪ್ರೇರಣೆಗಳ ಮೂಲಕವೂ ಸೇರಿದಂತೆ ನಾನಾ ರೀತಿಗಳಲ್ಲಿ ಸಂತರೊಂದಿಗೆ ಮಾತನಾಡಿದ್ದಾರೆ.  ಆದರೆ ಪಾವಿತ್ರ್ಯದ ಉನ್ನತ ಮಟ್ಟದಲ್ಲಿ ಜೀವಿಸುವ ಅತ್ಯಂತ ಶ್ರೇಷ್ಠ ಅನುಭಾವಿಯೂ ಅಂತಿಮವಾಗಿ ಧರ್ಮಸಭೆಯ ಮೂಲಕ ನುಡಿಯುವ ದೇವರ ವಾಣಿಗೆ ವಿಧೇಯರಾಗಬೇಕು.  ಧರ್ಮಸಭೆಯು, ವಿಶೇಷವಾಗಿ…

ಚಿಂತನೆ 107: ಪಾಪನಿವೇದನೆಯಲ್ಲಿ ನಿಮ್ಮ ಆತ್ಮವನ್ನು ತೆರೆದಿಡುವುದು

ದೇವರು ತಮ್ಮ ಯಾಜಕರ ಮೂಲಕ ತಮ್ಮ ಪ್ರತಿನಿಧಿಗಳನ್ನು ನಮ್ಮ ಬಳಿಗೆ ಕಳುಹಿಸುತ್ತಾರೆ.  ಯಾಜಕರು ಪರಿಪೂರ್ಣರಲ್ಲದಿದ್ದರೂ, ಅವರು ದೇವರ ಪ್ರತಿನಿಧಿಗಳೇ ಆಗಿದ್ದಾರೆ.  ಪುನರ್ಮಿಲನ ಸಂಸ್ಕಾರದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.  ನಾವು ಆ ಸಂಸ್ಕಾರವನ್ನು ಸಮೀಪಿಸುವುದು ಅತ್ಯಗತ್ಯ…

ಧ್ಯಾನ 106: ಕ್ರಿಸ್ತನಲ್ಲಿ ನಿದ್ರಿಸುವುದು

ಪ್ರತಿರಾತ್ರಿಯೂ ನೀವು ನಿದ್ರಿಸಲು ಹೋಗುವಾಗ, ನಮ್ಮ ಪ್ರಭುವಿನ ಅನುಗ್ರಹ ಮತ್ತು ಕರುಣೆಯಲ್ಲಿ ನಿದ್ರಿಸಲು ನಿಮಗೆ ಆಹ್ವಾನವಿದೆ.  ನವಚೇತನ ಮತ್ತು ಉಲ್ಲಾಸವನ್ನು ಪಡೆಯಲು ಅವರ ಬಾಹುಗಳಲ್ಲಿ ವಿಶ್ರಮಿಸಲು ನಿಮಗೆ ಆಹ್ವಾನವಿದೆ.  ನಿದ್ರೆಯು ಪ್ರಾರ್ಥನೆಯ ಪ್ರತಿರೂಪವಾಗಿದೆ; ನಿಜಕ್ಕೂ ಅದು ಪ್ರಾರ್ಥನೆಯ ಒಂದು ರೂಪವಾಗಬಹುದು.  ವಿಶ್ರಮಿಸುವುದೆಂದರೆ ದೇವರಲ್ಲಿ ವಿಶ್ರಮಿಸುವುದು.  ಪ್ರತಿಯೊಂದು…

ಧ್ಯಾನ 100: ಒಳಿತಿಗಾಗಿ ಬಯಕೆ

ನಾವು ದೇವರಿಗೂ ಇತರರಿಗೂ ತೋರುವ ಪ್ರೀತಿಗಾಗಿ ದೇವರು ನಮ್ಮನ್ನು ಮೆಚ್ಚಿ ನಮಗೆ ಹೇರಳವಾಗಿ ಪ್ರತಿಫಲಗಳನ್ನು ನೀಡುತ್ತಾರೆ.  ಅವರ ಅನುಗ್ರಹದಿಂದ ಪ್ರೇರಿತವಾದ ನಮ್ಮ ಪ್ರೀತಿಯ ಕಾರ್ಯಗಳು ಸ್ವರ್ಗದಲ್ಲಿ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತವೆ.  ಆದರೆ ಸಂಪತ್ತಾಗಿ ಪರಿವರ್ತನೆಗೊಳ್ಳುವುದು ಅಷ್ಟೇ ಅಲ್ಲ.  ಒಳಿತನ್ನು ಮಾಡಬೇಕೆಂಬ ನಮ್ಮ ಬಯಕೆಯೂ ಸಹ…