ಕನ್ನಡ

ಧ್ಯಾನ 126: ಪುತ್ರೋಚಿತ ಭಯ – ಹಿತಕರ ಭಯ

ನಿಮ್ಮ ಜೀವನದಲ್ಲಿ ಭಯವಿದೆಯೇ? ಕೆಲವು ರೀತಿಯ ಭಯವು ಅಹಂಕಾರದಿಂದ ಹುಟ್ಟುವುದರಿಂದ ತುಂಬಾ ಅಹಿತಕರವಾಗಿರುತ್ತದೆ; ಇನ್ನೊಂದು ರೀತಿಯ ಭಯವು ದೇವರ ಮೇಲಿನ ನಿಮ್ಮ ಗಾಢವಾದ ಪ್ರೀತಿಯಿಂದ ಉಂಟಾಗುವುದರಿಂದ ತುಂಬಾ ಹಿತಕರವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. “ಪವಿತ್ರ ಭಯ” ಎಂದರೆ ಪುತ್ರೋಚಿತ ಭಯ, ಅಂದರೆ ದೇವರ ಮಗುವಿಗೆ ಇರುವ ಭಯ. ಈ…

ಧ್ಯಾನ 125: ಬಲಿಯಾಗಿ ಅರ್ಪಿತವಾದ ಆತ್ಮ

ನಮ್ಮ ಪ್ರಭು ಕೆಲವು ವ್ಯಕ್ತಿಗಳನ್ನು ಯಾತನೆಯ ಒಂದು ನಿರ್ದಿಷ್ಟ ಧ್ಯೇಯಕ್ಕಾಗಿ ಆರಿಸಿಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?  ಈ ಭೂಮಿಯ ಮೇಲೆ ತಾವು ನಿರ್ದೋಷಿಯಾಗಿ ಅನುಭವಿಸಿದ ಯಾತನೆಗೆ ಇನ್ನಷ್ಟು ಪೂರ್ಣವಾಗಿ ಸಾದೃಶ್ಯ ಹೊಂದುವಂತೆ ಅವರು ಕೆಲವೇ ವ್ಯಕ್ತಿಗಳನ್ನು ಆರಿಸಿಕೊಳ್ಳುತ್ತಾರೆ.  ಈ ಪವಿತ್ರ ಆತ್ಮಗಳು ಅನೇಕ ಬಗೆಯ ಯಾತನೆಗಳನ್ನು ಅನುಭವಿಸುತ್ತವೆ.  ಅವರಲ್ಲಿ ಮುಂದುವರಿಯುವುದು…

ಧ್ಯಾನ 124: ಮಧ್ಯಸ್ಥ ಪ್ರಾರ್ಥನೆಯ ಕರುಣೆ

ದೇವರ ದೈವಿಕ ಕರುಣೆಯು ಲೋಕದ ಮೇಲೆ ಸಮೃದ್ಧವಾಗಿ ಹರಿಯುವುದನ್ನು ನೋಡಲು ನೀವು ಬಯಸುತ್ತೀರಾ?  ಆ ಪ್ರಶ್ನೆಗೆ ನಿಮ್ಮ ಉತ್ತರ ಸುಲಭವಾಗಿ “ಹೌದು” ಎಂದೇ ಆಗಿರುತ್ತದೆ ಎಂದು ಆಶಿಸಬಹುದು, ಊಹಿಸಲೂಬಹುದು.  ಅದು ಸಂಭವಿಸುತ್ತದೆಯೋ ಇಲ್ಲವೋ ಎಂಬುದಕ್ಕೆ ಕೆಲವು ರೀತಿಗಳಲ್ಲಿ ನೀವೂ ಜವಾಬ್ದಾರರು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.  ನಿರ್ದಿಷ್ಟವಾಗಿ ಹೇಳುವುದಾದರೆ, ಯೇಸು…

ಧ್ಯಾನ 122: ನೀವು ಆಯ್ಕೆ ಮಾಡಬಹುದಾದರೆ

ಜಗತ್ತಿನ ಎಲ್ಲ ಸಂಪತ್ತು ಮತ್ತು ಯೇಸುವಿನೊಂದಿಗಿನ ಆಪ್ತವಾದ, ಪ್ರೀತಿಭರಿತ ಸಂಬಂಧ — ಇವೆರಡರಲ್ಲಿ ನೀವು ಆಯ್ಕೆ ಮಾಡಬಹುದಾದರೆ, ಯಾವುದನ್ನು ಆರಿಸಿಕೊಳ್ಳುತ್ತೀರಿ?  ಅದಕ್ಕೆ ಅಷ್ಟು ಬೇಗ ಉತ್ತರಿಸಬೇಡಿ.  ಯೇಸುವನ್ನು ಆರಿಸಿಕೊಳ್ಳುವುದೇ ಸರಿಯಾದ ಉತ್ತರವೆಂದು ನಮಗೆ ತಿಳಿದಿರಬಹುದು, ಆದರೆ ನೀವು ಅವರನ್ನು ಆರಿಸಿಕೊಳ್ಳುತ್ತೀರಾ?  ನೀವು ಅನುಭವಿಸಬಹುದಾದ ಅಧಿಕಾರ ಮತ್ತು ಲೌಕಿಕ “ಸ್ವಾತಂತ್ರ್ಯ”ವನ್ನು ಕಲ್ಪಿಸಿಕೊಳ್ಳಿ…

ಧ್ಯಾನ 121: ನಿಮ್ಮ ಹೃದಯದ ರಹಸ್ಯ ಒಳತೋಟ

ನಿಮ್ಮ ಮನೆಯಲ್ಲಿ ಹೊರಗಿನವರಿಗೆ ಕಾಣದ ಒಳಾಂಗಣವಿದ್ದು, ಅಲ್ಲಿ ನಿಮ್ಮದೊಂದು ತೋಟವಿದೆ ಎಂದು ಕಲ್ಪಿಸಿಕೊಳ್ಳಿ.  ಈ ರಹಸ್ಯ ತೋಟದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.  ಅಲ್ಲಿ ನೀವು ಗಿಡಗಳನ್ನು ನೆಟ್ಟು, ನೆಲವನ್ನು ಉಳುಮೆ ಮಾಡಿ, ಶ್ರಮಿಸಿ, ಕಳೆ ಕಿತ್ತು, ಫಸಲು ಕೊಯ್ಯುತ್ತಿದ್ದಿರಿ.  ಬಳಿಕ ಈ ತೋಟದ ಬೆಳೆಯನ್ನು ರಹಸ್ಯವಾಗಿ ಹಂಚಲಾಗುತ್ತಿತ್ತು…

ಧ್ಯಾನ 120: ದೇವರ ಮೇಲಿನ ನಿರ್ಮಲ ಪ್ರೀತಿ

ನಿಮ್ಮ ಜೀವನದ ಪರಮ ಉದ್ದೇಶ ಪ್ರೀತಿಯೇ.  ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಮೊತ್ತಮೊದಲು ದೇವರನ್ನು ನಿರ್ಮಲ ಪ್ರೀತಿಯಿಂದ ಪ್ರೀತಿಸುವುದೇ ಆಗಿದೆ.  ಪ್ರೀತಿಯು ನಿರ್ಮಲವಾಗಿರಬೇಕಾದರೆ, ಅದು ಎಲ್ಲ ಸ್ವಾರ್ಥದಿಂದ ಮುಕ್ತವಾಗಿರಬೇಕು.  ನಿರ್ಮಲ ಪ್ರೀತಿಯು ತಾನು ಪ್ರೀತಿಸುವವರನ್ನು ಮಾತ್ರ ನೋಡುತ್ತದೆ.  ನಾವು ದೇವರನ್ನು ನಿರ್ಮಲ ಪ್ರೀತಿಯಿಂದ ಪ್ರೀತಿಸುವಾಗ, ನಾವು…

ಧ್ಯಾನ 119: ಆಂತರಿಕ ಮತ್ತು ಬಾಹ್ಯ ಆತ್ಮನಿಗ್ರಹ

ಆತ್ಮನಿಗ್ರಹವೆಂದರೆ ಈ ಲೋಕದ ಕ್ಷಣಿಕ ವಸ್ತುಗಳಿಂದ ಇನ್ನಷ್ಟು ಅನಾಸಕ್ತರಾಗಲು ನಮ್ಮ ಸ್ವಂತ ಇಚ್ಛೆಯನ್ನು ತ್ಯಜಿಸುವ ಅಭ್ಯಾಸ.  ದೇವರು ಮತ್ತು ಅವರ ಪವಿತ್ರ ಚಿತ್ತವನ್ನು ಹೊರತುಪಡಿಸಿ ಉಳಿದೆಲ್ಲದರಿಂದಲೂ ಅನಾಸಕ್ತರಾಗಲು ನಾವು ಪ್ರಯತ್ನಿಸಬೇಕು.  ನಾವು ಇಷ್ಟಪಡುವ ಅಥವಾ ಬಯಸುವ ಪ್ರತಿಯೊಂದೂ ಕೆಟ್ಟದ್ದೆಂದಲ್ಲ; ಆದರೆ ನಾವು ನಿಜವಾದ ಪವಿತ್ರತೆಯನ್ನು ಬಯಸುವುದಾದರೆ, ನಮ್ಮ…

ಧ್ಯಾನ 115: ದೇವರ ಚಿತ್ತವು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ದೇವರ ಚಿತ್ತವೆಂದರೆ ಅವರು ನಿಮಗಾಗಿ ರೂಪಿಸಿರುವ ಭವಿಷ್ಯದ ಯೋಜನೆಗಿಂತಲೂ ಬಹಳ ಹೆಚ್ಚಿನದು.  ಅದು ನಿಮ್ಮ ಕುರಿತಾದ ಅವರ ಆಶೆ ಮತ್ತು ಕನಸುಗಳಿಗಿಂತಲೂ ಹೆಚ್ಚಿನದು.  ಅವರ ಚಿತ್ತವು ಪಾವಿತ್ರ್ಯದ ಕಡೆಗೆ ನಿಮ್ಮನ್ನು ನಡೆಸುವ ಮಾರ್ಗವಾಗಿದೆ; ಅದು ಅತ್ಯಂತ ಹೆಚ್ಚಿನ ಸಾಂತ್ವನ ಮತ್ತು ಆನಂದದ ಮೂಲವೂ ಆಗಿದೆ.  ಅವರ ಚಿತ್ತವು ಸಕ್ರಿಯವೂ ನಿಷ್ಕ್ರಿಯವೂ (ಅನುಮತಿಸುವಂಥದ್ದೂ) ಆಗಿದೆ.  ಅದು…

ಚಿಂತನೆ 114: ಲೋಕದ ಬಗೆಗಿನ ಅನಾಸಕ್ತಿ

ಪವಿತ್ರ ಗ್ರಂಥದಲ್ಲಿ ಅನೇಕ ಬಾರಿ, ವಿಶೇಷವಾಗಿ ಯೇಸುವೇ ಸ್ವತಃ, “ಲೋಕ”ದ ಬಗ್ಗೆ ಉಲ್ಲೇಖಿಸಿದ್ದಾರೆ. ಲೋಕವು ನಿಮ್ಮನ್ನು ದ್ವೇಷಿಸುತ್ತದೆ ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ವಾಸ್ತವವಾಗಿ, ಲೋಕವು ನಿಮ್ಮನ್ನು ಹಿಂಸಿಸುತ್ತದೆ. ಇದು ಕೆಲವರಿಗೆ ಭಯ ಮತ್ತು ಮನೋವ್ಯಥೆಗೆ ಕಾರಣವಾಗಬಹುದು. ಇದು ನಮ್ಮೊಳಗೆ ಇಂಥ ಪರಿಣಾಮಗಳನ್ನು ಉಂಟುಮಾಡುತ್ತದೆ…

ಚಿಂತನೆ 113: ನಿತ್ಯ ಪಿತನಿಗೆ ಒಂದು ಸಮರ್ಪಣೆ

ನಾವು ಮಾಡಬಹುದಾದ ಅತ್ಯಂತ ಶ್ರೇಷ್ಠ ಪ್ರಾರ್ಥನೆ ಎಂದರೆ “ಸಮರ್ಪಣೆಯ ಪ್ರಾರ್ಥನೆ.”  ಸಮರ್ಪಣೆಯ ಪ್ರಾರ್ಥನೆಯು ಶಿಲುಬೆಯ ಮೇಲೆ ಕ್ರಿಸ್ತರು ಅರ್ಪಿಸಿದ ಏಕೈಕ ಬಲಿಯೊಡನೆ ಒಂದಾಗಿ ಪಿತನಿಗೆ ಅರ್ಪಿಸುವ ಬಲಿಯಾಗಿದೆ.  ನಾವು ನಮ್ಮನ್ನು ನಮ್ಮಷ್ಟಕ್ಕೆ ತಾವೇ ಸಮರ್ಪಿಸಿಕೊಳ್ಳುವುದಿಲ್ಲ.  ನಾವು ಕ್ರಿಸ್ತ ಯೇಸುವಿನೊಡನೆ ಒಂದಾಗಿ ನಮ್ಮನ್ನು ಸಮರ್ಪಿಸಿಕೊಳ್ಳುತ್ತೇವೆ.  ನಿರ್ದಿಷ್ಟವಾಗಿ…