ಕನ್ನಡ

ಧ್ಯಾನ 336: ಲೋಕದ ಐಶ್ವರ್ಯವೋ…ಅಥವಾ ದೇವರೋ?

ನಾವು ಎಷ್ಟು ಬಾರಿ ಲೌಕಿಕ ಸೊತ್ತುಗಳನ್ನು ಬಯಸುತ್ತೇವೆ ಎಂಬುದು ಕುತೂಹಲಕರವಾಗಿದೆ.  ಜಗತ್ತಿನ ಎಲ್ಲ ಸಂಪತ್ತು ನಿಮಗೊಬ್ಬರಿಗೇ ಸೇರಿದ್ದರೂ, ಅದು ನಿಮ್ಮ ಹೃದಯದ ಹಂಬಲವನ್ನು ತಣಿಸಲಾರದು.  ನಿಮ್ಮೊಳಗಿನ ಶೂನ್ಯತೆಯನ್ನು ತುಂಬುವುದು ಒಂದೇ ಒಂದು ಸಂಗತಿ; ಅದು ಪ್ರಭು ಮತ್ತು ಅವರ ಪವಿತ್ರ ಚಿತ್ತ.  ಬೇರೆ ಯಾವುದೂ…

ಧ್ಯಾನ 335: ಸದಾ ಕ್ಷಮಿಸುವುದು 

ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸುವುದು ಮತ್ತು ಅವರನ್ನು ಅತ್ಯಂತ ಗೌರವ ಹಾಗೂ ಅನುಕಂಪದಿಂದ ಕಾಣುವುದು ಜೀವನದಲ್ಲಿ ಮಾಡಲು ಅತ್ಯಂತ ಕಷ್ಟವಾದ ಕಾರ್ಯಗಳಲ್ಲಿ ಒಂದು.  ಆದರೆ ಅವರನ್ನು ದ್ವೇಷಿಸುವುದರಿಂದ ಅಥವಾ ಅವರ ಮೇಲೆ ಕೋಪದಿಂದ ಹರಿಹಾಯುವುದರಿಂದ ಏನು ಪ್ರಯೋಜನ?  ಅವರಿಗೆ ಈ “ಹಾನಿ” ಮಾಡುವುದರಿಂದ ಅವರ ಆತ್ಮಕ್ಕಿಂತ ನಿಮ್ಮ ಸ್ವಂತ ಆತ್ಮಕ್ಕೇ ಹೆಚ್ಚು ಹಾನಿಯಾಗುತ್ತದೆ.  ಕ್ಷಮಿಸಿ…

ಧ್ಯಾನ 334: ಆತ್ಮಗಳ ಸೇವೆ

ನಮಗೆ ನೀಡಲಾಗಿರುವ ಅತ್ಯಂತ ದೊಡ್ಡ ಆಶೀರ್ವಾದಗಳಲ್ಲಿ ಒಂದು ಇತರರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ.  ನಾವು ಅನೇಕ ರೀತಿಗಳಲ್ಲಿ, ವಿಶೇಷವಾಗಿ ನಮ್ಮ ನಿರ್ದಿಷ್ಟ ಕರೆಯನುಸಾರ ಅವರಿಗೆ ಸೇವೆ ಸಲ್ಲಿಸುತ್ತೇವೆ.  ಆದರೆ ಒಬ್ಬ ವ್ಯಕ್ತಿಗೆ ನಾವು ಸಲ್ಲಿಸಬಹುದಾದ ಅತ್ಯಂತ ದೊಡ್ಡ ಸೇವೆಯೆಂದರೆ, ದೇವರ ಕರುಣೆಯ ಸೇವಕರಾಗಿ ಅವರನ್ನು ಮಹಿಮೆಗಳ ಕಡೆಗೆ ನಡೆಸುವುದು…

ಚಿಂತನೆ 333: ಸರಳತೆ

ಕೆಲವೊಮ್ಮೆ ಜೀವನವು ಸಂಕೀರ್ಣವಾಗಿ ತೋರಬಹುದು; ನಾವೂ ಹಾಗೆಯೇ ತೋರಬಹುದು.  ಆದರೆ ಸತ್ಯವೇನೆಂದರೆ, ನಾವು ಜೀವನದ ಸಂಕೀರ್ಣತೆಗಳನ್ನು ಮೀರಿ, ದೇವರ ದೃಷ್ಟಿಯಿಂದಲೂ ಅವರ ಚಿತ್ತದ ಪ್ರಕಾರವೂ ಜೀವನವು ಸರಳವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು.  ಅದು ಸರಳವಾಗಿರುವುದೇಕೆಂದರೆ, ನಾವು ಮಾಡಬೇಕಾಗಿರುವುದೆಲ್ಲವೂ ಪ್ರತಿದಿನ ಅವರಿಗೆ “ಹೌದು” ಎಂದು ಹೇಳಿ, ಎಲ್ಲವನ್ನೂ ಅವರಿಗೆ ಸಮರ್ಪಿಸಿ, ಭರವಸೆಯಿಡುವುದು…

ಧ್ಯಾನಚಿಂತನೆ 332: ಶಿಲುಬೆಯಿಂದ ಎಂದಿಗೂ ಬೇಸರಗೊಳ್ಳಬೇಡಿ

ಪ್ರಭು ಸಂತ ಫೌಸ್ತೀನಾಳೊಂದಿಗೆ ಕಷ್ಟಸಂಕಟಗಳ ಕುರಿತು ಬಹಳವಾಗಿ ಮಾತನಾಡುತ್ತಾರೆ.  ಅವಳು ಅವಮಾನಗಳಿಂದಲೂ ದೈಹಿಕ ಅನಾರೋಗ್ಯದಿಂದಲೂ ಬಹಳವಾಗಿ ನರಳಿದಳು.  ಅವಳ ಕಷ್ಟಸಂಕಟಗಳು ತಮ್ಮ ಶಿಲುಬೆಯೊಡನೆ ಐಕ್ಯವಾದಾಗ ಮಹಾ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಅವಳಿಗೆ ನೆನಪಿಸುವುದರಲ್ಲಿ ಯೇಸು ಎಂದಿಗೂ ಬೇಸರಗೊಳ್ಳಲಿಲ್ಲ.  ಈ ಸಂದೇಶವನ್ನು ಎಂದಿಗೂ…

ಧ್ಯಾನ 331: ನಿಮ್ಮ ಶಕ್ತಿಗೆ ಮೀರಿದ ಯಾವುದೂ ಇಲ್ಲ

ನಿಮ್ಮ ಶಕ್ತಿಗೆ ಮೀರಿದ ಶಿಲುಬೆಯನ್ನು ಹೊರುವಂತೆ ಪ್ರಭು ನಿಮ್ಮನ್ನು ಎಂದಿಗೂ ಬಿಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.  ಇದನ್ನು ನೀವು ನಂಬುತ್ತೀರಾ?  ನಂಬುವುದಾದರೆ, ನಿಮ್ಮ ಮುಂದಿರುವ ದಾರಿಯ ಮೇಲೆ ದೃಷ್ಟಿಯಿಟ್ಟು, ದೇವರ ಚಿತ್ತವನ್ನು ನೆರವೇರಿಸುತ್ತಾ ಧೈರ್ಯದಿಂದ ಮುನ್ನಡೆಯಲು ಅದು ನಿಮಗೆ ನೆರವಾಗಬೇಕು.  ನಿಮ್ಮ ದಾರಿಯಲ್ಲಿ ಹೋರಾಟಗಳು ಎದುರಾದರೆ, ಅವು ಎಷ್ಟೇ…