ಚಿಂತನೆ 112: ದೇವರ ಮೇಲಿನ ಪ್ರೀತಿಯು ದೇವರಿಗಾಗಿ ನಮ್ಮ ಹಂಬಲವನ್ನು ಹೆಚ್ಚಿಸುತ್ತದೆ
ನೀವು ದೇವರನ್ನು ಪ್ರೀತಿಸಿ ಆ ಪ್ರೀತಿಯಲ್ಲಿ ಆನಂದಿಸುವಾಗ, ದೇವರಿಗಾಗಿ ನಿಮ್ಮ ಹಂಬಲವು ಹೆಚ್ಚುತ್ತದೆ. ನೀವು ಅವರನ್ನು ಎಷ್ಟು ಹೆಚ್ಚು ಅರಿಯುತ್ತೀರೋ, ಅಷ್ಟು ಹೆಚ್ಚು ಅವರನ್ನು ಅರಿಯಲು ಬಯಸುವಿರಿ; ಮತ್ತು ಅವರನ್ನು ಅರಿಯಲು ಎಷ್ಟು ಹೆಚ್ಚು ಬಯಸುತ್ತೀರೋ, ಅಷ್ಟು ಹೆಚ್ಚು ಅವರನ್ನು ಅರಿಯುವಿರಿ. ಹಾಗೆಯೇ, ನೀವು ಅವರನ್ನು ಎಷ್ಟು ಹೆಚ್ಚು ಪ್ರೀತಿಸುತ್ತೀರೋ, ಅಷ್ಟು ಹೆಚ್ಚು ಅವರನ್ನು ಪ್ರೀತಿಸಲು ಬಯಸುವಿರಿ…