ಕನ್ನಡ

ಧ್ಯಾನ 115: ದೇವರ ಚಿತ್ತವು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ದೇವರ ಚಿತ್ತವೆಂದರೆ ಅವರು ನಿಮಗಾಗಿ ರೂಪಿಸಿರುವ ಭವಿಷ್ಯದ ಯೋಜನೆಗಿಂತಲೂ ಬಹಳ ಹೆಚ್ಚಿನದು.  ಅದು ನಿಮ್ಮ ಕುರಿತಾದ ಅವರ ಆಶೆ ಮತ್ತು ಕನಸುಗಳಿಗಿಂತಲೂ ಹೆಚ್ಚಿನದು.  ಅವರ ಚಿತ್ತವು ಪಾವಿತ್ರ್ಯದ ಕಡೆಗೆ ನಿಮ್ಮನ್ನು ನಡೆಸುವ ಮಾರ್ಗವಾಗಿದೆ; ಅದು ಅತ್ಯಂತ ಹೆಚ್ಚಿನ ಸಾಂತ್ವನ ಮತ್ತು ಆನಂದದ ಮೂಲವೂ ಆಗಿದೆ.  ಅವರ ಚಿತ್ತವು ಸಕ್ರಿಯವೂ ನಿಷ್ಕ್ರಿಯವೂ (ಅನುಮತಿಸುವಂಥದ್ದೂ) ಆಗಿದೆ.  ಅದು…

ಚಿಂತನೆ 111: ದುಷ್ಟನ ಸುಳ್ಳುಗಳು

ಪಿಶಾಚನು ನಮ್ಮನ್ನು ಅನೇಕ ರೀತಿಗಳಲ್ಲಿ ಪ್ರಲೋಭಿಸುತ್ತಾನೆ.  ನಾವು ಪಾಪನಿವೇದನೆಯಲ್ಲಿ ಒಪ್ಪಿಕೊಂಡ ಪಾಪಗಳನ್ನೂ ಒಳಗೊಂಡಂತೆ ನಮ್ಮ ಪಾಪಗಳನ್ನು ನೆನಪಿಗೆ ತರುವುದು, ನಮ್ಮ ಮೇಲೆ ಆಕ್ರಮಣ ಮಾಡಲು ಪಿಶಾಚನು ಇಷ್ಟಪಡುವ ಒಂದು ಸಾಮಾನ್ಯ ವಿಧಾನವಾಗಿದೆ.  ನಾವು ತಪ್ಪು ದಾರಿಯಲ್ಲಿದ್ದೇವೆ, ನಾವು ದೇವರಿಗೆ ಮೆಚ್ಚುಗೆಯಾಗಿಲ್ಲ, ನಾವು ಸುಳ್ಳುಗಾರರು ಮತ್ತು ಪಾಪಿಗಳು ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುವುದರಲ್ಲಿ ಅವನು ಆನಂದಿಸುತ್ತಾನೆ.  ಮತ್ತು…

ಚಿಂತನೆ 94: ದುಷ್ಟನನ್ನು ಎದುರಿಸುವುದು

ದುಷ್ಟನ ತೀವ್ರ ದ್ವೇಷವನ್ನು ತಪ್ಪಿಸಿಕೊಳ್ಳಲು ನೀವು ಬಯಸಿದರೆ, ಪವಿತ್ರತೆಗಾಗಿ ಶ್ರಮಿಸುವುದನ್ನು ಬಿಟ್ಟುಬಿಡಿ. ಸೈತಾನನು ಆಗಲೂ ನಿಮ್ಮನ್ನು ದ್ವೇಷಿಸುವನು, ಆದರೆ ಸಂತನನ್ನು ದ್ವೇಷಿಸುವಷ್ಟು ನಿಮ್ಮನ್ನು ದ್ವೇಷಿಸುವುದಿಲ್ಲ. ಆದರೆ, ನಿಶ್ಚಯವಾಗಿಯೂ ಇದು ಮೂರ್ಖತನ! ದ್ವೇಷವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಯಾರಾದರೂ ಪವಿತ್ರತೆಯಿಂದ ದೂರವಿರುವುದೇಕೆ…

ಚಿಂತನೆ 364: ಮರಣಾಸನ್ನರಿಗಾಗಿ ಪ್ರಾರ್ಥನೆ

ನಿಮ್ಮ ನಿತ್ಯ ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಮರಣದ ಘಳಿಗೆಯು ಅತ್ಯಂತ ಮಹತ್ವದ್ದಾಗಿದೆ.  ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡುವಾಗ, ನಿರ್ದಿಷ್ಟವಾಗಿ ಈ ಪವಿತ್ರ ಘಳಿಗೆಗಾಗಿ ಪ್ರಾರ್ಥಿಸುತ್ತೀರಿ.  ಅದು ಪವಿತ್ರ ಘಳಿಗೆಯಾಗಿದೆ.  ಆದರೆ ಕದಿಯಲು ಪ್ರಯತ್ನಿಸುತ್ತಾ ದುಷ್ಟನು ಮತ್ತೊಮ್ಮೆ ನಿಮ್ಮ ಮೇಲೆ ಎರಗುವ ಘಳಿಗೆಯೂ ಅದಾಗಿದೆ…

ಚಿಂತನೆ 360: ಆಧ್ಯಾತ್ಮಿಕ ಹೋರಾಟ

ಪ್ರಲೋಭಕನಾದ ಸೈತಾನನು ನಿಜವಾಗಿಯೂ ಇದ್ದಾನೆ; ಆದರೆ ಅವನಿಗೆ ಭಯಪಡಬೇಕಾಗಿಲ್ಲ.  ನೀವು ಅವನಿಗೆ ಯಾವ ಗಮನವನ್ನೂ ಕೊಡಬಾರದು.  ಅವನ ಆಲೋಚನೆಗಳಲ್ಲಿ ತೊಡಗಬಾರದು.  ಅವನೊಂದಿಗೆ ಚೌಕಾಶಿ ಮಾಡಬಾರದು.  ಪ್ರಲೋಭನೆಗಳನ್ನು ಎದುರಿಸುವಾಗ ನಿಮ್ಮಲ್ಲಿ ಧೈರ್ಯ, ದೇವರ ಕರುಣೆಯಲ್ಲಿ ಭರವಸೆ ಮತ್ತು ನಿರೀಕ್ಷೆ ಇರಬೇಕು.  ಆಗಬೇಡಿ…