ಕನ್ನಡ

ಧ್ಯಾನ 188: ಪ್ರಭುವಿನ ಬೇಡಿಕೆಗಳು

ಪ್ರಭು ನಿಮ್ಮನ್ನು ಏನನ್ನಾದರೂ ಮಾಡಲು ಕೇಳಿದರೆ, ನಿಮಗೆ ಆಯ್ಕೆ ಇದೆಯೇ?  “ಇಲ್ಲ” ಎಂದು ಹೇಳಬಹುದೆಂಬ ಮಟ್ಟಿಗೆ ನಿಮಗೆ ಆಯ್ಕೆ ಇದೆ.  ಆದರೆ ಅದು ಪಾಪವಾಗಿದೆ.  ಆದರೆ ನೀವು ಕ್ರಿಸ್ತನನ್ನು ಅನುಸರಿಸಲು ಆರಿಸಿಕೊಂಡಿದ್ದು, ನಿಮ್ಮ ಗುರಿ ಸ್ವರ್ಗವಾಗಿದ್ದರೆ, ಪ್ರಭು ನಮ್ಮನ್ನು ಕೇಳುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳುವುದು ಸಮಂಜಸ.  ಆತನ…

ಧ್ಯಾನ 184: ಯಾಜಕರ ಸೇವಾಕಾರ್ಯದ ಕರುಣೆ

ಇಲ್ಲ, ಯಾಜಕರು ಪರಿಪೂರ್ಣರಲ್ಲ.  ಅವರು ದಿನನಿತ್ಯ ಪಾಪ ಮಾಡುತ್ತಾರೆ.  ಉಳಿದ ಎಲ್ಲ ಮಾನವರಂತೆಯೇ ಅವರಿಗೂ ತಮ್ಮ ದೈನಂದಿನ ಜೀವನದಲ್ಲಿ ನಿರಂತರ ಪಶ್ಚಾತ್ತಾಪ ಮತ್ತು ಮನಃಪರಿವರ್ತನೆಯ ಅಗತ್ಯವಿದೆ.  ಆದರೂ ಅವರು ಯಾಜಕರು.  ಅವರ ಪವಿತ್ರ ಯಾಜಕ ದೀಕ್ಷೆಯ ಕಾರಣದಿಂದಾಗಿ ಪ್ರಭು ಅವರ ಮೂಲಕ ಸ್ಪಷ್ಟವಾದ…

ಚಿಂತನೆ 182: ಅಹಂಕಾರದ ರಹಸ್ಯಗಳನ್ನು ಅರಿಯುವ ವಿವೇಕ

ಅಹಂಕಾರವು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಬಹುದು.  ಹಾಗಾದಾಗ ನಾವು ನಮ್ಮ ಬಗ್ಗೆಯೂ ನಮ್ಮ ಸ್ವಂತ ನೋವಿನ ಬಗ್ಗೆಯೂ ಮಾತ್ರ ಯೋಚಿಸುತ್ತೇವೆ.  ಬಹುಶಃ ಈ ಅನುಭವ ನಿಮಗೂ ಆಗಿರಬಹುದು.  ಬಹುಶಃ ನಿಮ್ಮ ಮನಸ್ಸಿಗೆ ಗಾಯವಾಗಿರಬಹುದು; ನೀವು ಆ ಗಾಯದ ಬಗ್ಗೆಯೇ ಕೊರಗುತ್ತಾ ಕುಳಿತಿರಬಹುದು.  ಅದು ನಿಮ್ಮ ಹೃದಯದಲ್ಲಿ ಕಹಿಯನ್ನು ಉಂಟುಮಾಡುತ್ತದೆ ಮತ್ತು ನೀವು ಆ ಗಾಯವನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ.  ಆದರೆ…

ಚಿಂತನೆ 180: ಯೇಸುವಿನ ಪಾಡುಗಳು

ಸುವಾರ್ತೆಗಳ ಪರಿಚಯವಿರುವ ನಾವು ಕೆಲವೊಮ್ಮೆ ಕ್ರಿಸ್ತರ ಯಾತನೆಗಳ ಬಗ್ಗೆ ಒಂದು ಬಗೆಯ ಉದಾಸೀನತೆಗೆ ಒಳಗಾಗಬಹುದು.  ಪ್ರತಿ ವರ್ಷ ಅವರ ಪಾಡುಗಳ ವೃತ್ತಾಂತವನ್ನು ಓದುವುದನ್ನು ನಾವು ಕೇಳುತ್ತೇವೆ; ಅವರ ಪಾಡುಗಳ ಅನೇಕ ಚಿತ್ರಗಳನ್ನು ನೋಡಿದ್ದೇವೆ. ಈ ಪರಿಚಯದ ಪರಿಣಾಮವಾಗಿ, ಅದು ನಮ್ಮ ಮೇಲೆ ಬೀರಬೇಕಾದ ಸೂಕ್ತ ಪರಿಣಾಮಕ್ಕೆ ನಾವು ಅವಕಾಶ ನೀಡದೆ ಹೋಗಬಹುದು…

ಧ್ಯಾನ 179: ಆಂತರಿಕ ನಿರಾನಂದವನ್ನು ಎದುರಿಸುವುದು

“ಪ್ರಭು ಕೊಡುವರು, ಪ್ರಭು ಹಿಂತೆಗೆದುಕೊಳ್ಳುವರು…” (ಯೋಬ 1:21).  ಇದು ಎಷ್ಟು ಸತ್ಯ!  ಜೀವನದಲ್ಲಿ ನಾವು ದೇವರ ಸಮೃದ್ಧ ಸಾಂತ್ವನವನ್ನು ಅನುಭವಿಸುವ ಸಂದರ್ಭಗಳಿವೆ.  ಅದು ಕುಟುಂಬದಲ್ಲಿ ಮಹಾ ಸಂತೋಷದ ಕ್ಷಣಗಳಲ್ಲಿರಬಹುದು, ಅಥವಾ ಇನ್ನೊಬ್ಬರ ನಿಬಂಧನೆಯಿಲ್ಲದ ಪ್ರೀತಿಯನ್ನು ನಾವು ಅನುಭವಿಸುವಾಗ ಇರಬಹುದು.  ಕೆಲವೊಮ್ಮೆ…

ಚಿಂತನೆ 176: ಲೋಕದ ಪಾಪದ ವಿರುದ್ಧ ಹೋರಾಡುವುದು

ದೇವರು ಲೋಕವನ್ನು ನೋಡುವಾಗ, ಅವರಿಗೆ ಏನು ಕಾಣುತ್ತದೆ? ನಿಶ್ಚಯವಾಗಿಯೂ ಅವರು ತಮ್ಮ ಸೃಷ್ಟಿಯ ಸೌಂದರ್ಯವನ್ನೂ ತಮ್ಮ ಯೋಜನೆಯ ಪರಿಪೂರ್ಣ ವ್ಯವಸ್ಥೆಯನ್ನೂ ತಮ್ಮ ಪುತ್ರಪುತ್ರಿಯರ ಉಪಸ್ಥಿತಿಯನ್ನೂ ನೋಡುತ್ತಾರೆ. ಆದರೆ ಅಸಂಖ್ಯಾತ ಪಾಪಗಳ ಭೀಕರತೆಯನ್ನೂ ಅವರು ನೋಡುತ್ತಾರೆ. ಅತಿ ಚಿಕ್ಕ ಪಾಪವೂ ಸಹ…

ಧ್ಯಾನ 173: ಒಬ್ಬರೊಂದಿಗಿನ ಏಕತೆಯೇ ಮೂವರೊಂದಿಗಿನ ಏಕತೆ

ಪವಿತ್ರ ತ್ರಿತ್ವವು ಒಂದೇ ದೈವಿಕ ಸ್ವಭಾವವನ್ನು ಹೊಂದಿದ್ದರೂ, ಮೂವರು ವಿಭಿನ್ನ ವ್ಯಕ್ತಿಗಳಾಗಿ ಉಳಿದಿರುವುದಾಗಿ ವಿವರಿಸಲಾಗುತ್ತದೆ.  ಆದ್ದರಿಂದ, ಈ ಮೂವರು ವಿಭಿನ್ನ ವ್ಯಕ್ತಿಗಳು ಪರಿಪೂರ್ಣ ಏಕತೆಯಲ್ಲಿ ಪಾಲುಗೊಳ್ಳುತ್ತಾರೆ.  ವಾಸ್ತವವಾಗಿ, ಅವರು ಒಬ್ಬರಿಗೊಬ್ಬರು ಭಿನ್ನರಾಗಿರದಿದ್ದರೆ, “ಒಂದಾಗಿರಲು” ಸಾಧ್ಯವಾಗುತ್ತಿರಲಿಲ್ಲ.  ಆದ್ದರಿಂದ ಹೀಗೆ ಹೇಳುವುದು ಅಗತ್ಯ…

ಧ್ಯಾನ 169: ಅರಸನ ಸನ್ನಿಧಿಯಲ್ಲಿ ಪ್ರಶಾಂತತೆ

ಬಹಳ ಅಧಿಕಾರವುಳ್ಳ ವ್ಯಕ್ತಿಯನ್ನು ಭೇಟಿಯಾಗುವುದು ಉತ್ಸಾಹಕ್ಕೆ ಕಾರಣವಾಗಬಹುದು.  ಉದಾಹರಣೆಗೆ, ನೀವು ಕೆಲಸ ಮಾಡಲು ಬಯಸುವ ಸಂಸ್ಥೆಯ ಅಧ್ಯಕ್ಷರನ್ನು ಭೇಟಿಯಾಗುವುದು, ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಮೊದಲ ಬಾರಿಗೆ ಭೇಟಿಯಾಗುವುದು, ಅಥವಾ ಧರ್ಮಾಧ್ಯಕ್ಷರನ್ನು ಇಲ್ಲವೇ ಪವಿತ್ರ ಪಿತಾರನ್ನು ಭೇಟಿಯಾಗುವುದು — ಇವೆಲ್ಲವೂ ಒಂದು ರೀತಿಯ ಉತ್ಸಾಹವನ್ನು ಉಂಟುಮಾಡಬಹುದು.  ಆದರೆ…

ಚಿಂತನೆ 168: ಇತರರಿಗಾಗಿ ದೇವರ ಕರುಣೆಯನ್ನು ಬೇಡುವುದು

ಪಾಪಿಗಳನ್ನು ನರಕದ ಬೆಂಕಿಯಿಂದ ಮುಕ್ತಗೊಳಿಸುವ ಶಕ್ತಿ ಒಂದೇ ಒಂದು ಸಂಗತಿಗಿದೆ.  ಆ ಒಂದು ಸಂಗತಿಯೇ ಕರುಣೆ.  ದೇವರು ತನ್ನ ಕರುಣೆಯನ್ನು ಉಚಿತವಾಗಿ ಮತ್ತು ಹೇರಳವಾಗಿ ನೀಡುತ್ತಾನೆ. ಆದರೆ ನಮ್ಮ ಪ್ರಾರ್ಥನೆಗಳನ್ನು ನಾವು … ಸಲ್ಲಿಸಿದಾಗ, ಅವುಗಳಿಗೆ ಪ್ರತಿಯಾಗಿಯೂ ತನ್ನ ಕರುಣೆಯನ್ನು ನೀಡಲು ಆತನು ನಿರ್ಧರಿಸಿದ್ದಾನೆ.

ಧ್ಯಾನ 165: ಪರಿಪೂರ್ಣ ಪಶ್ಚಾತ್ತಾಪ

ನಮ್ಮ ಪಾಪಗಳ ಅರಿವಾದಾಗ ನಾವು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಬಹುದು.  ನಾವು ಉದಾಸೀನರಾಗಿಯೇ ಉಳಿಯಬಹುದು, ಅಥವಾ ದೇವರ ನ್ಯಾಯದ ಭಯದಿಂದ ಪಶ್ಚಾತ್ತಾಪಪಡಬಹುದು.  ಆದರೆ ಪ್ರೀತಿಯಿಂದ ದೇವರ ಕಡೆಗೆ ತಿರುಗಿ, ಆ ಪ್ರೀತಿಯ ಫಲವಾಗಿ ನಿಜವಾದ ಪಶ್ಚಾತ್ತಾಪವನ್ನು ಹೊಂದುವುದೇ ಆದರ್ಶ ಪ್ರತಿಕ್ರಿಯೆಯಾಗಿದೆ.  ದೇವರ ಮೇಲೆ ನಮಗೆ ಉತ್ಕಟವಾದ ಪ್ರೀತಿಯಿದ್ದರೆ…