ಕನ್ನಡ

ಧ್ಯಾನ 137: ಶಿಲುಬೆಯಲ್ಲಿರುವ ಶಕ್ತಿ

ನೀವು ಪ್ರಾರ್ಥಿಸುವಾಗ, ಎಂದಾದರೂ ಕುಳಿತು ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆಯನ್ನು ತದೇಕಚಿತ್ತದಿಂದ ನೋಡುತ್ತೀರಾ?  ಹೊರಗಿನವರ ದೃಷ್ಟಿಯಿಂದ ನೋಡಿದರೆ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆ ಒಂದು ಒಗಟಿನಂತಿರುವ ವಾಸ್ತವ.  ಇಂತಹ ಭೀಕರ ಘಟನೆಯನ್ನು ನಾವು ಏಕೆ ಎತ್ತಿಹಿಡಿದು ಗೌರವಿಸಬೇಕು?  ದೇವಪುತ್ರನ ಕ್ರೂರ ಹತ್ಯೆಯು ಮೊದಲ ನೋಟಕ್ಕೆ ನಮ್ಮನ್ನು ಆಕರ್ಷಿಸದೇ ಇರಬಹುದು.  ಆದರೂ…

ಚಿಂತನೆ 133: ನಮ್ಮ ಸ್ವಂತ ಬಲದಿಂದ ಮಾಡುವ ಕಾರ್ಯಗಳು

ನಮ್ಮ ಸ್ವಂತ ಬಲದಿಂದ ನಾವು ಯಾವುದೇ ಒಳ್ಳೆಯದನ್ನು ಮಾಡಲಾರೆವು.  ಇದು ಸತ್ಯ.  ನಮ್ಮ ಸ್ವಂತ ಬಲದಿಂದ ನಾವು ಮಾಡಬಲ್ಲದ್ದು ಪಾಪ ಮಾತ್ರ.  ವಾಸ್ತವವಾಗಿ, ದೇವರನ್ನು ಮೆಚ್ಚಿಸಲು ಮತ್ತು ಅವರಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಲು ಇರುವ ಏಕೈಕ ಮಾರ್ಗವೆಂದರೆ ಎಲ್ಲದಕ್ಕೂ ಅವರನ್ನು ಅವಲಂಬಿಸುವುದು.  ಎಲ್ಲದರಲ್ಲಿಯೂ ದೇವರನ್ನು ಸಂಪೂರ್ಣವಾಗಿ ಅವಲಂಬಿಸುವ ಸಂಬಂಧವನ್ನು ನಾವು ಹೊಂದಿರಬೇಕು…

ಚಿಂತನೆ 130: ಇತರರನ್ನು ಪ್ರೀತಿಯಿಂದ ತಿದ್ದುವುದು

ನಮ್ಮಲ್ಲಿ ಪ್ರತಿಯೊಬ್ಬರೂ ಆಗಾಗ ಬೇರೊಬ್ಬರ ಪಾಪವನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲವೆನ್ನಬಹುದು.  ಅದು ಅವರ ಮಾತುಗಳಲ್ಲಿ, ಕೃತ್ಯಗಳಲ್ಲಿ ಅಥವಾ ಅವರು ಮಾಡಬೇಕಾದುದನ್ನು ಮಾಡದೆ ಬಿಡುವುದರಲ್ಲಿ ವ್ಯಕ್ತವಾಗಬಹುದು.  ಪಾಪವು ನೋವನ್ನುಂಟುಮಾಡುತ್ತದೆ ಮತ್ತು ಅದನ್ನು ತಿದ್ದುವುದು ಅಗತ್ಯ.  ಅನೇಕ ಬಾರಿ, ನಮ್ಮ ವಿರುದ್ಧ ಪಾಪವೆಸಗಿದಾಗ ನಾವು ಕೋಪಗೊಳ್ಳುತ್ತೇವೆ.  ಆದರೆ…

ಧ್ಯಾನ 126: ಪುತ್ರೋಚಿತ ಭಯ – ಹಿತಕರ ಭಯ

ನಿಮ್ಮ ಜೀವನದಲ್ಲಿ ಭಯವಿದೆಯೇ? ಕೆಲವು ರೀತಿಯ ಭಯವು ಅಹಂಕಾರದಿಂದ ಹುಟ್ಟುವುದರಿಂದ ತುಂಬಾ ಅಹಿತಕರವಾಗಿರುತ್ತದೆ; ಇನ್ನೊಂದು ರೀತಿಯ ಭಯವು ದೇವರ ಮೇಲಿನ ನಿಮ್ಮ ಗಾಢವಾದ ಪ್ರೀತಿಯಿಂದ ಉಂಟಾಗುವುದರಿಂದ ತುಂಬಾ ಹಿತಕರವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. “ಪವಿತ್ರ ಭಯ” ಎಂದರೆ ಪುತ್ರೋಚಿತ ಭಯ, ಅಂದರೆ ದೇವರ ಮಗುವಿಗೆ ಇರುವ ಭಯ. ಈ…

ಧ್ಯಾನ 119: ಆಂತರಿಕ ಮತ್ತು ಬಾಹ್ಯ ಆತ್ಮನಿಗ್ರಹ

ಆತ್ಮನಿಗ್ರಹವೆಂದರೆ ಈ ಲೋಕದ ಕ್ಷಣಿಕ ವಸ್ತುಗಳಿಂದ ಇನ್ನಷ್ಟು ಅನಾಸಕ್ತರಾಗಲು ನಮ್ಮ ಸ್ವಂತ ಇಚ್ಛೆಯನ್ನು ತ್ಯಜಿಸುವ ಅಭ್ಯಾಸ.  ದೇವರು ಮತ್ತು ಅವರ ಪವಿತ್ರ ಚಿತ್ತವನ್ನು ಹೊರತುಪಡಿಸಿ ಉಳಿದೆಲ್ಲದರಿಂದಲೂ ಅನಾಸಕ್ತರಾಗಲು ನಾವು ಪ್ರಯತ್ನಿಸಬೇಕು.  ನಾವು ಇಷ್ಟಪಡುವ ಅಥವಾ ಬಯಸುವ ಪ್ರತಿಯೊಂದೂ ಕೆಟ್ಟದ್ದೆಂದಲ್ಲ; ಆದರೆ ನಾವು ನಿಜವಾದ ಪವಿತ್ರತೆಯನ್ನು ಬಯಸುವುದಾದರೆ, ನಮ್ಮ…

ಧ್ಯಾನ 117: ನಿಮ್ಮ ಹೃದಯದ ಆವರಣ

ಕೆಲವು ಧಾರ್ಮಿಕ ಸಹೋದರಿಯರು ಮತ್ತು ಸಂನ್ಯಾಸಿಗಳು ಒಂದು ಆವರಣದ ಗಡಿಗಳೊಳಗೆ ಏಕಾಂತವಾಸದ ಜೀವನ ನಡೆಸುತ್ತಾರೆ.  ಆ ವಿಶ್ವಾಸ ಸಮುದಾಯದ ಸದಸ್ಯರಲ್ಲದ ಯಾರೂ ಸೂಕ್ತ ಕಾರಣವಿಲ್ಲದೆ ಆ ಆವರಣವನ್ನು ಪ್ರವೇಶಿಸುವಂತಿಲ್ಲ. ಇತರರು ಮಠಾಧ್ಯಕ್ಷರ ಅನುಮತಿಯಿಂದ ಮಾತ್ರ ಪ್ರವೇಶಿಸಬಹುದು.  ಬಹುಶಃ…

ಧ್ಯಾನ 115: ದೇವರ ಚಿತ್ತವು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ದೇವರ ಚಿತ್ತವೆಂದರೆ ಅವರು ನಿಮಗಾಗಿ ರೂಪಿಸಿರುವ ಭವಿಷ್ಯದ ಯೋಜನೆಗಿಂತಲೂ ಬಹಳ ಹೆಚ್ಚಿನದು.  ಅದು ನಿಮ್ಮ ಕುರಿತಾದ ಅವರ ಆಶೆ ಮತ್ತು ಕನಸುಗಳಿಗಿಂತಲೂ ಹೆಚ್ಚಿನದು.  ಅವರ ಚಿತ್ತವು ಪಾವಿತ್ರ್ಯದ ಕಡೆಗೆ ನಿಮ್ಮನ್ನು ನಡೆಸುವ ಮಾರ್ಗವಾಗಿದೆ; ಅದು ಅತ್ಯಂತ ಹೆಚ್ಚಿನ ಸಾಂತ್ವನ ಮತ್ತು ಆನಂದದ ಮೂಲವೂ ಆಗಿದೆ.  ಅವರ ಚಿತ್ತವು ಸಕ್ರಿಯವೂ ನಿಷ್ಕ್ರಿಯವೂ (ಅನುಮತಿಸುವಂಥದ್ದೂ) ಆಗಿದೆ.  ಅದು…

ಚಿಂತನೆ 114: ಲೋಕದ ಬಗೆಗಿನ ಅನಾಸಕ್ತಿ

ಪವಿತ್ರ ಗ್ರಂಥದಲ್ಲಿ ಅನೇಕ ಬಾರಿ, ವಿಶೇಷವಾಗಿ ಯೇಸುವೇ ಸ್ವತಃ, “ಲೋಕ”ದ ಬಗ್ಗೆ ಉಲ್ಲೇಖಿಸಿದ್ದಾರೆ. ಲೋಕವು ನಿಮ್ಮನ್ನು ದ್ವೇಷಿಸುತ್ತದೆ ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ವಾಸ್ತವವಾಗಿ, ಲೋಕವು ನಿಮ್ಮನ್ನು ಹಿಂಸಿಸುತ್ತದೆ. ಇದು ಕೆಲವರಿಗೆ ಭಯ ಮತ್ತು ಮನೋವ್ಯಥೆಗೆ ಕಾರಣವಾಗಬಹುದು. ಇದು ನಮ್ಮೊಳಗೆ ಇಂಥ ಪರಿಣಾಮಗಳನ್ನು ಉಂಟುಮಾಡುತ್ತದೆ…

ಚಿಂತನೆ 111: ದುಷ್ಟನ ಸುಳ್ಳುಗಳು

ಪಿಶಾಚನು ನಮ್ಮನ್ನು ಅನೇಕ ರೀತಿಗಳಲ್ಲಿ ಪ್ರಲೋಭಿಸುತ್ತಾನೆ.  ನಾವು ಪಾಪನಿವೇದನೆಯಲ್ಲಿ ಒಪ್ಪಿಕೊಂಡ ಪಾಪಗಳನ್ನೂ ಒಳಗೊಂಡಂತೆ ನಮ್ಮ ಪಾಪಗಳನ್ನು ನೆನಪಿಗೆ ತರುವುದು, ನಮ್ಮ ಮೇಲೆ ಆಕ್ರಮಣ ಮಾಡಲು ಪಿಶಾಚನು ಇಷ್ಟಪಡುವ ಒಂದು ಸಾಮಾನ್ಯ ವಿಧಾನವಾಗಿದೆ.  ನಾವು ತಪ್ಪು ದಾರಿಯಲ್ಲಿದ್ದೇವೆ, ನಾವು ದೇವರಿಗೆ ಮೆಚ್ಚುಗೆಯಾಗಿಲ್ಲ, ನಾವು ಸುಳ್ಳುಗಾರರು ಮತ್ತು ಪಾಪಿಗಳು ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುವುದರಲ್ಲಿ ಅವನು ಆನಂದಿಸುತ್ತಾನೆ.  ಮತ್ತು…

ಚಿಂತನೆ 110: ಕರುಣೆಯ ಕಿರಣಗಳು

ಯೇಸುವಿನ ಹೃದಯದ ಕರುಣೆಯು ಮಹಾ ತೇಜಸ್ಸಿನಿಂದ ಪ್ರಕಾಶಿಸುತ್ತದೆ.  ಸಂತ ಫೌಸ್ಟಿನಾ ಕಂಡ ದೈವಿಕ ಕರುಣೆಯ ಚಿತ್ರಣ ಇದೇ ಆಗಿತ್ತು.  ನಮ್ಮ ಪ್ರಭುವಿನ ತೆರೆದ ಹೃದಯದಿಂದ ಬೆಳಕು ಮತ್ತು ಅನುಗ್ರಹವು ಲೋಕದ ಮೇಲೆ ಧಾರಾಳವಾಗಿ ಹರಿದುಬಂದವು.  ಯೇಸು ಲೋಕದ ಮೇಲೆ ನಿರಂತರವಾಗಿ ಪ್ರಕಾಶಿಸಲು ಬಯಸುತ್ತಾರೆ…