ಕನ್ನಡ

ಚಿಂತನೆ 103: ದೇವರ ಅರಿವು ಮಾತುಗಳಿಗೆ ಮೀರಿದ್ದು

ಪವಿತ್ರ ತ್ರಿತ್ವದೊಂದಿಗಿನ ಅನ್ಯೋನ್ಯತೆಯೇ ನಮ್ಮ ಜೀವನದ ಮುಖ್ಯ ಉದ್ದೇಶವಾಗಿರಬೇಕು.  ನಾವು ಅವರೊಂದಿಗೆ ಸಂಭಾಷಿಸಿ, ಮಾತುಗಳನ್ನಾಡಬಹುದಾದರೂ, ಅತ್ಯಂತ ಆಳವಾದ ಸಂವಹನವು ಮಾತುಗಳಿಗೆ ಮೀರಿದ್ದಾಗಿದೆ.  ಅದು ಒಂದು ಐಕ್ಯ, ನಮ್ಮನ್ನೇ ಅರ್ಪಿಸಿಕೊಳ್ಳುವುದು ಮತ್ತು ಅವರ ಕರುಣೆಯಲ್ಲಿ ಆನಂದದಿಂದ ನೆಲೆಸುವುದು.  ಅರಿಯುವುದು ಮತ್ತು ಸಂಭಾಷಿಸುವುದು…

ಚಿಂತನೆ 101: ಇತರರ ಮೂಲಕ ಮಾತನಾಡುವ ದೇವರು

ಆಗಾಗ್ಗೆ, ನೀವು ಕೇಳಬೇಕಾದ ಒಂದು ನಿರ್ದಿಷ್ಟ ಸಂದೇಶವನ್ನು ದೇವರು ನಿಮಗೆ ಹೇಳಲು ಬಯಸುತ್ತಾರೆ.  ನೀವು ಪ್ರವಚನವನ್ನು ಕೇಳುವಾಗ, ಪುಸ್ತಕವನ್ನು ಓದುವಾಗ, ರೇಡಿಯೊದಲ್ಲಿ ಏನನ್ನಾದರೂ ಕೇಳುವಾಗ ಅಥವಾ ಸ್ನೇಹಿತರೊಂದಿಗೆ ಮಾತನಾಡುವಾಗ, ಇತರರ ಮೇಲೆ ಪರಿಣಾಮ ಬೀರುವಂತೆ ತೋರದ ಯಾವುದೋ ಒಂದು ನಿರ್ದಿಷ್ಟ ವಿಷಯವು ನಿಮ್ಮ ಗಮನವನ್ನು ವಿಶೇಷವಾಗಿ ಸೆಳೆಯಬಹುದು…

ಧ್ಯಾನ 100: ಒಳಿತಿಗಾಗಿ ಬಯಕೆ

ನಾವು ದೇವರಿಗೂ ಇತರರಿಗೂ ತೋರುವ ಪ್ರೀತಿಗಾಗಿ ದೇವರು ನಮ್ಮನ್ನು ಮೆಚ್ಚಿ ನಮಗೆ ಹೇರಳವಾಗಿ ಪ್ರತಿಫಲಗಳನ್ನು ನೀಡುತ್ತಾರೆ.  ಅವರ ಅನುಗ್ರಹದಿಂದ ಪ್ರೇರಿತವಾದ ನಮ್ಮ ಪ್ರೀತಿಯ ಕಾರ್ಯಗಳು ಸ್ವರ್ಗದಲ್ಲಿ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತವೆ.  ಆದರೆ ಸಂಪತ್ತಾಗಿ ಪರಿವರ್ತನೆಗೊಳ್ಳುವುದು ಅಷ್ಟೇ ಅಲ್ಲ.  ಒಳಿತನ್ನು ಮಾಡಬೇಕೆಂಬ ನಮ್ಮ ಬಯಕೆಯೂ ಸಹ…

ಚಿಂತನೆ 98: ಸಾಧನವಾಗಿರುವುದು

ದೇವರು ಯಾವುದಾದರೊಂದು ಧ್ಯೇಯಕಾರ್ಯವನ್ನು ನೆರವೇರಿಸಲು ನಮ್ಮನ್ನು ಕರೆಯುವಾಗ, ಕಾರ್ಯನಿರತರಾಗಿರುವವರು ಯಾರು?  ದೇವರೋ ಅಥವಾ ನಾವೋ?  ನಿಜವೆಂದರೆ, ದೇವರೂ ನಾವೂ ಕಾರ್ಯನಿರತರಾಗಿರುತ್ತೇವೆ; ದೇವರು ಮೂಲ, ನಾವು ಸಾಧನ.  ನಾವು ಸ್ವತಂತ್ರ ಇಚ್ಛೆಯಿಂದ ಪ್ರಯತ್ನಿಸುತ್ತೇವೆ, ಆದರೆ ನಮ್ಮ ಮೂಲಕ ಬೆಳಗುವವರು ದೇವರೇ.  ಒಂದು ಕಿಟಕಿಯು ಬೆಳಕಿನ ಮೂಲವಾಗಿ ಕಾರ್ಯನಿರ್ವಹಿಸುವಂತೆಯೇ…

ಧ್ಯಾನಚಿಂತನೆ 93: ಪ್ರೀತಿ ಮತ್ತು ಪಾಪದ ಮುಖಾಮುಖಿ

ಪ್ರೀತಿ ಮತ್ತು ಪಾಪ ಎಲ್ಲಿ ಮುಖಾಮುಖಿಯಾಗುತ್ತವೆ?  ನಮ್ಮ ಪ್ರಭುವಿನ ಮೇಲೆ ಹೇರಲಾದ ಹಿಂಸೆ, ಅಪಹಾಸ್ಯ ಮತ್ತು ದುರುದ್ದೇಶದಲ್ಲಿ ಅವು ಮುಖಾಮುಖಿಯಾಗುತ್ತವೆ.  ಅವರು ಪರಿಪೂರ್ಣ ಪ್ರೀತಿಯ ಅವತಾರವಾಗಿದ್ದರು.  ಅವರ ಹೃದಯದಲ್ಲಿದ್ದ ಕರುಣೆ ಅನಂತವಾಗಿತ್ತು.  ಎಲ್ಲ ಜನರಿಗಾಗಿ ಅವರಿಗಿದ್ದ ಕಾಳಜಿ ಮತ್ತು ಅಕ್ಕರೆ ಊಹೆಗೂ ಮೀರಿದ್ದವು.  ಆದರೂ ಸೈನಿಕರು ಅವರನ್ನು ಅಪಹಾಸ್ಯ ಮಾಡಿದರು…

ಧ್ಯಾನ 89: ಉದಾರ ಪ್ರೀತಿಯ ಶಕ್ತಿ

ನಮ್ಮ ಪ್ರಾರ್ಥನೆಗಳ ಅಗತ್ಯವೂ ದೇವರ ಕರುಣೆಯ ಅಗತ್ಯವೂ ಇರುವ ಎಷ್ಟೋ ಆತ್ಮಗಳಿವೆ.  ಇವು ತಮ್ಮ ಪಾಪದಲ್ಲಿ ದೃಢವಾಗಿ ಸಿಲುಕಿಕೊಂಡಿರುವ ಆತ್ಮಗಳು.  ನಾವು ಅವರಿಗಾಗಿ ಪ್ರಾರ್ಥಿಸಬಹುದು, ಆದರೆ ಅದರಿಂದ ಅಷ್ಟೇನೂ ಪರಿಣಾಮವಾಗುತ್ತಿಲ್ಲವೆಂದು ತೋರುತ್ತದೆ.  ನಾವು ಇನ್ನೇನು ಮಾಡಬಹುದು?  ಕೆಲವೊಮ್ಮೆ, ಅತ್ಯಂತ ಶ್ರೇಷ್ಠವಾದ ಮಧ್ಯಸ್ಥ ಪ್ರಾರ್ಥನೆ…

ಧ್ಯಾನ 84: ಪವಿತ್ರ ಹೋಸ್ತಿ

ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಕ್ರಿಸ್ತರನ್ನು ನಾವು ಎಷ್ಟೇ ಆಳವಾಗಿ ಪ್ರೀತಿಸಿ ಆರಾಧಿಸಿದರೂ ಅದು ಸಾಕಾಗದು.  ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಅವರ ಮುಂದೆ ನಾವು ಇರುವಾಗ, ಮರೆಯಾದ ರೂಪದಲ್ಲಿ ಉಪಸ್ಥಿತರಿರುವ ಸರ್ವಶಕ್ತ ದೇವರನ್ನು ಕಾಣಬೇಕು.  ಅವರೇ: ಕರುಣೆ, ನಿತ್ಯಜೀವ, ನಿತ್ಯ…

ಧ್ಯಾನ 82: ಮೋಹಬಂಧಗಳು

ಜೀವನದಲ್ಲಿ ನಾವು ಅಂಟಿಕೊಳ್ಳಬಹುದಾದ ಅನೇಕ ವಿಷಯಗಳಿವೆ.  ಕೆಲವೊಮ್ಮೆ ಒಳ್ಳೆಯ ವಿಷಯಗಳಿಗೂ ನಾವು ಅಂಟಿಕೊಳ್ಳಬಹುದು.  ಬಹುಪಾಲು ಸಂದರ್ಭಗಳಲ್ಲಿ ನಾವು ಅಂಟಿಕೊಳ್ಳುವುದು ನಮ್ಮದೇ ಹಠದ ಇಚ್ಛೆಗೆ.  ನಮಗೆ ಬೇಕಾದದ್ದು, ನಮಗೆ ಬೇಕಾದಾಗಲೇ ಸಿಗಬೇಕೆಂದು ನಾವು ಬಯಸುತ್ತೇವೆ.  ನೈಜವಾದ… ಸಾಧಿಸಲು ಒಂದು ಮುಖ್ಯ ಮಾರ್ಗ

ಚಿಂತನೆ 79: ನಮ್ಮ ಧನ್ಯ ವ್ಯಾಕುಲ ಮಾತೆ

ಮಾತೆ ಮರಿಯಳು ಜೀವನದಲ್ಲಿ ಬಹಳಷ್ಟನ್ನು ಸಹಿಸಿಕೊಂಡಳು.  ತನ್ನ ರಕ್ಷಕನನ್ನು ಅದ್ಭುತವಾಗಿ ಗರ್ಭಧರಿಸಿದಾಗ ಆಕೆ ಸಂಶಯವನ್ನೂ ಅಪಹಾಸ್ಯವನ್ನೂ ಸಹಿಸಿಕೊಂಡಳು.  ತನ್ನ ದೈವಪುತ್ರನನ್ನು ಜನರು ತಿರಸ್ಕರಿಸಿ ತಪ್ಪಾಗಿ ಅರ್ಥಮಾಡಿಕೊಂಡಾಗ, ಆಕೆ ಪರಿಪೂರ್ಣ ಮಾತೃಪ್ರೀತಿಯಿಂದ ಅದನ್ನು ನೋಡಿದಳು.  ಆತನ ಯಾತನೆ ಮತ್ತು ಮರಣದಲ್ಲಿ ಆಕೆ ಆತನ ಜೊತೆಯಲ್ಲಿದ್ದಳು.  ಮತ್ತು ಇವೆಲ್ಲದರ ನಡುವೆಯೂ…

ಧ್ಯಾನ 77: ಪ್ರಭುವಿಗೆ ಎಲ್ಲವೂ ತಿಳಿದಿದೆ

ನಮ್ಮ ದೈವಿಕ ಪ್ರಭುವಿಗೆ ಎಲ್ಲವೂ ತಿಳಿದಿದೆ ಎಂಬುದು ನಿಸ್ಸಂಶಯ.  ನಮ್ಮ ಪ್ರತಿಯೊಂದು ಆಲೋಚನೆಯೂ ನಮ್ಮ ಪ್ರತಿಯೊಂದು ಅಗತ್ಯವೂ ನಾವು ಎಂದಿಗೂ ಅರಿಯಬಹುದಾದುದಕ್ಕಿಂತಲೂ ಹೆಚ್ಚು ಆಳವಾಗಿ ಅವರಿಗೆ ತಿಳಿದಿವೆ.  ಕೆಲವೊಮ್ಮೆ, ಅವರ ಪರಿಪೂರ್ಣ ಜ್ಞಾನವನ್ನು ನಾವು ಅರಿತುಕೊಂಡಾಗ, ಅವರು ನಮ್ಮ ಎಲ್ಲ ಅಗತ್ಯಗಳನ್ನೂ ಈಡೇರಿಸಬೇಕೆಂದು ನಿರೀಕ್ಷಿಸಬಹುದು, ಒಂದು ವೇಳೆ…