ಕನ್ನಡ

ಧ್ಯಾನ 84: ಪವಿತ್ರ ಹೋಸ್ತಿ

ದಿವ್ಯಪ್ರಸಾದದ ಆರಾಧನಾ ಪಾತ್ರೆಯಲ್ಲಿ ಪರಮ ಪವಿತ್ರ ಸಂಸ್ಕಾರದಲ್ಲಿರುವ ಯೇಸು, needpix.com ಮೂಲಕ

ವೀಡಿಯೊ

ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಕ್ರಿಸ್ತರನ್ನು ನಾವು ಎಷ್ಟೇ ಆಳವಾಗಿ ಪ್ರೀತಿಸಿ ಆರಾಧಿಸಿದರೂ ಅದು ಸಾಕಾಗದು.  ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಅವರ ಮುಂದೆ ನಾವು ಇರುವಾಗ, ಮರೆಯಾದ ರೂಪದಲ್ಲಿ ಉಪಸ್ಥಿತರಿರುವ ಸರ್ವಶಕ್ತ ದೇವರನ್ನು ಕಾಣಬೇಕು.  ಅವರೇ: ಕರುಣೆ, ನಿತ್ಯಜೀವ, ನಿತ್ಯ ದೇವರು, ಪಾಪಿಗಳ ರಕ್ಷಕ, ಜೀವಜಲ, ನಿರ್ಮಲ ಪ್ರೀತಿಯ ಅಗ್ನಿ, ನಮ್ಮ ಎಲ್ಲ ವ್ಯಾಧಿಗಳಿಗೆ ಔಷಧಿ, ಪ್ರೀತಿಯ ಎಲ್ಲ ಭಾವನೆಗಳು, ಎಲ್ಲರ ಆಶಾಭರವಸೆ, ಹೊರೆಗಳನ್ನು ನೀಗಿಸುವವರು…ಮತ್ತು ಅವರು ನಮ್ಮ ಸಂಪೂರ್ಣ ಭರವಸೆಗೆ ಅರ್ಹರು (ನೋಡಿ ದಿನಚರಿ #356).

ನೀವು ಪವಿತ್ರ ಹೋಸ್ತಿಯನ್ನು ನೆಟ್ಟುನೋಡುವಾಗ ನಿಮಗೆ ಏನು ಕಾಣುತ್ತದೆ?  ನಿಮ್ಮ ಕಣ್ಣುಗಳಿಂದ ನೀವು ರೊಟ್ಟಿಯನ್ನು ಕಾಣುತ್ತೀರಿ, ಆದರೆ ನಿಮ್ಮ ಆತ್ಮದಿಂದ ನೀವು ದೇವರನ್ನು ಕಾಣಬೇಕು.  ದೇವರನ್ನು ಅವರ ಸಮಸ್ತ ಮಹಿಮೆ ಮತ್ತು ಶಕ್ತಿಯಲ್ಲಿ ನೀವು ಕಾಣಬೇಕು ಮತ್ತು ನಿಮ್ಮ ಸರ್ವಶಕ್ತಿಯಿಂದ ಅವರನ್ನು ಆರಾಧಿಸಬೇಕು.  ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ನಮ್ಮ ಪ್ರಭುವಿನೊಂದಿಗೆ ನಿಮ್ಮ ಸಂಬಂಧ ಹೇಗಿದೆ ಎಂಬುದನ್ನು ಚಿಂತಿಸಿ.  ದೇವರು ನಿಮ್ಮ ಮನಸ್ಸನ್ನು ತಮ್ಮ ಕುರಿತಾದ ನಿಜವಾದ ಅರಿವಿನಿಂದ ತುಂಬಿಸಲಿ ಮತ್ತು ನಿಮ್ಮ ಹೃದಯದಲ್ಲಿ ಉತ್ಕಟ ಪ್ರೀತಿಯನ್ನು ಉರಿಸಲಿ ಎಂದು ಪ್ರಾರ್ಥಿಸಿ.

ಪ್ರಭುವೇ, ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ನಿಮ್ಮನ್ನು ಅರಿತು ಪ್ರೀತಿಸಲು ನನಗೆ ಸಹಾಯಮಾಡಿ.  ಈ ಪವಿತ್ರ ಕೊಡುಗೆಯ ಮೂಲಕ ಉಪಸ್ಥಿತವಾಗುವ ನಿಮ್ಮ ಕರುಣೆಯ ವರವನ್ನು ಅರಿತುಕೊಳ್ಳಲು ನನಗೆ ಸಹಾಯಮಾಡಿ.  ಈ ಪವಿತ್ರ ಹೋಸ್ತಿಯಲ್ಲಿ ಉಪಸ್ಥಿತರಿರುವ ನಿಮ್ಮ ಮುಂದೆ ನಾನು ಬರುವಾಗಲೆಲ್ಲ ನಿಮ್ಮನ್ನು ಆರಾಧಿಸಲು ಕಲಿಯುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಮೂವತ್ತೊಂದನೇ ದಿನ ಧ್ಯಾನಗಳು:
ಮರುಭೂಮಿಯಲ್ಲಿ 40 ದಿನಗಳು & ಶಿಲುಬೆಯ ಬಳಿಯಲ್ಲಿ 40 ದಿನಗಳು

ಮಾರ್ಚ್ 25 – ಪ್ರಭುವಿನ ಜನನದ ಶುಭಸಂದೇಶ

ತಪಸ್ಸುಕಾಲಕ್ಕಾಗಿ ಸಂಪನ್ಮೂಲಗಳು

ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು