ಕನ್ನಡ

ಧ್ಯಾನ 82: ಮೋಹಬಂಧಗಳು

ರೆಂಬ್ರಾಂಟ್ ರಚಿಸಿದ ಐಶ್ವರ್ಯವಂತ ಮೂರ್ಖನ ಸಾಮತಿ

ವೀಡಿಯೊ

ಜೀವನದಲ್ಲಿ ನಾವು ಅಂಟಿಕೊಳ್ಳಬಹುದಾದ ಅನೇಕ ವಿಷಯಗಳಿವೆ.  ಕೆಲವೊಮ್ಮೆ ಒಳ್ಳೆಯ ವಿಷಯಗಳಿಗೂ ನಾವು ಅಂಟಿಕೊಳ್ಳಬಹುದು.  ಬಹುಪಾಲು ಸಂದರ್ಭಗಳಲ್ಲಿ ನಾವು ಅಂಟಿಕೊಳ್ಳುವುದು ನಮ್ಮದೇ ಹಠದ ಇಚ್ಛೆಗೆ.  ನಮಗೆ ಬೇಕಾದದ್ದು, ನಮಗೆ ಬೇಕಾದಾಗಲೇ ಸಿಗಬೇಕೆಂದು ನಾವು ಬಯಸುತ್ತೇವೆ.  ನೈಜ ಪವಿತ್ರತೆಯನ್ನು ಸಾಧಿಸಲು ಒಂದು ಮುಖ್ಯ ಮಾರ್ಗವೆಂದರೆ ದೇವರು ಮತ್ತು ಅವರ ಪವಿತ್ರ ಚಿತ್ತವನ್ನು ಹೊರತುಪಡಿಸಿ ಉಳಿದೆಲ್ಲದರ ಮೋಹಬಂಧಗಳಿಂದ ಮುಕ್ತರಾಗಲು ಶ್ರಮಿಸುವುದು.  ಇದಕ್ಕಾಗಿ ನಮ್ಮ ಜೀವನದಲ್ಲಿ ಬಹಳಷ್ಟನ್ನು “ಬಿಟ್ಟುಕೊಡುವುದು” ಮತ್ತು ಆಳವಾದ ಶರಣಾಗತಿ ಅಗತ್ಯ (ನೋಡಿ ದಿನಚರಿ #338).

ನೀವು ಯಾವುದಕ್ಕೆ ಅಂಟಿಕೊಂಡಿದ್ದೀರಿ?  ಮೊದಲು ನಿಮ್ಮ ಮನಸ್ಸಿಗೆ ಬರುವುದು ಯಾವುದು?  ನೀವು ಬಿಟ್ಟುಕೊಡಲು ಇಷ್ಟಪಡದಿರುವುದು ಯಾವುದು?  ಜೀವನದ ಒಳ್ಳೆಯ ವಿಷಯಗಳಿಗೂ ಅಂಟಿಕೊಳ್ಳುವುದು ದೇವರಿಗಿಂತ ಹೆಚ್ಚಾಗಿ ಸೃಷ್ಟಿವಸ್ತುಗಳಲ್ಲಿ ಭರವಸೆಯಿಡುವ ಒಂದು ರೀತಿಯಾಗಿದೆ.  ನಿಜವಾಗಿ, ದೇವರನ್ನಾಗಲಿ, ಕುಟುಂಬದವರನ್ನಾಗಲಿ, ಸ್ನೇಹಿತರನ್ನಾಗಲಿ ಅಥವಾ ಬೇರೆ ಯಾರನ್ನೇ ಆಗಲಿ ನೈಜವಾಗಿ ಪ್ರೀತಿಸಲು ಇರುವ ಏಕೈಕ ಮಾರ್ಗವೆಂದರೆ ನಿಮ್ಮ ಸ್ವಾರ್ಥಪರ ಮೋಹಬಂಧಗಳಿಂದ ಮುಕ್ತರಾಗುವುದು. ಆಗ ದೇವರ ಪ್ರೀತಿಯು ನಿಮ್ಮನ್ನು ತುಂಬಿ, ನಿಮ್ಮ ಮೂಲಕ ಇತರರನ್ನು ಅವರ ಶುದ್ಧವೂ ಪರಿಪೂರ್ಣವೂ ಆದ ಪ್ರೀತಿಯಿಂದ ಪ್ರೀತಿಸಲು ಸಾಧ್ಯವಾಗುತ್ತದೆ.

ಪ್ರಭುವೇ, ನಿನ್ನದಲ್ಲದ ಎಲ್ಲವನ್ನೂ ಬಿಟ್ಟುಕೊಡಲು ನನಗೆ ಸಹಾಯ ಮಾಡು.  ವಿಶೇಷವಾಗಿ, ನನ್ನ ಪಾಪವನ್ನು ಕಂಡುಕೊಂಡು ಅದನ್ನು ನಿನಗೆ ಒಪ್ಪಿಸಿಕೊಡಲು ನನಗೆ ಸಹಾಯ ಮಾಡು.  ನಿನ್ನ ಹೃದಯದಿಂದ ನನ್ನ ಕುಟುಂಬದವರನ್ನು ಪ್ರೀತಿಸಲು ನಾನು ಸ್ವತಂತ್ರನಾಗುವಂತೆ, ಅವರೊಂದಿಗಿನ ಮೋಹಬಂಧಗಳಿಂದಲೂ ಪವಿತ್ರವಾದ ರೀತಿಯಲ್ಲಿ ಮುಕ್ತನಾಗಲು ನನಗೆ ಸಹಾಯ ಮಾಡು.  ನನ್ನ ಪ್ರಭುವೇ, ನೀನೇ ನನ್ನ ಏಕೈಕ ಗುರಿಯೂ ಪ್ರೀತಿಯೂ ಆಗಿರು. ಈ ಪ್ರೀತಿಯಲ್ಲಿ ನಿನ್ನ ಹೃದಯದಿಂದ ಎಲ್ಲರನ್ನೂ ಹೇಗೆ ಪ್ರೀತಿಸಬೇಕೆಂದು ನಾನು ಕಂಡುಕೊಳ್ಳುವಂತಾಗಲಿ.  ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೇನೆ.

ಇಪ್ಪತ್ತೊಂಬತ್ತನೆಯ ದಿನ ಧ್ಯಾನಗಳು:
40 Days in the Desert & 40 Days at the Cross

ಮಾರ್ಚ್ 23 – ಮೊಗ್ರೊವೆಜೊದ ಸಂತ ತುರಿಬಿಯುಸ್, ಧರ್ಮಾಧ್ಯಕ್ಷರು

ತಪಸ್ಸುಕಾಲಕ್ಕಾಗಿ ಸಂಪನ್ಮೂಲಗಳು

ತಪಸ್ಸುಕಾಲಕ್ಕಾಗಿ ಸಂಪನ್ಮೂಲಗಳು

ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು

ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು

ಇಂದಿನ ಸಂತರು/ಹಬ್ಬಗಳು