ಕನ್ನಡ

ಚಿಂತನೆ 19: ಪ್ರಭುವು ತಮ್ಮ ಕರುಣೆಯಲ್ಲಿ ನಿಮ್ಮನ್ನು ಸ್ವೀಕರಿಸುತ್ತಾರೆ

ನೀವು ನಿಜವಾಗಿಯೂ ನಮ್ಮ ದಿವ್ಯ ಪ್ರಭುವನ್ನು ಹುಡುಕಿದ್ದರೆ, ಅವರು ತಮ್ಮ ಹೃದಯದಲ್ಲಿಯೂ ತಮ್ಮ ಪವಿತ್ರ ಚಿತ್ತದಲ್ಲಿಯೂ ನಿಮ್ಮನ್ನು ಸ್ವೀಕರಿಸುವರೇ ಎಂದು ಕೇಳಿ.  ಅವರನ್ನು ಕೇಳಿ, ಅವರ ಮಾತನ್ನು ಆಲಿಸಿ.  ನೀವು ಎಲ್ಲವನ್ನೂ ಸಮರ್ಪಿಸಿ, ನಿಮ್ಮನ್ನೇ ಅವರಿಗೆ ಅರ್ಪಿಸಿಕೊಂಡಿದ್ದರೆ, ಅವರು ನಿಮ್ಮನ್ನು ಸ್ವೀಕರಿಸುತ್ತಾರೆಂದು ನಿಮಗೆ ಉತ್ತರಿಸುವರು.  ಒಮ್ಮೆ…

ಚಿಂತನೆ 15: ದೇವರು ತಮ್ಮ ಪ್ರೀತಿಯಲ್ಲಿ ಎಂದಿಗೂ ಹಿಂದೆ ಸರಿಯುವುದಿಲ್ಲ

ದೇವರಿಗೆ ಸ್ಪಂದಿಸುವುದನ್ನು ನೀವು ಮುಂದೂಡುತ್ತೀರಾ? ಅವರು ನಿರಂತರವಾಗಿ ನೀಡುವ ಕರೆಯನ್ನು ನಿರ್ಲಕ್ಷಿಸುತ್ತೀರಾ? ಅಸಂಖ್ಯಾತ ಚಿತ್ತಭಂಗಗಳ ನಡುವೆ ಅವರ ಸ್ವರ ಕೇಳಿಸದಂತೆ ಮಾಡುತ್ತೀರಾ? ದೇವರು ನಿಮ್ಮನ್ನು ಕರೆಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಅವರಿಗೆ ಕಿವಿಗೊಡಿ. ಕೆಲವೊಮ್ಮೆ ನಾವು ದೇವರಿಗೆ ಸ್ಪಂದಿಸುವುದನ್ನು ಮುಂದೂಡುತ್ತೇವೆ; ಏಕೆಂದರೆ ಜೀವನದಲ್ಲಿ ತೃಪ್ತಿಯನ್ನು ಬೇರೆ ಯಾವುದಾದರೂ…

featured image DM

ಧ್ಯಾನ 6: ದೈವಿಕ ಕರುಣೆಯ ಚಿತ್ರ

ಸಂತ ಫೌಸ್ಟಿನಾ ಅವರ ದಿನಚರಿಯು ವಿವಿಧ ರೀತಿಗಳಲ್ಲಿ ಹೊಸ ಭಕ್ತಿರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಮೊದಲನೆಯದು ದೈವಿಕ ಕರುಣೆಯ ಪವಿತ್ರ ಚಿತ್ರವನ್ನು ಧ್ಯಾನಿಸುವುದು.  ಎಲ್ಲರೂ ನೋಡುವಂತೆ ತಮ್ಮ ಕರುಣಾಮಯ ಪ್ರೀತಿಯ ಚಿತ್ರವನ್ನು ಬಿಡಿಸುವಂತೆ ಯೇಸು ಸಂತ ಫೌಸ್ಟಿನಾ ಅವರನ್ನು ಕೇಳಿಕೊಂಡರು. ಅದು…

ಚಿಂತನೆ 2: ಕರುಣೆಯ ಕಾರ್ಯವಾಗಿ ಸೃಷ್ಟಿ

ದೈವಿಕ ಕರುಣೆಯನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ಸಿದ್ಧತೆಯಾಗಿ, ನಾವು ದೇವರ ಮೊದಲ ಕೊಡುಗೆಯಿಂದ ಆರಂಭಿಸುತ್ತೇವೆ: ಲೋಕದ ಸೃಷ್ಟಿ. ದೇವರು ತಮ್ಮ ಒಳ್ಳೆಯತನದಿಂದ ಲೋಕವನ್ನು ಶೂನ್ಯದಿಂದ ಸೃಷ್ಟಿಸಿದರು. ಶೂನ್ಯದಿಂದ ಎಲ್ಲವನ್ನೂ ಸೃಷ್ಟಿಸಿದ ಈ ಕಾರ್ಯವು, ಸೃಷ್ಟಿಯು…

ಧ್ಯಾನಚಿಂತನೆ 365: ಕರುಣೆಯ ರಾಣಿ

ಈ ಕೊನೆಯ ಧ್ಯಾನಚಿಂತನೆಯನ್ನು ಕರುಣೆಯ ರಾಣಿಯಾದ, ಅತ್ಯಂತ ಮಹಿಮಾವಂತ ದೇವಮಾತೆಗೆ ಸಮರ್ಪಿಸಲಾಗಿದೆ.  ಅವರು ಎಲ್ಲರಿಗಿಂತಲೂ ಹೆಚ್ಚಾಗಿ ದೇವರ ಕರುಣೆಯ ಪರಿಪೂರ್ಣ ಸಾಧನವಾಗಿದ್ದರು ಮತ್ತು ಇಂದಿಗೂ ಆಗಿದ್ದಾರೆ.  ಮಂಗಳವಾರ್ತೆಯ ಸಂದರ್ಭದಲ್ಲಿ ತಮ್ಮ ಸಮ್ಮತಿಯಿಂದ, ತಮ್ಮ “ಹೌದು” ಎಂಬ ಒಪ್ಪಿಗೆಯಿಂದ, ಕರುಣಾಸ್ವರೂಪನನ್ನೇ ಈ ಲೋಕಕ್ಕೆ ತಂದರು.  ಅವರು…

ಚಿಂತನೆ 363: ದೇವರು ಮಾತನಾಡುವುದನ್ನು ಆಲಿಸುವುದು

ನೀವು ತುಂಬಾ ಗದ್ದಲವಿರುವ, ಜನರಿಂದ ಕಿಕ್ಕಿರಿದ ಕೋಣೆಯಲ್ಲಿದ್ದೀರಿ ಮತ್ತು ಕೋಣೆಯ ಇನ್ನೊಂದು ತುದಿಯಿಂದ ಯಾರೋ ನಿಮ್ಮೊಡನೆ ಪಿಸುಮಾತಿನಲ್ಲಿ ಮಾತನಾಡುತ್ತಿದ್ದಾರೆಂದು ಊಹಿಸಿಕೊಳ್ಳಿ.  ಅವರು ಮಾತನಾಡಲು ಪ್ರಯತ್ನಿಸುತ್ತಿರುವುದು ನಿಮ್ಮ ಗಮನಕ್ಕೆ ಬರಬಹುದು, ಆದರೆ ಅವರ ಮಾತುಗಳನ್ನು ಕೇಳುವುದು ಕಷ್ಟವಾಗಬಹುದು.  ದೇವರ ಸ್ವರವೂ ಬಹುಮಟ್ಟಿಗೆ ಹೀಗೆಯೇ ಇರುತ್ತದೆ.  ದೇವರು ಮಾತನಾಡುವಾಗ ಪಿಸುಮಾತಿನಲ್ಲಿ ಮಾತನಾಡುತ್ತಾರೆ.  ಅವರು ಮೃದುವಾಗಿ ಮಾತನಾಡುತ್ತಾರೆ…

ಚಿಂತನೆ 362: ಕರುಣೆಯ ಎರಡು ಹೃದಯಗಳು

ಯೇಸುವಿನ ಹೃದಯವು ಪರಿಶುದ್ಧ ಕರುಣೆಯೇ ಆಗಿದೆ.  ಅದು ಲೋಕದ ಮೇಲೆ ಹರಿಯುವ ಅನುಗ್ರಹದ ಚಿಲುಮೆಯಾಗಿದೆ.  ಇದು ಸಾಂತ್ವನ ನೀಡುತ್ತದೆ. ಆದರೆ ಇನ್ನೊಂದು ಹೃದಯವೂ ಕರುಣೆಯ ಚಿಲುಮೆಯಾಗಬೇಕು; ಅದು ನಿಮ್ಮ ಹೃದಯವೇ.  ನೀವು ಪ್ರಭುವಿನ ಕರುಣೆಯಲ್ಲಿ ಎಷ್ಟು ಆಳವಾಗಿ ಮುಳುಗಬೇಕೆಂದರೆ, ನಿಮ್ಮ ಹೃದಯ…

ಧ್ಯಾನ 361: ತ್ಯಾಗ ಮತ್ತು ಪ್ರಾರ್ಥನೆ

ಇದನ್ನು ಅರ್ಥಮಾಡಿಕೊಳ್ಳುವುದು ಮತ್ತು ನಂಬುವುದು ಕಷ್ಟವಾಗಬಹುದಾದರೂ, ನಿರ್ಮಲ ಪ್ರಾರ್ಥನೆಯೊಂದಿಗೆ ಒಂದಾದ ಆಂತರಿಕ ತ್ಯಾಗವು ಜಗತ್ತಿನಾದ್ಯಂತ ಸುವಾರ್ತೆಯ ಘೋಷಣೆಗೆ ಅಪಾರ ಒಳಿತನ್ನು ಉಂಟುಮಾಡುತ್ತದೆ.  ನಿಜವಾಗಿ, ಪ್ರತಿದಿನ ಆಂತರಿಕ ತ್ಯಾಗಗಳನ್ನು ಅರ್ಪಿಸುತ್ತಿದ್ದ ಪವಿತ್ರ ಆತ್ಮಗಳ ಶಕ್ತಿ ಧರ್ಮಪ್ರಚಾರಕರಿಗೆ ಇಲ್ಲದಿದ್ದರೆ…

ಧ್ಯಾನ 359: ನಿತ್ಯತೆಯ ಪ್ರೀತಿ

ದೇವರಲ್ಲಿ ಕಾಲ ಎಂಬುದಿಲ್ಲ.  ಕಾಲವು ಭೂಲೋಕಕ್ಕೆ ಮಾತ್ರ ಸೇರಿದ ವಿದ್ಯಮಾನವಾಗಿದೆ.  ದೇವರಲ್ಲಿ ಎಲ್ಲವೂ ಇವೆ, ಸದಾ ಇದ್ದವು ಮತ್ತು ಸದಾ ಇರುತ್ತವೆ.  ಈ ನಿತ್ಯ ಪ್ರೀತಿಯ ಒಂದು ಪರಿಣಾಮವೆಂದರೆ, ದೇವರು ನಿಮ್ಮನ್ನು ಅನಾದಿಯಿಂದಲೂ ಪ್ರೀತಿಸುತ್ತಾ ಬಂದಿದ್ದಾರೆ.  ಜಗತ್ತಿನ ಅಸ್ತಿವಾರವನ್ನು ಹಾಕುವುದಕ್ಕೂ ಮುನ್ನವೇ ಅವರು ನಿಮ್ಮನ್ನು ತಿಳಿದಿದ್ದರು ಮತ್ತು ಮುಂದೆಯೂ ತಿಳಿದಿರುವರು…

ಚಿಂತನೆ 357: ಅನುಗ್ರಹದ ಪ್ರೇರಣೆಗಳು

ಯಾರಾದರೂ ಸಂಕಟದಲ್ಲಿರುವಾಗ ನೀವು ಅವರಿಂದ ದೂರ ಸರಿಯಬಹುದು.  ಅವರೊಂದಿಗೆ ಮಾತನಾಡಲು ಮುಂದಾದರೆ ನಿಮ್ಮ ಸಮಯ ಮತ್ತು ಶಕ್ತಿಯ ಮೇಲೆ ದೊಡ್ಡ ಹೊರೆ ಬೀಳುತ್ತದೆ ಎಂದು ಯೋಚಿಸುವುದು ಸುಲಭ.  ಆದರೆ ನಿಮ್ಮ ಸಂಭಾಷಣೆಯನ್ನು ಪ್ರಭುವೇ ನಡೆಸುತ್ತಿದ್ದರೆ, ಅವರು ಸ್ವಲ್ಪ ಸಮಯದಲ್ಲೇ ಅದ್ಭುತ ಕಾರ್ಯಗಳನ್ನು ಮಾಡಬಲ್ಲರು.  ನಿಜ, ಇವೆ…