ಕನ್ನಡ

ಮನನ 151: ಆಧ್ಯಾತ್ಮಿಕ ಬಾಂಧವ್ಯ

ಇನ್ನೊಬ್ಬರಿಗೆ ನಿಜವಾಗಿಯೂ ಆಪ್ತರಾಗಿರಲು ಮತ್ತು ಅವರನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ನಿರಂತರವಾಗಿ ಮಾತನಾಡುವುದು ಮತ್ತು ನಿಮ್ಮ ಮನಸ್ಸು ಹಾಗೂ ಹೃದಯದ ಪ್ರತಿಯೊಂದು ವಿವರವನ್ನೂ ಹಂಚಿಕೊಳ್ಳುವುದು ಅಗತ್ಯವೇ?  ಎರಡೂ ಆತ್ಮಗಳು ದೇವರೊಂದಿಗೆ ಆಪ್ತವಾಗಿ ಒಂದಾಗಿದ್ದರೆ ಅದು ಅಗತ್ಯವಿಲ್ಲ.  ಅಂಥ ಸಂದರ್ಭದಲ್ಲಿ, ತಮ್ಮಿಬ್ಬರಲ್ಲೂ ಸಾಮಾನ್ಯವಾಗಿರುವುದನ್ನು ಪ್ರತಿಯೊಬ್ಬರೂ ಗುರುತಿಸಲು ಹೇಳಬೇಕಾದದ್ದು ತೀರಾ ಸ್ವಲ್ಪವೇ…

ಧ್ಯಾನ 148: ಶುದ್ಧಿಸ್ಥಳದಲ್ಲಿರುವವರಿಗಾಗಿ ಕರುಣೆ

ಪ್ರೀತಿಪಾತ್ರರೊಬ್ಬರು ಮರಣಹೊಂದಿದಾಗ, ಅವರು ಸ್ವರ್ಗದಲ್ಲಿದ್ದಾರೆ ಮತ್ತು ಅವರಿಗೆ ಇನ್ನು ನಮ್ಮ ಪ್ರಾರ್ಥನೆಗಳ ಅಗತ್ಯವಿಲ್ಲ ಎಂದು ತಕ್ಷಣವೇ ಭಾವಿಸುವುದು ಸುಲಭ.  ಆದರೆ ನಮಗಿಂತ ಮುಂಚೆ ಇಹಲೋಕವನ್ನು ತ್ಯಜಿಸಿದವರಿಗೆ ನಾವು ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಗಳಲ್ಲಿ ನಮ್ಮ ಪ್ರಾರ್ಥನೆಗಳೂ ಒಂದು.  ಅನುಗ್ರಹದ ಸ್ಥಿತಿಯಲ್ಲಿ ಮರಣಹೊಂದುವ ಪ್ರತಿಯೊಬ್ಬರೂ…

ಧ್ಯಾನ 142: ಪ್ರಭುವಿನ ಶಾಂತಿ ಕೆಡುಕನ್ನು ದೂರಮಾಡುತ್ತದೆ

ದುಷ್ಟನಾದ ಸೈತಾನನು ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಗುರುತಿಸುವುದು ಮುಖ್ಯ.  ಅವನ ಕೋಪ ಮತ್ತು ದ್ವೇಷವನ್ನು ಅರಿತುಕೊಳ್ಳುವುದೂ ಮುಖ್ಯ.  ಅವನ ದ್ವೇಷದ ತೀವ್ರತೆ ನಮ್ಮ ಗ್ರಹಿಕೆಗೂ ಮೀರಿದ್ದಾಗಿದೆ.  ನಮ್ಮನ್ನು ದ್ವೇಷಿಸುವುದನ್ನೂ ತನ್ನ ಸರ್ವಶಕ್ತಿಯನ್ನು ಬಳಸಿ ನಮ್ಮನ್ನು ನಾಶಮಾಡಲು ಯತ್ನಿಸುವುದನ್ನೂ ನಿಲ್ಲಿಸುವುದು ಅವನ ನಿಯಂತ್ರಣಕ್ಕೆ ಮೀರಿದ ಸಂಗತಿಯಾಗಿದೆ.  ಏಕೆ ಇದು…

ಧ್ಯಾನ 141: ದೇವದೂತರ ಕರುಣೆ

ದೇವದೂತಗಣಗಳೆಂಬ ಕೊಡುಗೆಯನ್ನು ನಾವು ಸ್ವರ್ಗದಲ್ಲಿ ಮಾತ್ರ ಅರ್ಥಮಾಡಿಕೊಳ್ಳುವೆವು.  ಈ ಮಹೋನ್ನತ ಆಧ್ಯಾತ್ಮಿಕ ಜೀವಿಗಳನ್ನು ದೇವರು ಪ್ರೀತಿಯಿಂದ ಸೃಷ್ಟಿಸಿದರು.  ಕೆಲವರು ಪರಮಪವಿತ್ರ ತ್ರಿತ್ವವನ್ನು ನಿತ್ಯವೂ ಪೂಜಿಸುವ ಮತ್ತು ಆರಾಧಿಸುವ ಏಕೈಕ ಉದ್ದೇಶಕ್ಕಾಗಿ ಸೃಷ್ಟಿಸಲ್ಪಟ್ಟರು.  ಅವರು ಈ ಕರೆಯಲ್ಲಿ ಎಂದಿಗೂ ಆಯಾಸಗೊಳ್ಳದೆ, ದೇವರನ್ನು ಸದಾ…

ಧ್ಯಾನ 134: ನಮ್ಮ ಜಂಟಿ ಪರಿಶ್ರಮದ ಮಾಧುರ್ಯ

ಒಂದು ಜೇನುನೊಣವು ದಿನದಿಂದ ದಿನಕ್ಕೆ ಶ್ರದ್ಧೆಯಿಂದ ದುಡಿಯುತ್ತದೆ; ಜೇನುನೊಣಗಳ ಸಮೂಹದಲ್ಲಿರುವ ಎಲ್ಲವೂ ಒಂದೇ ಸಹಜ ಗುರಿಗಾಗಿ ಶ್ರಮಿಸುತ್ತವೆ.  ಅವು ಜೇನುತುಪ್ಪವನ್ನು ತಯಾರಿಸಲು ದುಡಿಯುತ್ತವೆ.  ಇದು ಸಣ್ಣ ಕೆಲಸವಲ್ಲ; ಸ್ವಲ್ಪ ಜೇನುತುಪ್ಪವನ್ನು ತಯಾರಿಸಲೂ ಸಾವಿರಾರು ಜೇನುನೊಣಗಳು ನಿರಂತರವಾಗಿ ದುಡಿಯಬೇಕಾಗುತ್ತದೆ.  ಆದರೆ ಕೊನೆಯಲ್ಲಿ ಅವುಗಳ ಪರಿಶ್ರಮಕ್ಕೆ ಫಲ ದೊರೆಯುತ್ತದೆ…

ಚಿಂತನೆ 132: ಗ್ರಹಿಕೆಗೆ ನಿಲುಕದ ದೇವರು

ನಮ್ಮೆಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುವ ಒಂದು ಪ್ರವೃತ್ತಿಯೆಂದರೆ ಕುತೂಹಲ.  ತಿಳಿದುಕೊಳ್ಳಬೇಕೆಂಬ ಬಯಕೆಯಿಂದ ನಾವು ಬಹುತೇಕ ಎಲ್ಲದರ ಬಗ್ಗೆಯೂ ಸುಲಭವಾಗಿ ಕುತೂಹಲ ಹೊಂದುತ್ತೇವೆ.  ನಿಯತಕಾಲಿಕೆಗಳು, ಸುದ್ದಿ ಲೇಖನಗಳು, ಕಾರ್ಯಕ್ರಮಗಳು, ದಿನನಿತ್ಯದ ಹರಟೆಗಳು ಮುಂತಾದವೆಲ್ಲವೂ ನಮ್ಮ ಕುತೂಹಲವನ್ನು ತಣಿಸುವ ಗುರಿಯನ್ನು ಹೊಂದಿವೆ.  ಈ ಕುತೂಹಲವು ದೇವರನ್ನು ತಿಳಿದುಕೊಳ್ಳುವ ಬಯಕೆಯಾಗಿ ಮಾರ್ಪಡಬೇಕು ಮತ್ತು…

ಧ್ಯಾನ 129: ಭಯಪಡಬೇಡಿ

“ಭಯಪಡಬೇಡ; ವಿಶ್ವಾಸವೊಂದಿರಲಿ” (ಮಾರ್ಕ 5:36).  “ಭಯಪಡಬೇಡ” ಎಂಬ ಈ ನಾಲ್ಕು ಪದಗಳನ್ನು ಪವಿತ್ರ ಗ್ರಂಥದ ಉದ್ದಕ್ಕೂ ಅಸಂಖ್ಯಾತ ಬಾರಿ ಹೇಳಲಾಗಿದೆ.  ನಾವು ಅವುಗಳಿಗೆ ಗಮನಕೊಡಬೇಕು.  ಭಯವು ನಮ್ಮನ್ನು ನಿಶ್ಚೇಷ್ಟರನ್ನಾಗಿ ಮಾಡಿ, ಅನೇಕ ರೀತಿಯ ಮೂರ್ಖ ಆಲೋಚನೆಗಳು ಮತ್ತು ಕೃತ್ಯಗಳಿಗೆ ನಮ್ಮನ್ನು ಕರೆದೊಯ್ಯಬಲ್ಲದು.  ಆ ವ್ಯಕ್ತಿ…

ಧ್ಯಾನ 117: ನಿಮ್ಮ ಹೃದಯದ ಆವರಣ

ಕೆಲವು ಧಾರ್ಮಿಕ ಸಹೋದರಿಯರು ಮತ್ತು ಸಂನ್ಯಾಸಿಗಳು ಒಂದು ಆವರಣದ ಗಡಿಗಳೊಳಗೆ ಏಕಾಂತವಾಸದ ಜೀವನ ನಡೆಸುತ್ತಾರೆ.  ಆ ವಿಶ್ವಾಸ ಸಮುದಾಯದ ಸದಸ್ಯರಲ್ಲದ ಯಾರೂ ಸೂಕ್ತ ಕಾರಣವಿಲ್ಲದೆ ಆ ಆವರಣವನ್ನು ಪ್ರವೇಶಿಸುವಂತಿಲ್ಲ. ಇತರರು ಮಠಾಧ್ಯಕ್ಷರ ಅನುಮತಿಯಿಂದ ಮಾತ್ರ ಪ್ರವೇಶಿಸಬಹುದು.  ಬಹುಶಃ…

ಧ್ಯಾನ 115: ದೇವರ ಚಿತ್ತವು ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ

ದೇವರ ಚಿತ್ತವೆಂದರೆ ಅವರು ನಿಮಗಾಗಿ ರೂಪಿಸಿರುವ ಭವಿಷ್ಯದ ಯೋಜನೆಗಿಂತಲೂ ಬಹಳ ಹೆಚ್ಚಿನದು.  ಅದು ನಿಮ್ಮ ಕುರಿತಾದ ಅವರ ಆಶೆ ಮತ್ತು ಕನಸುಗಳಿಗಿಂತಲೂ ಹೆಚ್ಚಿನದು.  ಅವರ ಚಿತ್ತವು ಪಾವಿತ್ರ್ಯದ ಕಡೆಗೆ ನಿಮ್ಮನ್ನು ನಡೆಸುವ ಮಾರ್ಗವಾಗಿದೆ; ಅದು ಅತ್ಯಂತ ಹೆಚ್ಚಿನ ಸಾಂತ್ವನ ಮತ್ತು ಆನಂದದ ಮೂಲವೂ ಆಗಿದೆ.  ಅವರ ಚಿತ್ತವು ಸಕ್ರಿಯವೂ ನಿಷ್ಕ್ರಿಯವೂ (ಅನುಮತಿಸುವಂಥದ್ದೂ) ಆಗಿದೆ.  ಅದು…

ಧ್ಯಾನ 108: ಧರ್ಮಸಭೆಯ ವಾಣಿ

ದೇವರು ಅನೇಕ ಆಂತರಿಕ ಅನುಗ್ರಹಗಳು ಮತ್ತು ಪ್ರೇರಣೆಗಳ ಮೂಲಕವೂ ಸೇರಿದಂತೆ ನಾನಾ ರೀತಿಗಳಲ್ಲಿ ಸಂತರೊಂದಿಗೆ ಮಾತನಾಡಿದ್ದಾರೆ.  ಆದರೆ ಪಾವಿತ್ರ್ಯದ ಉನ್ನತ ಮಟ್ಟದಲ್ಲಿ ಜೀವಿಸುವ ಅತ್ಯಂತ ಶ್ರೇಷ್ಠ ಅನುಭಾವಿಯೂ ಅಂತಿಮವಾಗಿ ಧರ್ಮಸಭೆಯ ಮೂಲಕ ನುಡಿಯುವ ದೇವರ ವಾಣಿಗೆ ವಿಧೇಯರಾಗಬೇಕು.  ಧರ್ಮಸಭೆಯು, ವಿಶೇಷವಾಗಿ…