ಚಿತ್ರದ ಮೂಲ: Needpix.com
ಕೆಲವೊಮ್ಮೆ ನಮಗೆ ಗೊಣಗುವ ಪ್ರಲೋಭನೆ ಉಂಟಾಗುತ್ತದೆ. ದೇವರನ್ನೂ ಅವರ ಪರಿಪೂರ್ಣ ಪ್ರೀತಿಯನ್ನೂ ಪರಿಪೂರ್ಣ ಯೋಜನೆಯನ್ನೂ ಪ್ರಶ್ನಿಸುವ ಪ್ರಲೋಭನೆ ಬಂದಾಗ, ಅದು ಕೇವಲ ಒಂದು ಪ್ರಲೋಭನೆ ಮಾತ್ರ…ಅದಕ್ಕಿಂತ ಹೆಚ್ಚೇನೂ ಅಲ್ಲ ಎಂಬುದನ್ನು ತಿಳಿದುಕೊಳ್ಳಿ. ದೇವರ ಪ್ರೀತಿಯನ್ನು ಸಂಶಯಿಸುವ ಮತ್ತು ಪ್ರಶ್ನಿಸುವ ಆ ಪ್ರಲೋಭನೆಯ ಮಧ್ಯೆಯೇ, ನಿಮ್ಮ ಭರವಸೆಯನ್ನು ನವೀಕರಿಸಿ ಮತ್ತು ನಿಮ್ಮ ಬಗ್ಗೆಯೇ ಮರುಕಪಡುವುದನ್ನು ಬಿಟ್ಟುಬಿಡಿ. ಹೀಗೆ ಮಾಡುವುದರಲ್ಲಿ ನೀವು ಬಲವನ್ನು ಕಂಡುಕೊಳ್ಳುವಿರಿ (ನೋಡಿ ದಿನಚರಿ #25).
ಈ ವಾರ ನೀವು ಯಾವುದರ ಬಗ್ಗೆ ಹೆಚ್ಚು ಗೊಣಗಿದ್ದೀರಿ? ಯಾವುದು ನಿಮ್ಮನ್ನು ಕೋಪಗೊಳ್ಳಲು ಅಥವಾ ಕಿರಿಕಿರಿಗೊಳ್ಳಲು ಹೆಚ್ಚು ಪ್ರಲೋಭಿಸುತ್ತದೆ? ಈ ಪ್ರಲೋಭನೆಯು ನಿಮ್ಮ ಬಗ್ಗೆಯೇ ಮರುಕಪಡುವ ಭಾವನೆಗಳಿಗೆ ದಾರಿಮಾಡಿಕೊಟ್ಟಿದೆಯೇ? ದೇವರ ಪರಿಪೂರ್ಣ ಪ್ರೀತಿಯಲ್ಲಿ ನಿಮಗಿರುವ ಭರವಸೆಯನ್ನು ಅದು ದುರ್ಬಲಗೊಳಿಸಿದೆಯೇ? ಈ ಪ್ರಲೋಭನೆಯ ಬಗ್ಗೆ ಚಿಂತಿಸಿ, ಅದನ್ನು ಪ್ರೀತಿ ಮತ್ತು ಸದ್ಗುಣದಲ್ಲಿ ಬೆಳೆಯುವ ಸಾಧನವಾಗಿ ನೋಡಿ. ಅನೇಕ ಬಾರಿ ನಮ್ಮ ಅತಿ ದೊಡ್ಡ ಹೋರಾಟದ ಮರೆಯಲ್ಲಿ ಪವಿತ್ರತೆಯಲ್ಲಿ ಬೆಳೆಯುವ ನಮ್ಮ ಅತ್ಯುತ್ತಮ ಮಾರ್ಗ ಅಡಗಿರುತ್ತದೆ.
ಪ್ರಭುವೇ, ನಾನು ಗೊಣಗಿದ, ಕೋಪಗೊಂಡ ಮತ್ತು ನಿಮ್ಮ ಪರಿಪೂರ್ಣ ಪ್ರೀತಿಯನ್ನು ಸಂಶಯಿಸಿದ ಸಂದರ್ಭಗಳಿಗಾಗಿ ಪಶ್ಚಾತ್ತಾಪಪಡುತ್ತೇನೆ. ನನ್ನ ಬಗ್ಗೆಯೇ ಮರುಕಪಡುವ ಭಾವನೆಗಳಿಗೆ ನಾನು ಎಡೆಮಾಡಿಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ಇಂದು ಈ ಭಾವನೆಗಳನ್ನು ಬಿಟ್ಟುಬಿಡಲು ಮತ್ತು ಈ ಪ್ರಲೋಭನೆಗಳನ್ನು ಇನ್ನಷ್ಟು ಆಳವಾದ ಭರವಸೆ ಹಾಗೂ ಶರಣಾಗತಿಯ ಕ್ಷಣಗಳಾಗಿ ಪರಿವರ್ತಿಸಲು ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಜನವರಿ 28: ಸಂತ ತೋಮಸ್ ಅಕ್ವಿನಾಸ್, ಯಾಜಕ ಮತ್ತು ಧರ್ಮಸಭೆಯ ಪಂಡಿತ—ಸ್ಮರಣೆ
ದೈವಿಕ ಕರುಣೆಯ ಕುರಿತ ಇನ್ನಷ್ಟು ಚಿಂತನೆಗಳು
ದೈನಂದಿನ ಸುವಾರ್ತಾ ಧ್ಯಾನಚಿಂತನೆಗಳು
ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು




