ಕನ್ನಡ

ಧ್ಯಾನ 188: ಪ್ರಭುವಿನ ಬೇಡಿಕೆಗಳು

ಪ್ರಭು ನಿಮ್ಮನ್ನು ಏನನ್ನಾದರೂ ಮಾಡಲು ಕೇಳಿದರೆ, ನಿಮಗೆ ಆಯ್ಕೆ ಇದೆಯೇ?  “ಇಲ್ಲ” ಎಂದು ಹೇಳಬಹುದೆಂಬ ಮಟ್ಟಿಗೆ ನಿಮಗೆ ಆಯ್ಕೆ ಇದೆ.  ಆದರೆ ಅದು ಪಾಪವಾಗಿದೆ.  ಆದರೆ ನೀವು ಕ್ರಿಸ್ತನನ್ನು ಅನುಸರಿಸಲು ಆರಿಸಿಕೊಂಡಿದ್ದು, ನಿಮ್ಮ ಗುರಿ ಸ್ವರ್ಗವಾಗಿದ್ದರೆ, ಪ್ರಭು ನಮ್ಮನ್ನು ಕೇಳುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳುವುದು ಸಮಂಜಸ.  ಆತನ…

ಚಿಂತನೆ 187: ಬಿರುಗಾಳಿಯ ನಂತರದ ಕಾಮನಬಿಲ್ಲು

ಸೃಷ್ಟಿಯೇ ದೇವರ ಮಹಿಮೆಯನ್ನು ಸಾರುವುದು ಮತ್ತು ವಿಶ್ವಾಸದ ವಿಷಯಗಳ ಬಗ್ಗೆ ನಮಗೆ ಕಲಿಸುವುದು ಎಷ್ಟು ವಿಸ್ಮಯಕರವಾಗಿದೆ.  ಕಾಮನಬಿಲ್ಲನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ.  ಅದು ಪ್ರಕಾಶಮಾನವೂ ಸುಂದರವೂ, ವರ್ಣಮಯವೂ ವಿಸ್ಮಯವನ್ನು ಉಂಟುಮಾಡುವಂಥದ್ದೂ ಆಗಿದೆ.  ಕಾಮನಬಿಲ್ಲನ್ನು ಕಂಡಾಗ ಎಲ್ಲರೂ ಸಂತೋಷಪಡುತ್ತಾರೆ.  ಆದರೆ ಮಳೆಯೋ ಬಿರುಗಾಳಿಯೋ ಇಲ್ಲದೆ ಕಾಮನಬಿಲ್ಲು ಕಾಣಿಸಿಕೊಳ್ಳುವುದೇ ಇಲ್ಲ.  ಜೀವನವೂ ಹಾಗೆಯೇ.  ನಾವು…

ಧ್ಯಾನ 186: ದೇವರಿಂದ ಆಮೂಲಾಗ್ರವಾಗಿ ಭೇದಿಸಲ್ಪಡುವುದು

ನಿಮ್ಮ ಆತ್ಮವು ದೇವರಿಂದ “ಆಮೂಲಾಗ್ರವಾಗಿ ಭೇದಿಸಲ್ಪಟ್ಟಿದೆಯೇ”?  ಅವರು ನಿಮ್ಮನ್ನು “ವ್ಯಾಪಿಸಿಕೊಂಡಿದ್ದಾರೆಯೇ”?  ಅವರ ದೈವತ್ವದಲ್ಲಿ “ಕರಗಿಹೋಗಲು” ಮತ್ತು ಅವರ ಕರುಣೆಯಿಂದ “ಆವರಿಸಲ್ಪಡಲು” ನೀವು ನಿಮ್ಮನ್ನು ಒಪ್ಪಿಸಿಕೊಡುತ್ತೀರಾ?  ದೇವರೊಂದಿಗಿನ ನಮ್ಮ ಸಂಬಂಧವನ್ನು ವರ್ಣಿಸಲು ನಾವು ಬಳಸಬಹುದಾದ ಪದಗಳು ಎಷ್ಟೋ ಇವೆ.  ದೇವರು ಯಾರು ಮತ್ತು ಯಾವ…

ಧ್ಯಾನ 185:  ಅಪರಿಮಿತ ಸಂಪನ್ಮೂಲಗಳೊಂದಿಗೆ ಉದಾರತೆ

ದೂರದ ನಾಡೊಂದರಲ್ಲಿ ಭೀಕರ ಕ್ಷಾಮವಿದೆ ಎಂದು ನಿಮಗೆ ತಿಳಿದಿದ್ದು, ಆ ಕ್ಷಾಮವನ್ನು ನಿವಾರಿಸಲು ಅಪರಿಮಿತ ಸಂಪನ್ಮೂಲಗಳ ಆಶೀರ್ವಾದವೂ ನಿಮಗೆ ದೊರೆತಿದ್ದರೆ, ಅಗತ್ಯದಲ್ಲಿರುವವರಿಗೆ ಈ ಕೊಡುಗೆಯನ್ನು ನೀಡದೆ ಏಕೆ ತಡೆಹಿಡಿಯುವಿರಿ?  ನೀವು ಹಾಗೆ ಮಾಡುವುದಿಲ್ಲವೆಂದು ಆಶಿಸುತ್ತೇನೆ.  ನಿಮ್ಮ ಜವಾಬ್ದಾರಿಯನ್ನು ಅರಿತು, ಅಗತ್ಯವಾದುದನ್ನು ಮಾಡುವಿರೆಂದು ಆಶಿಸುತ್ತೇನೆ…

ಧ್ಯಾನ 184: ಯಾಜಕರ ಸೇವಾಕಾರ್ಯದ ಕರುಣೆ

ಇಲ್ಲ, ಯಾಜಕರು ಪರಿಪೂರ್ಣರಲ್ಲ.  ಅವರು ದಿನನಿತ್ಯ ಪಾಪ ಮಾಡುತ್ತಾರೆ.  ಉಳಿದ ಎಲ್ಲ ಮಾನವರಂತೆಯೇ ಅವರಿಗೂ ತಮ್ಮ ದೈನಂದಿನ ಜೀವನದಲ್ಲಿ ನಿರಂತರ ಪಶ್ಚಾತ್ತಾಪ ಮತ್ತು ಮನಃಪರಿವರ್ತನೆಯ ಅಗತ್ಯವಿದೆ.  ಆದರೂ ಅವರು ಯಾಜಕರು.  ಅವರ ಪವಿತ್ರ ಯಾಜಕ ದೀಕ್ಷೆಯ ಕಾರಣದಿಂದಾಗಿ ಪ್ರಭು ಅವರ ಮೂಲಕ ಸ್ಪಷ್ಟವಾದ…

ಚಿಂತನೆ 183: ದುಃಖದ ಮೌಲ್ಯಕ್ಕೆ ಗಮನ ಹರಿಸುವುದು

ನಾವು ದುಃಖ ಅನುಭವಿಸುವಾಗ, ಅದರಿಂದ ಹೊರಬರುವ ದಾರಿಯನ್ನು ಹುಡುಕುತ್ತೇವೆ.  ನಾವು ಪರಿಹಾರವನ್ನು ಬಯಸುತ್ತೇವೆ.  ಆದರೆ ಸ್ವರ್ಗದಿಂದ ನಾವು ಹಿಂದಿರುಗಿ ನೋಡಿ, ಸ್ವತಂತ್ರವಾಗಿ ಆರಿಸಿಕೊಂಡು ಸ್ವೀಕರಿಸಿದ ದುಃಖದ ಅಪಾರ ಶಕ್ತಿಯನ್ನು ಕಾಣಲು ಸಾಧ್ಯವಾಗುತ್ತದೆ.  ದುಃಖವು ತಾನಾಗಿಯೇ ಒಳ್ಳೆಯದು ಎಂದಲ್ಲ; ಬದಲಿಗೆ, ದುಃಖವು ವಿಮೋಚಿಸಲ್ಪಟ್ಟು, ಅದಕ್ಕೆ…

ಚಿಂತನೆ 182: ಅಹಂಕಾರದ ರಹಸ್ಯಗಳನ್ನು ಅರಿಯುವ ವಿವೇಕ

ಅಹಂಕಾರವು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಬಹುದು.  ಹಾಗಾದಾಗ ನಾವು ನಮ್ಮ ಬಗ್ಗೆಯೂ ನಮ್ಮ ಸ್ವಂತ ನೋವಿನ ಬಗ್ಗೆಯೂ ಮಾತ್ರ ಯೋಚಿಸುತ್ತೇವೆ.  ಬಹುಶಃ ಈ ಅನುಭವ ನಿಮಗೂ ಆಗಿರಬಹುದು.  ಬಹುಶಃ ನಿಮ್ಮ ಮನಸ್ಸಿಗೆ ಗಾಯವಾಗಿರಬಹುದು; ನೀವು ಆ ಗಾಯದ ಬಗ್ಗೆಯೇ ಕೊರಗುತ್ತಾ ಕುಳಿತಿರಬಹುದು.  ಅದು ನಿಮ್ಮ ಹೃದಯದಲ್ಲಿ ಕಹಿಯನ್ನು ಉಂಟುಮಾಡುತ್ತದೆ ಮತ್ತು ನೀವು ಆ ಗಾಯವನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ.  ಆದರೆ…

ಚಿಂತನೆ 180: ಯೇಸುವಿನ ಪಾಡುಗಳು

ಸುವಾರ್ತೆಗಳ ಪರಿಚಯವಿರುವ ನಾವು ಕೆಲವೊಮ್ಮೆ ಕ್ರಿಸ್ತರ ಯಾತನೆಗಳ ಬಗ್ಗೆ ಒಂದು ಬಗೆಯ ಉದಾಸೀನತೆಗೆ ಒಳಗಾಗಬಹುದು.  ಪ್ರತಿ ವರ್ಷ ಅವರ ಪಾಡುಗಳ ವೃತ್ತಾಂತವನ್ನು ಓದುವುದನ್ನು ನಾವು ಕೇಳುತ್ತೇವೆ; ಅವರ ಪಾಡುಗಳ ಅನೇಕ ಚಿತ್ರಗಳನ್ನು ನೋಡಿದ್ದೇವೆ. ಈ ಪರಿಚಯದ ಪರಿಣಾಮವಾಗಿ, ಅದು ನಮ್ಮ ಮೇಲೆ ಬೀರಬೇಕಾದ ಸೂಕ್ತ ಪರಿಣಾಮಕ್ಕೆ ನಾವು ಅವಕಾಶ ನೀಡದೆ ಹೋಗಬಹುದು…

ಧ್ಯಾನ 179: ಆಂತರಿಕ ನಿರಾನಂದವನ್ನು ಎದುರಿಸುವುದು

“ಪ್ರಭು ಕೊಡುವರು, ಪ್ರಭು ಹಿಂತೆಗೆದುಕೊಳ್ಳುವರು…” (ಯೋಬ 1:21).  ಇದು ಎಷ್ಟು ಸತ್ಯ!  ಜೀವನದಲ್ಲಿ ನಾವು ದೇವರ ಸಮೃದ್ಧ ಸಾಂತ್ವನವನ್ನು ಅನುಭವಿಸುವ ಸಂದರ್ಭಗಳಿವೆ.  ಅದು ಕುಟುಂಬದಲ್ಲಿ ಮಹಾ ಸಂತೋಷದ ಕ್ಷಣಗಳಲ್ಲಿರಬಹುದು, ಅಥವಾ ಇನ್ನೊಬ್ಬರ ನಿಬಂಧನೆಯಿಲ್ಲದ ಪ್ರೀತಿಯನ್ನು ನಾವು ಅನುಭವಿಸುವಾಗ ಇರಬಹುದು.  ಕೆಲವೊಮ್ಮೆ…

ಧ್ಯಾನ 178: ನಮ್ಮ ಸ್ವಂತ ಪ್ರಯತ್ನದಿಂದ ಮಾತ್ರ ಪವಿತ್ರತೆಯನ್ನು ಎಂದಿಗೂ ಸಾಧಿಸಲಾಗದು

ನೀವು ಪವಿತ್ರ ಜೀವನವನ್ನು ನಡೆಸಲು ಹಂಬಲಿಸುತ್ತೀರಾ?  ಹಾಗಿದ್ದರೆ, ನಿಮ್ಮ ಸ್ವಂತ ಪ್ರಯತ್ನದಿಂದ ಮಾತ್ರ ಇದನ್ನು ಸಾಧಿಸಲಾಗದು.  ನಿಮಗೆ ಇನ್ನೊಬ್ಬರ, ಅಷ್ಟೇ ಅಲ್ಲ, ಅನೇಕರ ಸಹಾಯ ಬೇಕು.  ಇತರರ ಪ್ರೀತಿಯ ಹಸ್ತದಿಂದ ಮಾರ್ಗದರ್ಶನ ಪಡೆಯಲು ಪ್ರಭು ನಮಗೆ ಅನೇಕ ಮಾರ್ಗಗಳನ್ನು ನೀಡಿದ್ದಾರೆ.  ಕೆಲವರು ಬಹುಕಾಲದ ಆಧ್ಯಾತ್ಮಿಕ ನಿರ್ದೇಶಕರನ್ನು ಹೊಂದುವ ಭಾಗ್ಯ ಪಡೆದಿದ್ದಾರೆ…