ಕನ್ನಡ

ಧ್ಯಾನಚಿಂತನೆ 40: ನಮ್ಮ ಪ್ರಭುವಿನ ಹೃದಯವನ್ನು ಪ್ರವೇಶಿಸುವುದು

ಧೂಳಿನ ಒಂದು ಕಣ ಅಥವಾ ಮರಳಿನ ಒಂದು ಕಣ ಹೆಚ್ಚಿನ ಸಂದರ್ಭಗಳಲ್ಲಿ ಅಷ್ಟೇನೂ ಮಹತ್ವದ್ದಲ್ಲ.  ಅಂಗಳದಲ್ಲಾಗಲಿ, ಮನೆಯ ನೆಲದ ಮೇಲೆಯೇ ಆಗಲಿ ಇರುವ ಒಂದೇ ಒಂದು ಕಣವನ್ನು ಯಾರೂ ಗಮನಿಸುವುದಿಲ್ಲ.  ಆದರೆ ಅವುಗಳಲ್ಲಿ ಯಾವುದಾದರೂ ಕಣ್ಣಿನೊಳಗೆ ಬಿದ್ದರೆ, ಆ ಕಣವು ತಕ್ಷಣವೇ ಗಮನಕ್ಕೆ ಬರುತ್ತದೆ.  ಏಕೆ?  ಏಕೆಂದರೆ…

ಚಿಂತನೆ 33: ಶುದ್ಧೀಕರಣದ ಕರುಣೆ

ದೇವರು ನಿಮ್ಮ ಆತ್ಮವನ್ನು ನೋಡುವಂತೆಯೇ ನೀವೂ ಅದನ್ನು ನೋಡಲು ಸಾಧ್ಯವಾದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಿ.  ನಿಮಗೆ ಏನು ಕಾಣಿಸುತ್ತದೆ?  ದೇವರು ನಿಮ್ಮ ಆತ್ಮವನ್ನು ಹೇಗೆ ನೋಡುತ್ತಿರಬಹುದು?  ನಿಶ್ಚಯವಾಗಿಯೂ ಅವರು ನಿಮ್ಮಲ್ಲಿ ತಮ್ಮ ಅಮೂಲ್ಯ ಮಗುವನ್ನು ಕಾಣುತ್ತಾರೆ ಮತ್ತು ಅತ್ಯಂತ ಪ್ರೀತಿಯಿಂದ ನಿಮ್ಮನ್ನು ನೋಡುತ್ತಾರೆ.  ಆದರೆ ಅವರು ನಿಮ್ಮ ಪಾಪವನ್ನೂ, ಅತಿ ಚಿಕ್ಕ ಪಾಪವನ್ನೂ ಸಹ ನೋಡುತ್ತಾರೆ.  ಈ ಪಾಪಗಳು, ಅತಿ ಚಿಕ್ಕ ಕುಂದುಕೊರತೆಯೂ ಸಹ…

ಚಿಂತನೆ 32: ಕ್ಷಮೆಯ ಕರುಣೆ

ಜೀವನದುದ್ದಕ್ಕೂ ಇತರರ ಪಾಪಗಳಿಂದ ನಿಮಗೆ ನೋವಾಗುತ್ತದೆ.  ಇದು ಅನಿವಾರ್ಯ.  ಈ ನೋವನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದೇ ಚಿಂತಿಸಬೇಕಾದ ನಿಜವಾದ ಪ್ರಶ್ನೆ.  ನೀವು ಅದನ್ನು ಹಿಡಿದಿಟ್ಟುಕೊಂಡು, ಅದರ ಬಗ್ಗೆಯೇ ಯೋಚಿಸುತ್ತಾ ಕೊರಗುವಿರಾ?  ಅಥವಾ ಕ್ಷಮಿಸುವಿರಾ?  ಆದರೆ ಕ್ಷಮಿಸಿದರೆ ಮಾತ್ರ ಸಾಲದು.  ದೈವಿಕ ಕರುಣೆಯು ನಿಮ್ಮ ಆತ್ಮದೊಳಗೆ ಎಷ್ಟು ಆಳವಾಗಿ ಪ್ರವೇಶಿಸಲು ನೀವು ಅವಕಾಶ ನೀಡಬೇಕೆಂದರೆ…

ಚಿಂತನೆ 342: ಶ್ರಮಾನುಭವದಿಂದ ದೊರೆಯುವ ನವಚೈತನ್ಯ

ಸಾಮಾನ್ಯವಾಗಿ ನಾವು “ಶ್ರಮಾನುಭವ” ಮತ್ತು “ನವಚೈತನ್ಯ” ಎಂಬ ಪದಗಳನ್ನು ಒಟ್ಟಿಗೆ ಬಳಸುವುದಿಲ್ಲ.  ಕ್ರಿಸ್ತರ ಶ್ರಮಾನುಭವವು ನವಚೈತನ್ಯವನ್ನು ನೀಡುವುದು ಹೇಗೆ?  ಲೌಕಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದು ಭಯಾನಕವೂ ದುಃಖಕರವೂ ಆಗಿದೆ.  ಪ್ರಭು ಅಪಾರವಾಗಿ ಯಾತನೆ ಅನುಭವಿಸಿದರು ಮತ್ತು ನಮ್ಮ ಧನ್ಯ ಮಾತೆಯೂ ಅತ್ಯಂತ ದುಃಖಭರಿತ…

ಚಿಂತನೆ 338: ರಹಸ್ಯವನ್ನು ಕಾಪಾಡುವುದು

ಇನ್ನೊಬ್ಬರಿಗೆ ನಾವು ತೋರಿಸಬಹುದಾದ ಪ್ರೀತಿಯ ಒಂದು ಕ್ರಿಯೆಯೆಂದರೆ ಅವರ ವಿಷಯಗಳನ್ನು ಗೌಪ್ಯವಾಗಿಡುವುದು.  ಜನರು ಸಮಸ್ಯೆಯೊಂದನ್ನು ಅಥವಾ ಗೊಂದಲವನ್ನು ಹೊತ್ತು ನಮ್ಮ ಬಳಿಗೆ ಬಂದು, ಅದನ್ನು ಯಾರಿಗೂ ಹೇಳಬಾರದೆಂದು ಕೇಳಿಕೊಂಡ ಅನುಭವ ನಮ್ಮೆಲ್ಲರಿಗೂ ಇದೆ.  ಈ ರೀತಿಯ ಪವಿತ್ರ ರಹಸ್ಯವನ್ನು ನೀವು ಕಾಪಾಡಬಲ್ಲಿರಾ?  ಗೌಪ್ಯತೆಯನ್ನು ಕಾಪಾಡುವುದು ಇತರರಿಗೆ ತೋರುವ ಅದ್ಭುತವಾದ ಕರುಣೆಯ ಕಾರ್ಯವಾಗಿದೆ.  ಒಂದು ವೇಳೆ…

ಚಿಂತನೆ 337: ಇತರರ ಆತಂಕವನ್ನು ನಿವಾರಿಸಲು ನೆರವಾಗುವುದು

ನಮ್ಮ ಜೀವನದಲ್ಲಿ ಆಗಾಗ ತಳಮಳಗೊಂಡಿರುವ, ವ್ಯಾಕುಲಗೊಂಡಿರುವ ಅಥವಾ ಚಿಂತೆಗೀಡಾಗಿರುವ ಜನರು ನಮಗೆ ಎದುರಾಗುವುದು ಬಹುತೇಕ ಖಚಿತ.  ಅವರು ಯಾವುದೋ ಒಂದು ವಿಷಯದ ಬಗ್ಗೆ ವಿಪರೀತವಾಗಿ ಯೋಚಿಸುತ್ತಿರಬಹುದು; ಅವರ ಆಲೋಚನೆಯು ಸ್ವಲ್ಪಮಟ್ಟಿಗೆ ತರ್ಕವಿಲ್ಲದ್ದೂ ಆಗಿರಬಹುದು.  ಕರುಣೆಯನ್ನು ತೋರಲು ಇದು ಎಂತಹ ಕೃಪಾಭರಿತ ಅವಕಾಶ!  ಆತಂಕ…

ಧ್ಯಾನ 335: ಸದಾ ಕ್ಷಮಿಸುವುದು 

ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸುವುದು ಮತ್ತು ಅವರನ್ನು ಅತ್ಯಂತ ಗೌರವ ಹಾಗೂ ಅನುಕಂಪದಿಂದ ಕಾಣುವುದು ಜೀವನದಲ್ಲಿ ಮಾಡಲು ಅತ್ಯಂತ ಕಷ್ಟವಾದ ಕಾರ್ಯಗಳಲ್ಲಿ ಒಂದು.  ಆದರೆ ಅವರನ್ನು ದ್ವೇಷಿಸುವುದರಿಂದ ಅಥವಾ ಅವರ ಮೇಲೆ ಕೋಪದಿಂದ ಹರಿಹಾಯುವುದರಿಂದ ಏನು ಪ್ರಯೋಜನ?  ಅವರಿಗೆ ಈ “ಹಾನಿ” ಮಾಡುವುದರಿಂದ ಅವರ ಆತ್ಮಕ್ಕಿಂತ ನಿಮ್ಮ ಸ್ವಂತ ಆತ್ಮಕ್ಕೇ ಹೆಚ್ಚು ಹಾನಿಯಾಗುತ್ತದೆ.  ಕ್ಷಮಿಸಿ…

ಧ್ಯಾನ 334: ಆತ್ಮಗಳ ಸೇವೆ

ನಮಗೆ ನೀಡಲಾಗಿರುವ ಅತ್ಯಂತ ದೊಡ್ಡ ಆಶೀರ್ವಾದಗಳಲ್ಲಿ ಒಂದು ಇತರರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ.  ನಾವು ಅನೇಕ ರೀತಿಗಳಲ್ಲಿ, ವಿಶೇಷವಾಗಿ ನಮ್ಮ ನಿರ್ದಿಷ್ಟ ಕರೆಯನುಸಾರ ಅವರಿಗೆ ಸೇವೆ ಸಲ್ಲಿಸುತ್ತೇವೆ.  ಆದರೆ ಒಬ್ಬ ವ್ಯಕ್ತಿಗೆ ನಾವು ಸಲ್ಲಿಸಬಹುದಾದ ಅತ್ಯಂತ ದೊಡ್ಡ ಸೇವೆಯೆಂದರೆ, ದೇವರ ಕರುಣೆಯ ಸೇವಕರಾಗಿ ಅವರನ್ನು ಮಹಿಮೆಗಳ ಕಡೆಗೆ ನಡೆಸುವುದು…