ಕನ್ನಡ

ಚಿಂತನೆ 91: ಇನ್ನೊಬ್ಬರಿಗಾಗಿ ಮಾಡುವ ಪ್ರಾರ್ಥನೆ ಬಾಗಿಲನ್ನು ತೆರೆಯುತ್ತದೆ

ಇನ್ನೊಬ್ಬರಿಗೆ ನಿಜವಾಗಿಯೂ ಏನು ಬೇಕು ಎಂಬುದು ದೇವರಿಗೆ ಮಾತ್ರ ತಿಳಿದಿದೆ.  ಈ ವಿಶೇಷ ಅನುಗ್ರಹವನ್ನು ದೇವರು ನಮಗೆ ನೀಡದಿದ್ದರೆ, ಇನ್ನೊಬ್ಬರ ಆತ್ಮವನ್ನು ಓದಿ ತಿಳಿಯಲು ನಮಗೆ ಸಾಧ್ಯವಿಲ್ಲ.  ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇತರರಿಗಾಗಿ ಉತ್ಕಟವಾಗಿ ಪ್ರಾರ್ಥಿಸಲು ಕರೆಯಲ್ಪಟ್ಟಿದ್ದೇವೆ.  ಕೆಲವೊಮ್ಮೆ, ನಾವು ತೆರೆದ ಮನಸ್ಸುಳ್ಳವರಾಗಿದ್ದರೆ, ಉತ್ಕಟವಾಗಿ ಪ್ರಾರ್ಥಿಸುವ ಅಗತ್ಯವನ್ನು ದೇವರು ನಮ್ಮ ಹೃದಯದಲ್ಲಿ ಮೂಡಿಸುವರು…

ಚಿಂತನೆ 90: ಎಲ್ಲರೊಂದಿಗೆ ಏಕತೆ

ನಾವು ಪರಸ್ಪರ ಏಕತೆಯಿಂದಿರಲು ಸೃಷ್ಟಿಸಲ್ಪಟ್ಟಿದ್ದೇವೆ.  ಏಕತೆಯ ಕೊರತೆಯಿದ್ದಾಗ, ಅದರ ಪರಿಣಾಮಗಳು ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಮತ್ತು ರಾಷ್ಟ್ರಗಳ ನಡುವೆ ಕಂಡುಬರುತ್ತವೆ.  ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಒಂದುಗೂಡಿಸುವುದು ಯಾವುದು?  ಮೊದಲನೆಯದಾಗಿ ಮತ್ತು ಮುಖ್ಯವಾಗಿ, ನಾವು ಇತರ ಆತ್ಮಗಳೊಂದಿಗೆ ಒಂದಾಗಿರುವುದು ನಮ್ಮ…

ಧ್ಯಾನ 89: ಉದಾರ ಪ್ರೀತಿಯ ಶಕ್ತಿ

ನಮ್ಮ ಪ್ರಾರ್ಥನೆಗಳ ಅಗತ್ಯವೂ ದೇವರ ಕರುಣೆಯ ಅಗತ್ಯವೂ ಇರುವ ಎಷ್ಟೋ ಆತ್ಮಗಳಿವೆ.  ಇವು ತಮ್ಮ ಪಾಪದಲ್ಲಿ ದೃಢವಾಗಿ ಸಿಲುಕಿಕೊಂಡಿರುವ ಆತ್ಮಗಳು.  ನಾವು ಅವರಿಗಾಗಿ ಪ್ರಾರ್ಥಿಸಬಹುದು, ಆದರೆ ಅದರಿಂದ ಅಷ್ಟೇನೂ ಪರಿಣಾಮವಾಗುತ್ತಿಲ್ಲವೆಂದು ತೋರುತ್ತದೆ.  ನಾವು ಇನ್ನೇನು ಮಾಡಬಹುದು?  ಕೆಲವೊಮ್ಮೆ, ಅತ್ಯಂತ ಶ್ರೇಷ್ಠವಾದ ಮಧ್ಯಸ್ಥ ಪ್ರಾರ್ಥನೆ…

ಚಿಂತನೆ 88: ಪರಿವರ್ತಿತ ಆಂತರಿಕ ಯಾತನೆ

ಅನೇಕ ಜನರು ತಮ್ಮ ಅಂತರಾಳದಲ್ಲಿ ಬಹಳ ಭಾರವಾದ ಹೊರೆಗಳನ್ನು ಹೊತ್ತಿರುತ್ತಾರೆ.  ಹೊರನೋಟಕ್ಕೆ ಅವರು ಆನಂದ ಮತ್ತು ಶಾಂತಿಯಿಂದ ಕಂಗೊಳಿಸಬಹುದು.  ಆದರೆ ಅವರ ಅಂತರಾಳದಲ್ಲಿ ತೀವ್ರ ನೋವೂ ಇರಬಹುದು.  ನಾವು ಕ್ರಿಸ್ತನನ್ನು ಅನುಸರಿಸುವಾಗ, ನಮ್ಮ ಆಂತರಿಕ ಮತ್ತು ಬಾಹ್ಯ ಜೀವನದ ಈ ಎರಡು ಅನುಭವಗಳು ಪರಸ್ಪರ ವಿರುದ್ಧವಾಗಿರುವುದಿಲ್ಲ.  ಅನೇಕ ಬಾರಿ…

ಧ್ಯಾನ 84: ಪವಿತ್ರ ಹೋಸ್ತಿ

ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಕ್ರಿಸ್ತರನ್ನು ನಾವು ಎಷ್ಟೇ ಆಳವಾಗಿ ಪ್ರೀತಿಸಿ ಆರಾಧಿಸಿದರೂ ಅದು ಸಾಕಾಗದು.  ಪರಮ ಪವಿತ್ರ ದಿವ್ಯಪ್ರಸಾದದಲ್ಲಿ ಉಪಸ್ಥಿತರಿರುವ ಅವರ ಮುಂದೆ ನಾವು ಇರುವಾಗ, ಮರೆಯಾದ ರೂಪದಲ್ಲಿ ಉಪಸ್ಥಿತರಿರುವ ಸರ್ವಶಕ್ತ ದೇವರನ್ನು ಕಾಣಬೇಕು.  ಅವರೇ: ಕರುಣೆ, ನಿತ್ಯಜೀವ, ನಿತ್ಯ…

ಚಿಂತನೆ 80: ನಮ್ಮ ಮರಣದ ಗಳಿಗೆಯಲ್ಲಿ

ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡಿದ್ದರೆ, ಈ ಲೋಕದಲ್ಲಿ ನಿಮ್ಮ ಕೊನೆಯ ಗಳಿಗೆಗಾಗಿ ಪ್ರಾರ್ಥಿಸಿದ್ದೀರಿ: “ಈಗಲೂ ನಮ್ಮ ಮರಣದ ಸಮಯದಲ್ಲಿಯೂ ನಮಗಾಗಿ ಪ್ರಾರ್ಥಿಸಿರಿ.”  ಮರಣವು ಅನೇಕರಿಗೆ ಭಯ ಹುಟ್ಟಿಸುತ್ತದೆ; ಸಾಮಾನ್ಯವಾಗಿ ನಮ್ಮ ಮರಣದ ಗಳಿಗೆಯ ಕುರಿತು ಯೋಚಿಸಲು ನಾವು ಬಯಸುವುದಿಲ್ಲ.  ಆದರೆ…

ಧ್ಯಾನ 75: ಇತರರಲ್ಲಿ ಕ್ರಿಸ್ತನನ್ನು ಎದುರುಗೊಳ್ಳುವುದು

ಪರಮಪ್ರಸಾದ ಸಂಸ್ಕಾರವು ನಿಜವಾಗಿಯೂ ಪವಿತ್ರವಾದುದು.  ಅದನ್ನು ಪೂಜ್ಯಭಾವದಿಂದ ಆರಾಧಿಸಲಾಗುತ್ತದೆ ಮತ್ತು ಅತ್ಯಂತ ಗೌರವದಿಂದ ಕಾಣಲಾಗುತ್ತದೆ.  ನಾವು ನಮ್ಮ ಪ್ರಭುವನ್ನು ಎಂದಿಗೂ ಎಸೆಯುವುದಿಲ್ಲ ಅಥವಾ ನೆಲದ ಮೇಲೋ ಅಗೌರವಕರವಾದ ಯಾವುದಾದರೂ ಸ್ಥಳದಲ್ಲೋ ಬಿಸಾಡುವುದಿಲ್ಲ.  ಆದರೂ, ಯೇಸುವಿಗೆ ನಾವು ತೋರಿಸುವ ಅದೇ ಗೌರವವನ್ನು ಇತರರಿಗೆ ತೋರಿಸಲು ಅನೇಕ ಬಾರಿ ವಿಫಲರಾಗುತ್ತೇವೆ…

ಧ್ಯಾನ 74: ಸಹಾನುಕಂಪವುಳ್ಳ ಹೃದಯ

“ಸಹಾನುಭೂತಿ” ಮತ್ತು “ಸಹಾನುಕಂಪ” ಇವುಗಳ ನಡುವೆ ವ್ಯತ್ಯಾಸವಿದೆಯೇ?  ಇದ್ದರೆ, ಆ ವ್ಯತ್ಯಾಸವೇನು?  ಮತ್ತು ಇವುಗಳಲ್ಲಿ ಹೆಚ್ಚು ಅಪೇಕ್ಷಣೀಯವಾದುದು ಯಾವುದು?  ಸಹಾನುಭೂತಿ ಎಂದರೆ ಸರಳವಾಗಿ ಇನ್ನೊಬ್ಬರಿಗಾಗಿ ನಾವು ದುಃಖಪಡುವುದು.  ಒಂದು ಅರ್ಥದಲ್ಲಿ, ನಾವು ಅವರ ಬಗ್ಗೆ ಮರುಕಪಡುತ್ತೇವೆ ಎಂದರ್ಥ.  ಆದರೆ ಸಹಾನುಕಂಪವು ಇದಕ್ಕಿಂತ ಬಹಳ ಮುಂದಕ್ಕೆ ಹೋಗುತ್ತದೆ.  ಅದರ ಅರ್ಥ ನಾವು…

ಚಿಂತನೆ 73: ಯೇಸುವಿಗಾಗಿ ನಮ್ಮ ಹಂಬಲದಲ್ಲಿ ಬೆಳೆಯುವುದು

ನಾವು ಯೇಸುವನ್ನು ಹೆಚ್ಚು ಹೆಚ್ಚು ಅರಿತಂತೆ, ಅವರಿಗಾಗಿ ನಮ್ಮ ಹಂಬಲವೂ ಹೆಚ್ಚುತ್ತದೆ.  ಅವರಿಗಾಗಿ ನಮ್ಮ ಹಂಬಲ ಹೆಚ್ಚಿದಂತೆ, ನಾವು ಅವರನ್ನು ಇನ್ನಷ್ಟು ಅರಿಯುತ್ತೇವೆ.  ಇದು ಅರಿಯುವುದು ಮತ್ತು ಹಂಬಲಿಸುವುದು, ಹಂಬಲಿಸುವುದು ಮತ್ತು ಅರಿಯುವುದರ ಸುಂದರವಾದ ಆವರ್ತಕ ಅನುಭವವಾಗಿದೆ (ದಿನಚರಿ #273 ನೋಡಿ)…

ಚಿಂತನ 60: ಆಧ್ಯಾತ್ಮಿಕ ಬರವನ್ನು ಎದುರಿಸುವುದು

ಕೆಲವೊಮ್ಮೆ ನಿಮ್ಮ ಆತ್ಮವು ಆಧ್ಯಾತ್ಮಿಕ ಬರದಲ್ಲಿರುವಂತೆ ನಿಮಗೆ ಅನಿಸುತ್ತದೆಯೇ?  ನಿಮ್ಮ ದೈನಂದಿನ ಜೀವನದಲ್ಲಿ ಇನ್ನಷ್ಟು ಆಧ್ಯಾತ್ಮಿಕ ಸಾಂತ್ವನ ದೊರೆಯಬೇಕೆಂದು ನೀವು ಬಯಸುತ್ತೀರಾ?  ಇದು ಸಾಮಾನ್ಯವಾದ ಹೋರಾಟ; ಇದರ ಬಗ್ಗೆ ನಾವು ಚಿಂತಿಸಬಾರದು.  ದೇವರ ಚಿತ್ತವನ್ನು ನೆರವೇರಿಸುವುದೇ ನಮ್ಮ ಆಧ್ಯಾತ್ಮಿಕ ಜೀವನದ ಮುಖ್ಯ ಗುರಿ.  ಅನೇಕ ಬಾರಿ…