ಕನ್ನಡ

ಚಿಂತನೆ 111: ದುಷ್ಟನ ಸುಳ್ಳುಗಳು

ಪಿಶಾಚನು ನಮ್ಮನ್ನು ಅನೇಕ ರೀತಿಗಳಲ್ಲಿ ಪ್ರಲೋಭಿಸುತ್ತಾನೆ.  ನಾವು ಪಾಪನಿವೇದನೆಯಲ್ಲಿ ಒಪ್ಪಿಕೊಂಡ ಪಾಪಗಳನ್ನೂ ಒಳಗೊಂಡಂತೆ ನಮ್ಮ ಪಾಪಗಳನ್ನು ನೆನಪಿಗೆ ತರುವುದು, ನಮ್ಮ ಮೇಲೆ ಆಕ್ರಮಣ ಮಾಡಲು ಪಿಶಾಚನು ಇಷ್ಟಪಡುವ ಒಂದು ಸಾಮಾನ್ಯ ವಿಧಾನವಾಗಿದೆ.  ನಾವು ತಪ್ಪು ದಾರಿಯಲ್ಲಿದ್ದೇವೆ, ನಾವು ದೇವರಿಗೆ ಮೆಚ್ಚುಗೆಯಾಗಿಲ್ಲ, ನಾವು ಸುಳ್ಳುಗಾರರು ಮತ್ತು ಪಾಪಿಗಳು ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುವುದರಲ್ಲಿ ಅವನು ಆನಂದಿಸುತ್ತಾನೆ.  ಮತ್ತು…

ಧ್ಯಾನ 105: ದೇವರು ಅಂತರಂಗದಲ್ಲಿ ನೆಲೆಸುವುದರ ಪರಿಣಾಮಗಳು

ದೇವರು ನಿಮ್ಮ ಆತ್ಮದ ಆಳದಲ್ಲಿ ಸಂಪೂರ್ಣವಾಗಿ ನೆಲೆಸಿದರೆ ನೀವು ಏನನ್ನು ಅನುಭವಿಸುವಿರಿ?  ಶಾಂತಿ, ಆನಂದ ಮತ್ತು ವಿಸ್ಮಯ!  ಈ ವರಗಳಿಂದ ಮತ್ತು ಪವಿತ್ರ ತ್ರಿತ್ವವು ನಿಮ್ಮೊಳಗೆ ನೆಲೆಸುವುದರಿಂದ, ಕಷ್ಟಗಳನ್ನು ಎದುರಿಸುವ ಧೈರ್ಯ, ಭಯವನ್ನು ತೊಲಗಿಸುವ ಶಕ್ತಿ ಮತ್ತು ಭೇದಿಸಲಾಗದ ರಕ್ಷಣೆ ನಿಮಗೆ ದೊರೆಯುವುದು…

ಧ್ಯಾನ 53: ಪ್ರಾರ್ಥನೆಯಲ್ಲಿನ ಕಷ್ಟಗಳು

ದಿನನಿತ್ಯ ಪ್ರಾರ್ಥಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವಾಗ ನಾವು ಆಂತರಿಕ ಮತ್ತು ಬಾಹ್ಯ ಕಷ್ಟಗಳನ್ನು ಎದುರಿಸುತ್ತೇವೆ.  ಆಂತರಿಕ ಕಷ್ಟಗಳು: ನಿರುತ್ಸಾಹ, ಆಧ್ಯಾತ್ಮಿಕ ಶುಷ್ಕತೆ, ಮನಸ್ಸಿನ ಭಾರ ಮತ್ತು ಪ್ರಲೋಭನೆಗಳು.  ತಾಳ್ಮೆ ಮತ್ತು ದೃಢಪ್ರಯತ್ನದಿಂದ ಈ ಕಷ್ಟಗಳನ್ನು ಜಯಿಸಬಹುದು.  ಬಾಹ್ಯ…

ಧ್ಯಾನ 39: ಆಧ್ಯಾತ್ಮಿಕ ಸಾಂತ್ವನವನ್ನು ಕಳೆದುಕೊಳ್ಳುವುದು

ನಾವು ಯೇಸುವನ್ನು ಅನುಸರಿಸುವುದರಿಂದ, ನಾವು ಮಾಡುವ ಎಲ್ಲದರಲ್ಲಿಯೂ ನಿರಂತರವಾಗಿ ಸಾಂತ್ವನ ಮತ್ತು ನೆಮ್ಮದಿ ದೊರೆಯಬೇಕು ಎಂಬ ಭಾವನೆಯ ಬಲೆಗೆ ಸುಲಭವಾಗಿ ಬೀಳಬಹುದು.  ಅದು ನಿಜವೇ?  ಹೌದು ಮತ್ತು ಇಲ್ಲ.  ಒಂದು ಅರ್ಥದಲ್ಲಿ, ನಾವು ಸದಾ ದೇವರ ಚಿತ್ತವನ್ನು ನೆರವೇರಿಸುತ್ತಾ, ಅದನ್ನು ನೆರವೇರಿಸುತ್ತಿದ್ದೇವೆ ಎಂದು ತಿಳಿದಿದ್ದರೆ, ನಮ್ಮ ಸಾಂತ್ವನ ನಿರಂತರವಾಗಿರುತ್ತದೆ.  ಆದರೆ…

ಚಿಂತನೆ 28: ಗೊಣಗುವ ಪ್ರಲೋಭನೆಗಳು

ಕೆಲವೊಮ್ಮೆ ನಮಗೆ ಗೊಣಗುವ ಪ್ರಲೋಭನೆ ಉಂಟಾಗುತ್ತದೆ.  ದೇವರನ್ನೂ ಅವರ ಪರಿಪೂರ್ಣ ಪ್ರೀತಿಯನ್ನೂ ಪರಿಪೂರ್ಣ ಯೋಜನೆಯನ್ನೂ ಪ್ರಶ್ನಿಸುವ ಪ್ರಲೋಭನೆ ಬಂದಾಗ, ಅದು ಕೇವಲ ಒಂದು ಪ್ರಲೋಭನೆ ಮಾತ್ರ ಎಂಬುದನ್ನು ತಿಳಿದುಕೊಳ್ಳಿ…

ಚಿಂತನೆ 364: ಮರಣಾಸನ್ನರಿಗಾಗಿ ಪ್ರಾರ್ಥನೆ

ನಿಮ್ಮ ನಿತ್ಯ ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಮರಣದ ಘಳಿಗೆಯು ಅತ್ಯಂತ ಮಹತ್ವದ್ದಾಗಿದೆ.  ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡುವಾಗ, ನಿರ್ದಿಷ್ಟವಾಗಿ ಈ ಪವಿತ್ರ ಘಳಿಗೆಗಾಗಿ ಪ್ರಾರ್ಥಿಸುತ್ತೀರಿ.  ಅದು ಪವಿತ್ರ ಘಳಿಗೆಯಾಗಿದೆ.  ಆದರೆ ಕದಿಯಲು ಪ್ರಯತ್ನಿಸುತ್ತಾ ದುಷ್ಟನು ಮತ್ತೊಮ್ಮೆ ನಿಮ್ಮ ಮೇಲೆ ಎರಗುವ ಘಳಿಗೆಯೂ ಅದಾಗಿದೆ…

ಚಿಂತನೆ 360: ಆಧ್ಯಾತ್ಮಿಕ ಹೋರಾಟ

ಪ್ರಲೋಭಕನಾದ ಸೈತಾನನು ನಿಜವಾಗಿಯೂ ಇದ್ದಾನೆ; ಆದರೆ ಅವನಿಗೆ ಭಯಪಡಬೇಕಾಗಿಲ್ಲ.  ನೀವು ಅವನಿಗೆ ಯಾವ ಗಮನವನ್ನೂ ಕೊಡಬಾರದು.  ಅವನ ಆಲೋಚನೆಗಳಲ್ಲಿ ತೊಡಗಬಾರದು.  ಅವನೊಂದಿಗೆ ಚೌಕಾಶಿ ಮಾಡಬಾರದು.  ಪ್ರಲೋಭನೆಗಳನ್ನು ಎದುರಿಸುವಾಗ ನಿಮ್ಮಲ್ಲಿ ಧೈರ್ಯ, ದೇವರ ಕರುಣೆಯಲ್ಲಿ ಭರವಸೆ ಮತ್ತು ನಿರೀಕ್ಷೆ ಇರಬೇಕು.  ಆಗಬೇಡಿ…

ಚಿಂತನೆ 346: ಇತರರ ವರಗಳು

ಇತರರ ಜೀವನದಲ್ಲಿರುವ ದೇವರ ವರಗಳನ್ನು ಗುರುತಿಸಿ, ಅದಕ್ಕಾಗಿ ಸಂತೋಷಪಡುವುದು ನೀವು ಅವರಿಗೆ ತೋರಿಸಬಹುದಾದ ಕರುಣೆಯ ಒಂದು ಕಾರ್ಯವಾಗಿದೆ.  ವಿಷಾದಕರವಾಗಿ, ಇತರರ ಬಗ್ಗೆ ಅಸೂಯೆ ಅಥವಾ ಈರ್ಷೆಪಡುವ ಪ್ರಲೋಭನೆ ಅನೇಕ ಬಾರಿ ಉಂಟಾಗಬಹುದು; ವಿಶೇಷವಾಗಿ ಅವರ ಪ್ರಕೃತಿಸಹಜ ಪ್ರತಿಭೆಗಳನ್ನು ಅಥವಾ ಅವರ ಜೀವನದಲ್ಲಿ ದೇವರ ಅನುಗ್ರಹವನ್ನು ನೀವು ಕಂಡಾಗ.  ಆದರೆ…

ಚಿಂತನ 340: ಪರೀಕ್ಷೆಗೆ ಒಳಗಾಗುವುದು

ಪರೀಕ್ಷೆಗೆ ಒಳಗಾಗುವುದು ಆ ಕ್ಷಣದಲ್ಲಿ ಹಿತಕರವೆನಿಸದಿರಬಹುದು; ಆದರೂ ಕೆಲವೊಮ್ಮೆ ಅದರಿಂದ ನಮಗೆ ಬಹಳ ಪ್ರಯೋಜನವಾಗುತ್ತದೆ.  ಪ್ರಭು ಇದನ್ನು ವಿವಿಧ ರೀತಿಗಳಲ್ಲಿ ಅನುಮತಿಸುತ್ತಾರೆ.  ಪರೀಕ್ಷೆಗೆ ಒಳಗಾಗುವುದು ಪ್ರಲೋಭನೆಯಲ್ಲ; ಬದಲಾಗಿ, ತಮ್ಮ ಪವಿತ್ರ ಚಿತ್ತಕ್ಕೆ ಇನ್ನಷ್ಟು ಆಳವಾಗಿ ವಿಧೇಯರಾಗಲು ನಮ್ಮನ್ನು ಆಹ್ವಾನಿಸುವುದಕ್ಕಾಗಿ ಪ್ರಭು ನಮಗೆ ಸಂಕಷ್ಟವನ್ನು ಸಹಿಸಿಕೊಳ್ಳಲು ಅವಕಾಶ ನೀಡುವ ಒಂದು ಮಾರ್ಗವಾಗಿದೆ.  ಯಾವಾಗ…