ಕನ್ನಡ

ಧ್ಯಾನ 53: ಪ್ರಾರ್ಥನೆಯಲ್ಲಿನ ಕಷ್ಟಗಳು

ದಿನನಿತ್ಯ ಪ್ರಾರ್ಥಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವಾಗ ನಾವು ಆಂತರಿಕ ಮತ್ತು ಬಾಹ್ಯ ಕಷ್ಟಗಳನ್ನು ಎದುರಿಸುತ್ತೇವೆ.  ಆಂತರಿಕ ಕಷ್ಟಗಳು: ನಿರುತ್ಸಾಹ, ಆಧ್ಯಾತ್ಮಿಕ ಶುಷ್ಕತೆ, ಮನಸ್ಸಿನ ಭಾರ ಮತ್ತು ಪ್ರಲೋಭನೆಗಳು.  ತಾಳ್ಮೆ ಮತ್ತು ದೃಢಪ್ರಯತ್ನದಿಂದ ಈ ಕಷ್ಟಗಳನ್ನು ಜಯಿಸಬಹುದು.  ಬಾಹ್ಯ…

ಧ್ಯಾನ 52: ದೈನಂದಿನ ಪ್ರಾರ್ಥನೆ

ನಿಮ್ಮ ಆತ್ಮವನ್ನು ಸುಂದರಗೊಳಿಸುವುದು ಯಾವುದು?  ಪ್ರಾರ್ಥನೆ.  ನಿಮ್ಮನ್ನು ಪಾಪದಿಂದ ದೂರವಿಡುವುದು ಯಾವುದು?  ಪ್ರಾರ್ಥನೆ.  ನಿಮ್ಮಲ್ಲಿ ಭರವಸೆಯನ್ನು ತುಂಬುವುದು ಯಾವುದು?  ಪ್ರಾರ್ಥನೆ.  ನಿಮ್ಮನ್ನು ಪವಿತ್ರತೆಯ ಹಾದಿಯಲ್ಲಿ ಮುನ್ನಡೆಸುವುದು ಯಾವುದು?  ಪ್ರಾರ್ಥನೆ.  ಪ್ರಾರ್ಥನೆಯೇ ಎಲ್ಲದಕ್ಕೂ ಕೀಲಿಕೈ.  ಪ್ರತಿದಿನವೂ ಪ್ರಾರ್ಥನೆಯಿಲ್ಲದೆ ನೀವು…

ಚಿಂತನೆ 51: ಶುದ್ಧ ಪ್ರೀತಿ

ನೀವು ಶುದ್ಧ ಪ್ರೀತಿಯಿಂದ ಪ್ರೀತಿಸುತ್ತೀರಾ? ಇಂತಹ ಪ್ರೀತಿ ಹೇಗಿರುತ್ತದೆ? ಶುದ್ಧ ಪ್ರೀತಿಯು ಕ್ರಿಸ್ತನ ಹೃದಯದಿಂದ ನೇರವಾಗಿ ನಿಮ್ಮ ಜೀವನಕ್ಕೆ ಹರಿದುಬಂದು, ನಿಮ್ಮ ಜೀವನದ ಮೂಲಕ ಹರಿಯುವ ಪ್ರೀತಿಯಾಗಿದೆ. ಈ ಪವಿತ್ರ ಪ್ರೀತಿಗೆ ಸುಂದರವಾದ ಲಕ್ಷಣಗಳಿವೆ. ಮೊದಲನೆಯದಾಗಿ, ಅದು ಸಮೃದ್ಧವಾಗಿದೆ. ನಾವು ಕ್ರಿಸ್ತನ ಹೃದಯದಿಂದ ಪ್ರೀತಿಸುವಾಗ ಧಾರಾಳವಾಗಿ ಪ್ರೀತಿಸುತ್ತೇವೆ. ಅಲ್ಲಿ…

ಚಿಂತನೆ 48: ಮೌನ

ನಮ್ಮ ನಾಲಿಗೆ ಇತರರನ್ನು ಬೆಳೆಸಲೂಬಹುದು, ಕುಗ್ಗಿಸಲೂಬಹುದು.  ನಮ್ಮ ನಾಲಿಗೆ ನಮ್ಮ ಸ್ವಂತ ಆತ್ಮದ ಮೇಲೂ ನೇರ ಪರಿಣಾಮ ಬೀರುತ್ತದೆ.  ನಾಲಿಗೆಯು ದೇವರಿಂದ ಪ್ರೇರಿತವಾದ ಮಾತುಗಳನ್ನು ನುಡಿಯುವಾಗ, ನಾವು ಪವಿತ್ರತೆಯಲ್ಲಿ ಬೆಳೆಯುತ್ತೇವೆ.  ನಾಲಿಗೆಯು ದೇವರಿಂದ ಬಂದಿರದ ಮಾತುಗಳನ್ನು ನುಡಿಯುವಾಗ, ನಮ್ಮ ಆತ್ಮಗಳಿಗೂ ಇತರರಿಗೂ ದೊಡ್ಡ ಹಾನಿಯನ್ನುಂಟುಮಾಡುತ್ತೇವೆ.  ಆ…

ಧ್ಯಾನ 45: ದಿವ್ಯಪ್ರಸಾದ ಸ್ವೀಕಾರ

ಕೆಲವೊಮ್ಮೆ ನಮಗೆ ದಿವ್ಯಬಲಿಗೆ ಹೋಗಬೇಕೆನಿಸುವುದಿಲ್ಲ ಅಥವಾ ಪರಮಪವಿತ್ರ ಸಂಸ್ಕಾರದ ಬಳಿಗೆ ಬರುವಾಗ ನಮ್ಮ ಮನಸ್ಸು ಬಹಳವಾಗಿ ಚಂಚಲವಾಗಿರಬಹುದು.  ಇಂತಹ ಸಂದರ್ಭದಲ್ಲಿ ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯಗಳಲ್ಲಿ ಒಂದು, ಬಹುಶಃ, ಪವಿತ್ರ ವಿಧೇಯತೆಯಲ್ಲಿ ಜೀವಿಸುವುದೇ ಆಗಿದೆ.  ಪ್ರತಿಯೊಂದು ಭಾನುವಾರವೂ ಪ್ರತಿಯೊಂದು ಪವಿತ್ರ ಹಬ್ಬದ ದಿನವೂ ನೀವು ದಿವ್ಯಪ್ರಸಾದವನ್ನು ಸ್ವೀಕರಿಸಬೇಕೆಂದು ಯೇಸು ಬಯಸುತ್ತಾರೆ…

ಚಿಂತನೆ 17: ಪ್ರಾರ್ಥನೆಯಲ್ಲಿ ನಮ್ಮ ಧನ್ಯ ಮಾತೆಯ ಮೊರೆಹೋಗಿ 

ಭರವಸೆಯಿಂದ ಪ್ರಾರ್ಥಿಸುತ್ತಾ ನಮ್ಮ ಧನ್ಯ ಮಾತೆಯ ಮೊರೆಹೋಗಿ.  ಅವರು ನಿಮ್ಮನ್ನು ತಮ್ಮ ವಿಮಲ ಹೃದಯದ ಬಳಿಯಲ್ಲಿ ಇರಿಸಿಕೊಂಡು, ತಮ್ಮ ಪುತ್ರನಾದ ಯೇಸುವಿನ ಬಳಿಗೆ ನಡೆಸುವರು.  ಅವರು ಪರಿಪೂರ್ಣ ತಾಯಿ, ಸಕಲ ಅನುಗ್ರಹಗಳ ಮಾತೆ.  ಅವರ ಮಾತೃವಾತ್ಸಲ್ಯದ ಆರೈಕೆ ಮತ್ತು ಮಧ್ಯಸ್ಥಿಕೆಯಲ್ಲಿ ಭರವಸೆಯಿಡಿ.  ಅನುಗ್ರಹಗಳ ಬಾಗಿಲನ್ನು ಹೇಗೆ ತೆರೆಯಬೇಕೆಂದು ಅವರಿಗೆ ತಿಳಿದಿದೆ…

ಚಿಂತನೆ 16: ದೇವರಿಗೆ ಸಂಪೂರ್ಣ ಆತ್ಮಸಮರ್ಪಣೆ

ದೇವರ ಮುಂದೆ ಅಡ್ಡಬೀಳಿರಿ. ಅವರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿರಿ. ಸಾಧ್ಯವಾದರೆ, ದೈಹಿಕವಾಗಿಯೇ ಹಾಗೆ ಮಾಡಿರಿ. ಅದು ಇತರರ ಗಮನಕ್ಕೆ ಭಂಗ ತರುವುದಾದರೆ, ಅಂತರಂಗದಲ್ಲಿ ಹಾಗೆ ಮಾಡಿರಿ. ದೇವರ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದು, ತಮ್ಮ ದೈವಿಕ ಕರುಣೆಯನ್ನೂ ಪರಮಪವಿತ್ರ ಚಿತ್ತವನ್ನೂ ನಿಮಗೆ ತೋರಿಸಬೇಕೆಂದು ಅವರನ್ನು ಬೇಡಿಕೊಳ್ಳಿರಿ.  ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ…

ಚಿಂತನೆ 8: ದೈವಿಕ ಕರುಣೆಯ ಜಪಮಾಲೆಯನ್ನು ಧ್ಯಾನಿಸುವುದು

ಸಂತ ಫೌಸ್ಟಿನಾರ ದಿನಚರಿಯು ವಿವಿಧ ರೀತಿಗಳಲ್ಲಿ ಭಕ್ತಿಯ ಹೊಸ ರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಮೂರನೆಯ ಮಾರ್ಗವು ದೈವಿಕ ಕರುಣೆಯ ಜಪಮಾಲೆಯ ಮೂಲಕವಾಗಿದೆ.  ಈ ಜಪಮಾಲೆಯು ಅಮೂಲ್ಯವಾದ ಕೊಡುಗೆಯಾಗಿದೆ. ಇದನ್ನು ಪ್ರತಿದಿನವೂ ಜಪಿಸಲು ನಾವು ಪ್ರಯತ್ನಿಸಬೇಕು…

ಧ್ಯಾನಚಿಂತನೆ 365: ಕರುಣೆಯ ರಾಣಿ

ಈ ಕೊನೆಯ ಧ್ಯಾನಚಿಂತನೆಯನ್ನು ಕರುಣೆಯ ರಾಣಿಯಾದ, ಅತ್ಯಂತ ಮಹಿಮಾವಂತ ದೇವಮಾತೆಗೆ ಸಮರ್ಪಿಸಲಾಗಿದೆ.  ಅವರು ಎಲ್ಲರಿಗಿಂತಲೂ ಹೆಚ್ಚಾಗಿ ದೇವರ ಕರುಣೆಯ ಪರಿಪೂರ್ಣ ಸಾಧನವಾಗಿದ್ದರು ಮತ್ತು ಇಂದಿಗೂ ಆಗಿದ್ದಾರೆ.  ಮಂಗಳವಾರ್ತೆಯ ಸಂದರ್ಭದಲ್ಲಿ ತಮ್ಮ ಸಮ್ಮತಿಯಿಂದ, ತಮ್ಮ “ಹೌದು” ಎಂಬ ಒಪ್ಪಿಗೆಯಿಂದ, ಕರುಣಾಸ್ವರೂಪನನ್ನೇ ಈ ಲೋಕಕ್ಕೆ ತಂದರು.  ಅವರು…

ಚಿಂತನೆ 364: ಮರಣಾಸನ್ನರಿಗಾಗಿ ಪ್ರಾರ್ಥನೆ

ನಿಮ್ಮ ನಿತ್ಯ ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಮರಣದ ಘಳಿಗೆಯು ಅತ್ಯಂತ ಮಹತ್ವದ್ದಾಗಿದೆ.  ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡುವಾಗ, ನಿರ್ದಿಷ್ಟವಾಗಿ ಈ ಪವಿತ್ರ ಘಳಿಗೆಗಾಗಿ ಪ್ರಾರ್ಥಿಸುತ್ತೀರಿ.  ಅದು ಪವಿತ್ರ ಘಳಿಗೆಯಾಗಿದೆ.  ಆದರೆ ಕದಿಯಲು ಪ್ರಯತ್ನಿಸುತ್ತಾ ದುಷ್ಟನು ಮತ್ತೊಮ್ಮೆ ನಿಮ್ಮ ಮೇಲೆ ಎರಗುವ ಘಳಿಗೆಯೂ ಅದಾಗಿದೆ…