ಕನ್ನಡ

ಧ್ಯಾನ 25: ಆಂತರಿಕ ಯಾತನೆ – ಕರುಣೆಯತ್ತ ಒಂದು ಮಾರ್ಗ

ದೇವರೊಂದಿಗಿನ ನಿಮ್ಮ ಸಂಬಂಧವು ಗಾಢವಾಗುತ್ತಾ ಹೋದಂತೆ, ನಿಮಗೆ ಅನೇಕ ಹೋರಾಟದ ಕ್ಷಣಗಳೂ ಅನೇಕ ಸಾಂತ್ವನದ ಕ್ಷಣಗಳೂ ಎದುರಾಗುತ್ತವೆ.  ಆಧ್ಯಾತ್ಮಿಕ ಶುಷ್ಕತೆ ಮತ್ತು ಆಂತರಿಕ ಯಾತನೆಯ ಕ್ಷಣಗಳಿಗೆ ಹೆದರಬೇಡಿ.  ಅವು ಅಗತ್ಯವಾಗಿವೆ ಮತ್ತು ಪವಿತ್ರತೆಯತ್ತ ನಡೆಸುವ ದೇವರ ವಿಧಾನದ ಭಾಗವಾಗಿವೆ…

ಧ್ಯಾನ 24: ನಿಮ್ಮ ಆತ್ಮದ ಶುದ್ಧೀಕರಣ

ನಾವು ಅನುಭವಿಸಬಹುದಾದ ಅತ್ಯಂತ ದೊಡ್ಡ ಯಾತನೆಯೆಂದರೆ ದೇವರಿಗಾಗಿ ಆತ್ಮದ ಹಂಬಲ.  ಶುದ್ಧಿಸ್ಥಳದಲ್ಲಿರುವವರು ದೇವರಿಗಾಗಿ ಹಂಬಲಿಸುತ್ತಾರೆ ಮತ್ತು ಇನ್ನೂ ಆತನನ್ನು ಪೂರ್ಣವಾಗಿ ಪಡೆದಿಲ್ಲವಾದ್ದರಿಂದ ಬಹಳವಾಗಿ ಯಾತನೆ ಅನುಭವಿಸುತ್ತಾರೆ.  ಅದೇ ಶುದ್ಧೀಕರಣಕ್ಕೆ ನಾವು ಇಲ್ಲಿಯೇ ಈಗಲೇ ಒಳಗಾಗಬೇಕು.  ನಾವು ದೇವರಿಗಾಗಿ ಹಂಬಲಿಸಲು ನಮ್ಮನ್ನು ತೆರೆದುಕೊಳ್ಳಬೇಕು.  ನಾವು…

ಧ್ಯಾನಚಿಂತನೆ 365: ಕರುಣೆಯ ರಾಣಿ

ಈ ಕೊನೆಯ ಧ್ಯಾನಚಿಂತನೆಯನ್ನು ಕರುಣೆಯ ರಾಣಿಯಾದ, ಅತ್ಯಂತ ಮಹಿಮಾವಂತ ದೇವಮಾತೆಗೆ ಸಮರ್ಪಿಸಲಾಗಿದೆ.  ಅವರು ಎಲ್ಲರಿಗಿಂತಲೂ ಹೆಚ್ಚಾಗಿ ದೇವರ ಕರುಣೆಯ ಪರಿಪೂರ್ಣ ಸಾಧನವಾಗಿದ್ದರು ಮತ್ತು ಇಂದಿಗೂ ಆಗಿದ್ದಾರೆ.  ಮಂಗಳವಾರ್ತೆಯ ಸಂದರ್ಭದಲ್ಲಿ ತಮ್ಮ ಸಮ್ಮತಿಯಿಂದ, ತಮ್ಮ “ಹೌದು” ಎಂಬ ಒಪ್ಪಿಗೆಯಿಂದ, ಕರುಣಾಸ್ವರೂಪನನ್ನೇ ಈ ಲೋಕಕ್ಕೆ ತಂದರು.  ಅವರು…

ಧ್ಯಾನ 361: ತ್ಯಾಗ ಮತ್ತು ಪ್ರಾರ್ಥನೆ

ಇದನ್ನು ಅರ್ಥಮಾಡಿಕೊಳ್ಳುವುದು ಮತ್ತು ನಂಬುವುದು ಕಷ್ಟವಾಗಬಹುದಾದರೂ, ನಿರ್ಮಲ ಪ್ರಾರ್ಥನೆಯೊಂದಿಗೆ ಒಂದಾದ ಆಂತರಿಕ ತ್ಯಾಗವು ಜಗತ್ತಿನಾದ್ಯಂತ ಸುವಾರ್ತೆಯ ಘೋಷಣೆಗೆ ಅಪಾರ ಒಳಿತನ್ನು ಉಂಟುಮಾಡುತ್ತದೆ.  ನಿಜವಾಗಿ, ಪ್ರತಿದಿನ ಆಂತರಿಕ ತ್ಯಾಗಗಳನ್ನು ಅರ್ಪಿಸುತ್ತಿದ್ದ ಪವಿತ್ರ ಆತ್ಮಗಳ ಶಕ್ತಿ ಧರ್ಮಪ್ರಚಾರಕರಿಗೆ ಇಲ್ಲದಿದ್ದರೆ…

ಚಿಂತನೆ 358: ದೇವರ ದ್ವಿವಿಧ ಕೊಡುಗೆ

ದೇವರ ಕರುಣೆಯ ಕುರಿತು ಮಾತನಾಡುವಾಗ ನಾವು ಅನೇಕ ಬಾರಿ ಪಾಪಗಳ ಕ್ಷಮೆಯ ಕುರಿತು ಮಾತನಾಡುತ್ತೇವೆ.  ಇದು ದೇವರ ಕರುಣೆಯ ಮೊದಲ ಕಾರ್ಯ.  ಅವರು ಪ್ರತಿಯೊಂದು ಪಾಪವನ್ನೂ, ಅತಿ ಸಣ್ಣ ಅಪೂರ್ಣತೆಯನ್ನೂ ಕಾಣುತ್ತಾರೆ. ಈ ಪಾಪಗಳು ನಮ್ಮ ಪ್ರಭುವಿಗೆ ಉಂಟುಮಾಡುವ ಯಾತನೆಯ ನಡುವೆಯೂ, ಅವರು ಕ್ಷಮಿಸಲು ಕರುಣೆಯನ್ನು ಧಾರಾಳವಾಗಿ ಸುರಿಸುತ್ತಾರೆ.  ಕ್ಷಮೆಯು…

ಚಿಂತನೆ 342: ಶ್ರಮಾನುಭವದಿಂದ ದೊರೆಯುವ ನವಚೈತನ್ಯ

ಸಾಮಾನ್ಯವಾಗಿ ನಾವು “ಶ್ರಮಾನುಭವ” ಮತ್ತು “ನವಚೈತನ್ಯ” ಎಂಬ ಪದಗಳನ್ನು ಒಟ್ಟಿಗೆ ಬಳಸುವುದಿಲ್ಲ.  ಕ್ರಿಸ್ತರ ಶ್ರಮಾನುಭವವು ನವಚೈತನ್ಯವನ್ನು ನೀಡುವುದು ಹೇಗೆ?  ಲೌಕಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದು ಭಯಾನಕವೂ ದುಃಖಕರವೂ ಆಗಿದೆ.  ಪ್ರಭು ಅಪಾರವಾಗಿ ಯಾತನೆ ಅನುಭವಿಸಿದರು ಮತ್ತು ನಮ್ಮ ಧನ್ಯ ಮಾತೆಯೂ ಅತ್ಯಂತ ದುಃಖಭರಿತ…

ಧ್ಯಾನಚಿಂತನೆ 332: ಶಿಲುಬೆಯಿಂದ ಎಂದಿಗೂ ಬೇಸರಗೊಳ್ಳಬೇಡಿ

ಪ್ರಭು ಸಂತ ಫೌಸ್ತೀನಾಳೊಂದಿಗೆ ಕಷ್ಟಸಂಕಟಗಳ ಕುರಿತು ಬಹಳವಾಗಿ ಮಾತನಾಡುತ್ತಾರೆ.  ಅವಳು ಅವಮಾನಗಳಿಂದಲೂ ದೈಹಿಕ ಅನಾರೋಗ್ಯದಿಂದಲೂ ಬಹಳವಾಗಿ ನರಳಿದಳು.  ಅವಳ ಕಷ್ಟಸಂಕಟಗಳು ತಮ್ಮ ಶಿಲುಬೆಯೊಡನೆ ಐಕ್ಯವಾದಾಗ ಮಹಾ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಅವಳಿಗೆ ನೆನಪಿಸುವುದರಲ್ಲಿ ಯೇಸು ಎಂದಿಗೂ ಬೇಸರಗೊಳ್ಳಲಿಲ್ಲ.  ಈ ಸಂದೇಶವನ್ನು ಎಂದಿಗೂ…