ಚಿಂತನೆ 182: ಅಹಂಕಾರದ ರಹಸ್ಯಗಳನ್ನು ಅರಿಯುವ ವಿವೇಕ
ಅಹಂಕಾರವು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಬಹುದು. ಹಾಗಾದಾಗ ನಾವು ನಮ್ಮ ಬಗ್ಗೆಯೂ ನಮ್ಮ ಸ್ವಂತ ನೋವಿನ ಬಗ್ಗೆಯೂ ಮಾತ್ರ ಯೋಚಿಸುತ್ತೇವೆ. ಬಹುಶಃ ಈ ಅನುಭವ ನಿಮಗೂ ಆಗಿರಬಹುದು. ಬಹುಶಃ ನಿಮ್ಮ ಮನಸ್ಸಿಗೆ ಗಾಯವಾಗಿರಬಹುದು; ನೀವು ಆ ಗಾಯದ ಬಗ್ಗೆಯೇ ಕೊರಗುತ್ತಾ ಕುಳಿತಿರಬಹುದು. ಅದು ನಿಮ್ಮ ಹೃದಯದಲ್ಲಿ ಕಹಿಯನ್ನು ಉಂಟುಮಾಡುತ್ತದೆ ಮತ್ತು ನೀವು ಆ ಗಾಯವನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಆದರೆ…