ಕನ್ನಡ

ಧ್ಯಾನ 81: ಶಕ್ತಿ ಮತ್ತು ಕರುಣೆ

ಸಂಪೂರ್ಣ ಅಧಿಕಾರವನ್ನು ಹೊಂದಿರುವ, ಜೊತೆಗೆ ಬಹಳ ಕೋಪಿಷ್ಠನೂ ದುಷ್ಟನೂ ಪ್ರತೀಕಾರ ಮನೋಭಾವದವನೂ ಆಗಿರುವ ಒಂದು ದೇಶದ ಸರ್ವಾಧಿಕಾರಿಯನ್ನು ಕಲ್ಪಿಸಿಕೊಳ್ಳಿ.  ಇಂಥ ವ್ಯಕ್ತಿಯನ್ನು ಕೆರಳಿಸಲು ನೀವು ಬಯಸುವುದಿಲ್ಲ.  ಈಗ ಇದಕ್ಕೆ ತದ್ವಿರುದ್ಧವಾದುದನ್ನು ಕಲ್ಪಿಸಿಕೊಳ್ಳಿ.  ಸಂಪೂರ್ಣ ಅಧಿಕಾರವನ್ನು ಹೊಂದಿರುವುದರ ಜೊತೆಗೆ ಪರಿಶುದ್ಧವಾದ ಹೃದಯದ ವರವನ್ನೂ ಪಡೆದಿರುವ ಒಬ್ಬರನ್ನು ಕಲ್ಪಿಸಿಕೊಳ್ಳಿ…

ಚಿಂತನೆ 79: ನಮ್ಮ ಧನ್ಯ ವ್ಯಾಕುಲ ಮಾತೆ

ಮಾತೆ ಮರಿಯಳು ಜೀವನದಲ್ಲಿ ಬಹಳಷ್ಟನ್ನು ಸಹಿಸಿಕೊಂಡಳು.  ತನ್ನ ರಕ್ಷಕನನ್ನು ಅದ್ಭುತವಾಗಿ ಗರ್ಭಧರಿಸಿದಾಗ ಆಕೆ ಸಂಶಯವನ್ನೂ ಅಪಹಾಸ್ಯವನ್ನೂ ಸಹಿಸಿಕೊಂಡಳು.  ತನ್ನ ದೈವಪುತ್ರನನ್ನು ಜನರು ತಿರಸ್ಕರಿಸಿ ತಪ್ಪಾಗಿ ಅರ್ಥಮಾಡಿಕೊಂಡಾಗ, ಆಕೆ ಪರಿಪೂರ್ಣ ಮಾತೃಪ್ರೀತಿಯಿಂದ ಅದನ್ನು ನೋಡಿದಳು.  ಆತನ ಯಾತನೆ ಮತ್ತು ಮರಣದಲ್ಲಿ ಆಕೆ ಆತನ ಜೊತೆಯಲ್ಲಿದ್ದಳು.  ಮತ್ತು ಇವೆಲ್ಲದರ ನಡುವೆಯೂ…

ಚಿಂತನೆ 17: ಪ್ರಾರ್ಥನೆಯಲ್ಲಿ ನಮ್ಮ ಧನ್ಯ ಮಾತೆಯ ಮೊರೆಹೋಗಿ 

ಭರವಸೆಯಿಂದ ಪ್ರಾರ್ಥಿಸುತ್ತಾ ನಮ್ಮ ಧನ್ಯ ಮಾತೆಯ ಮೊರೆಹೋಗಿ.  ಅವರು ನಿಮ್ಮನ್ನು ತಮ್ಮ ವಿಮಲ ಹೃದಯದ ಬಳಿಯಲ್ಲಿ ಇರಿಸಿಕೊಂಡು, ತಮ್ಮ ಪುತ್ರನಾದ ಯೇಸುವಿನ ಬಳಿಗೆ ನಡೆಸುವರು.  ಅವರು ಪರಿಪೂರ್ಣ ತಾಯಿ, ಸಕಲ ಅನುಗ್ರಹಗಳ ಮಾತೆ.  ಅವರ ಮಾತೃವಾತ್ಸಲ್ಯದ ಆರೈಕೆ ಮತ್ತು ಮಧ್ಯಸ್ಥಿಕೆಯಲ್ಲಿ ಭರವಸೆಯಿಡಿ.  ಅನುಗ್ರಹಗಳ ಬಾಗಿಲನ್ನು ಹೇಗೆ ತೆರೆಯಬೇಕೆಂದು ಅವರಿಗೆ ತಿಳಿದಿದೆ…

ಧ್ಯಾನ 4: ಮಾನವಾವತಾರ ಮತ್ತು ಜನನ

ದೇವರ ನಿತ್ಯಪುತ್ರನು ಪೂಜ್ಯ ಕನ್ಯೆ ಮರಿಯಳ ಗರ್ಭದಲ್ಲಿ ಮಾನವ ಶರೀರವನ್ನು ಧರಿಸಿದಾಗ, ಮಾನವ ಸ್ವಭಾವವು ಶಾಶ್ವತವಾಗಿ ಬದಲಾಯಿತು. ಮಾನವಕುಲದೊಂದಿಗೆ ತಮ್ಮನ್ನು ಒಂದುಗೂಡಿಸಿಕೊಳ್ಳುವ ಮೂಲಕ ದೇವರು ನಮ್ಮ ಘನತೆಯನ್ನು ಉನ್ನತಿಗೇರಿಸಿದರು…