ಚಿಂತನೆ 91: ಇನ್ನೊಬ್ಬರಿಗಾಗಿ ಮಾಡುವ ಪ್ರಾರ್ಥನೆ ಬಾಗಿಲನ್ನು ತೆರೆಯುತ್ತದೆ
ಇನ್ನೊಬ್ಬರಿಗೆ ನಿಜವಾಗಿಯೂ ಏನು ಬೇಕು ಎಂಬುದು ದೇವರಿಗೆ ಮಾತ್ರ ತಿಳಿದಿದೆ. ಈ ವಿಶೇಷ ಅನುಗ್ರಹವನ್ನು ದೇವರು ನಮಗೆ ನೀಡದಿದ್ದರೆ, ಇನ್ನೊಬ್ಬರ ಆತ್ಮವನ್ನು ಓದಿ ತಿಳಿಯಲು ನಮಗೆ ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇತರರಿಗಾಗಿ ಉತ್ಕಟವಾಗಿ ಪ್ರಾರ್ಥಿಸಲು ಕರೆಯಲ್ಪಟ್ಟಿದ್ದೇವೆ. ಕೆಲವೊಮ್ಮೆ, ನಾವು ತೆರೆದ ಮನಸ್ಸುಳ್ಳವರಾಗಿದ್ದರೆ, ಉತ್ಕಟವಾಗಿ ಪ್ರಾರ್ಥಿಸುವ ಅಗತ್ಯವನ್ನು ದೇವರು ನಮ್ಮ ಹೃದಯದಲ್ಲಿ ಮೂಡಿಸುವರು…